ಯೆರೆಮೀಯ 30:14 - ಕನ್ನಡ ಸಮಕಾಲಿಕ ಅನುವಾದ14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವುದಿಲ್ಲ. ನಿನ್ನ ಅಕ್ರಮಗಳು ಬಹಳವೂ, ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದ ಶತ್ರುವಿನ ಗಾಯದಿಂದಲೂ, ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನಿನ್ನ ವಿುಂಡರಾರೂ ನಿನ್ನನ್ನು ಹುಡುಕುವದಿಲ್ಲ, ಮರೆತುಬಿಟ್ಟರು; ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನೀವು ಅನೇಕ ಜನಾಂಗಗಳೊಡನೆ ಸ್ನೇಹ ಮಾಡಿದಿರಿ. ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ. ನಿಮ್ಮ ‘ಸ್ನೇಹಿತರು’ ನಿಮ್ಮನ್ನು ಮರೆತಿದ್ದಾರೆ. ನಾನು ಶತ್ರುವಿನಂತೆ ನಿಮ್ಮನ್ನು ನೋಯಿಸಿದೆ. ನಾನು ನಿಮಗೆ ಬಹಳ ಕಠಿಣವಾದ ಶಿಕ್ಷೆಯನ್ನು ಕೊಟ್ಟೆ. ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ. ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ. ಅಧ್ಯಾಯವನ್ನು ನೋಡಿ |
ಆಗ ನೀನು ನಿರ್ಜನನಾದಾಗ ಏನು ಮಾಡುವೆ? ನೀನು ಕಡುಕೆಂಪು ಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡರೇನು? ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು? ನೀವು ವ್ಯರ್ಥವಾಗಿ ನಿನ್ನನ್ನು ಅಲಂಕರಿಸಿಕೊಳ್ಳುತ್ತಿ. ನಿನ್ನ ಪ್ರೇಮಿಗಳು ನಿನ್ನನ್ನು ತಿರಸ್ಕರಿಸುತ್ತಾರೆ; ಅವರು ನಿನ್ನನ್ನು ಕೊಲ್ಲಲು ಬಯಸುತ್ತಾರೆ.