Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 26:4 - ಕನ್ನಡ ಸಮಕಾಲಿಕ ಅನುವಾದ

4 ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾನೆ, ನೀವು ನನಗೆ ಕಿವಿಗೊಡದೆ, ನಾನು ನಿಮ್ಮ ಮುಂದೆ ಇಟ್ಟ ನನ್ನ ನಿಯಮದಲ್ಲಿ ನಡೆದುಕೊಳ್ಳದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನೀನು ಅವರಿಗೆ, ‘ಯೆಹೋವನು ಇಂತೆನ್ನುತ್ತಾನೆ, ನೀವು ನನ್ನ ಕಡೆಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟಿರುವ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯಬೇಕೆಂಬ ಮಾತನ್ನು ಕೇಳದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನೀನು ಅವರಿಗೆ ಹೀಗೆ ಹೇಳು - ಯೆಹೋವನು ಇಂತೆನ್ನುತ್ತಾನೆ - ನೀವು ನನ್ನ ಕಡೆಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟಿರುವ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನೀನು ಅವರಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿಮಗೆ ನನ್ನ ಧರ್ಮೋಪದೇಶಗಳನ್ನು ಕೊಟ್ಟಿದ್ದೇನೆ. ನೀವು ಅವುಗಳನ್ನು ಪಾಲಿಸಬೇಕು; ಅನುಸರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 26:4
22 ತಿಳಿವುಗಳ ಹೋಲಿಕೆ  

“ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ ಕೈಗೊಂಡು ನಡೆಯದೆ ನನ್ನಿಂದ ದೂರಹೋಗಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ,


ಈ ದಿನದವರೆಗೂ ಅವರು ತಗ್ಗಿಸಿಕೊಳ್ಳಲಿಲ್ಲ, ಭಯಪಡಲಿಲ್ಲ. ನಾನು ನಿಮ್ಮ ಮುಂದೆಯೂ, ನಿಮ್ಮ ತಂದೆಗಳ ಮುಂದೆಯೂ ಇಟ್ಟ ನನ್ನ ನಿಯಮದಲ್ಲಿ ನಡೆಯಲಿಲ್ಲ.


ಆದರೆ ನೀವು ತಿರಸ್ಕರಿಸಿ ತಿರುಗಿಬಿದ್ದರೆ, ಖಡ್ಗದ ಬಾಯಿಗೆ ತುತ್ತಾಗುವಿರಿ,” ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.


ದೇವರ ವಾಗ್ದಾನ ಮತ್ತು ಆಣೆ ಇವೆರಡೂ ಬದಲಾಗದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಸುಳ್ಳಾಡುವವರಲ್ಲ. ಇದರಿಂದಾಗಿ, ದೇವರ ಆಶ್ರಯವನ್ನು ಹೊಂದುವುದಕ್ಕೆ ಓಡಿಬಂದಿರುವ ನಾವು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಳ್ಳಲು ಬಲವಾದ ಉತ್ತೇಜನ ಉಂಟಾಯಿತು.


ನಾನು ಅವರ ಪಿತೃಗಳಿಗೆ ಪ್ರಮಾಣ ಮಾಡಿದಂಥ, ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ, ಅವರು ತಿಂದು ತೃಪ್ತರಾಗಿ ಕೊಬ್ಬಿದವರಾದಾಗ, ಅವರು ಅನ್ಯದೇವರುಗಳ ಕಡೆಗೆ ತಿರುಗಿಕೊಂಡು, ಅವುಗಳನ್ನು ಪೂಜಿಸಿ, ನನಗೆ ಕೋಪವನ್ನೆಬ್ಬಿಸಿ, ನನ್ನ ಒಡಂಬಡಿಕೆಯನ್ನು ಮೀರುವರು.


ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ಆಜ್ಞಾವಿಧಿಗಳನ್ನು ಕಾಪಾಡಿ ನಡೆದುಕೊಳ್ಳಬೇಕು.


ಮೋಶೆಯು ಇಸ್ರಾಯೇಲರ ಮುಂದೆ ಇಟ್ಟ ದೇವರ ನಿಯಮವು ಇದೇ.


ಇದಲ್ಲದೆ ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನಿಯಮದ ಪ್ರಕಾರ ನೀತಿ ಮತ್ತು ನ್ಯಾಯನಿಯಮಗಳುಳ್ಳ ದೊಡ್ಡ ಜನಾಂಗ ಯಾವುದು?


ಆದರೆ ನೀವು ಸಬ್ಬತ್ ದಿನವನ್ನು ಪರಿಶುದ್ಧಮಾಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು, ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದರೆ ಯೆರೂಸಲೇಮಿನ ದ್ವಾರಗಳಲ್ಲಿ ಬೆಂಕಿಯನ್ನು ಹಚ್ಚುವೆನು. ಅದು ಆರಿಹೋಗದೆ, ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.’ ”


ಆದರೆ ನೀವು ಈ ವಾಕ್ಯಗಳನ್ನು ಕೇಳದೆ ಹೋದರೆ, ಈ ಅರಮನೆ ಹಾಳಾಗುವುದು ಎಂದು ನನ್ನ ಮೇಲೆ ಆಣೆ ಇಡುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ.’ ”


ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನಿಮ್ಮ ನಿಯಮದಲ್ಲಿ ನಡೆದುಕೊಳ್ಳಲಿಲ್ಲ. ಮಾಡಬೇಕೆಂದು ನೀವು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಲಿಲ್ಲ. ಆದ್ದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀರಿ.


ನೀವು ಧೂಪ ಸುಟ್ಟು, ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಯೆಹೋವ ದೇವರ ಮಾತನ್ನು ಕೇಳದೆ, ದೈವನಿಯಮವನ್ನೂ, ದೈವತೀರ್ಪುಗಳನ್ನೂ, ದೈವಷರತ್ತುಗಳನ್ನೂ ಅನುಸರಿಸದೆ, ದೇವರಿಗೆ ವಿಧೇಯರಾಗದೆ ಇದ್ದುದರಿಂದಲೇ, ಈ ಕೇಡು ಈ ದಿನ ನಿಮಗೆ ಸಂಭವಿಸಿದೆ,” ಎಂದನು.


ಆದಕಾರಣ ನನ್ನ ಹೆಸರಿನಿಂದ ಕರೆಯಲಾದಂಥ ಮತ್ತು ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ, ನಿಮ್ಮ ಪಿತೃಗಳಿಗೆ ಕೊಟ್ಟ ಸ್ಥಳಕ್ಕೂ, ಶೀಲೋವಿಗೆ ಮಾಡಿದ ಹಾಗೆ ಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು