Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 26:3 - ಕನ್ನಡ ಸಮಕಾಲಿಕ ಅನುವಾದ

3 ಒಂದು ವೇಳೆ ಅವರು ಕೇಳಿ, ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವುದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪ ಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿಕೊಂಡಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗೆ ಮಾಡಿದರೆ ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗಾದರೆ ಅವರ ದುಷ್ಕೃತ್ಯಗಳ ನಿವಿುತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವರು ನನ್ನ ಸಂದೇಶವನ್ನು ಕೇಳಿ ಅದರಂತೆ ನಡೆಯಬಹುದು; ತಮ್ಮ ಕೆಟ್ಟ ಜೀವನವನ್ನು ತ್ಯಜಿಸಿ ಸನ್ಮಾರ್ಗವನ್ನು ಹಿಡಿಯಬಹುದು. ಅವರು ಪರಿವರ್ತನೆ ಹೊಂದಿದರೆ ನಾನು ಅವರನ್ನು ಶಿಕ್ಷಿಸಬೇಕೆಂದು ಮಾಡಿದ ಯೋಚನೆಗಳನ್ನು ಬದಲಾಯಿಸುವೆನು. ಅವರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದರಿಂದ ಅವರನ್ನು ಶಿಕ್ಷಿಸಬೇಕೆಂದು ನಾನು ಯೋಚಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 26:3
15 ತಿಳಿವುಗಳ ಹೋಲಿಕೆ  

ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.


ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ: “ಯೆಹೋವ ದೇವರೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನು ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು. ನೀವು ಕೃಪೆಯೂ ಅನುಕಂಪವೂ ಪ್ರೀತಿಯಲ್ಲಿ ಐಶ್ವರ್ಯವುಳ್ಳ ದೇವರೆಂದೂ ಕೇಡಿನ ವಿಷಯವಾಗಿ ಮನಮರುಗುವವರೆಂದೂ ನನಗೆ ತಿಳಿದಿತ್ತು.


ಒಂದು ವೇಳೆ ಅವರ ವಿಜ್ಞಾಪನೆ ಯೆಹೋವ ದೇವರ ಮುಂದೆ ಬಂದೀತು. ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು. ಏಕೆಂದರೆ ಯೆಹೋವ ದೇವರು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ, ಉರಿಯೂ ಅಪಾರವಾಗಿದೆ.”


“ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ಜೀವಮಾನದಲ್ಲಿ ಆ ಕೇಡನ್ನು ಬರಮಾಡದೆ, ಅವನ ಮಗನ ಕಾಲದಲ್ಲಿ ಅವನ ಮನೆಯ ಮೇಲೆ ಬರಮಾಡುವೆನು,” ಎಂದನು.


ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ, ಅವನು ತನ್ನ ವಸ್ತ್ರಗಳನ್ನು ಹರಿದು, ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನತೆಯಿಂದ ನಡೆದನು.


ಹೀಗಿರುವುದರಿಂದ ನಿಮ್ಮ ಮಾರ್ಗಗಳನ್ನೂ, ನಿಮ್ಮ ಕೃತ್ಯಗಳನ್ನೂ ತಿದ್ದಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿರಿ. ಆಗ ಯೆಹೋವ ದೇವರು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು.


“ಆದ್ದರಿಂದ ಮನುಷ್ಯಪುತ್ರನೇ, ನೀನು ಸಲಕರಣೆಗಳನ್ನು ಸಿದ್ಧಮಾಡಿ, ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿಹೋಗು, ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿಗಳಾದವರ ಮನೆತನದವರಾದರೂ, ಒಂದು ವೇಳೆ ಅರ್ಥಮಾಡಿಕೊಳ್ಳಬಹುದು.


ನನ್ನ ಕೋಪದ ಉರಿಯನ್ನು ನಾನು ತೀರಿಸುವುದಿಲ್ಲ. ನಾನು ಎಫ್ರಾಯೀಮನ್ನು ತಿರುಗಿ ನಾಶಮಾಡುವುದಿಲ್ಲ. ಏಕೆಂದರೆ ನಾನು ಮನುಷ್ಯನಲ್ಲ, ದೇವರೇ. ನಿನ್ನ ಮಧ್ಯದಲ್ಲಿ ಪರಿಶುದ್ಧನಾಗಿದ್ದೇನೆ. ನಾನು ಅವರ ಪಟ್ಟಣಗಳ ವಿರುದ್ಧ ಬರುವುದಿಲ್ಲ.


ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು?


ಯೆಹೂದದ ಅರಸನಾದ ಹಿಜ್ಕೀಯನೂ, ಎಲ್ಲಾ ಯೆಹೂದ್ಯರೂ ಅವನನ್ನು ಕೊಂದು ಹಾಕಿದರೋ? ಇಲ್ಲವೇ ಇಲ್ಲ. ಅವನು ಯೆಹೋವ ದೇವರಿಗೆ ಭಯಪಟ್ಟು, ಯೆಹೋವ ದೇವರ ಸಮ್ಮುಖದಲ್ಲಿ ಮೊರೆಯಿಟ್ಟನಲ್ಲವೋ? ಆಮೇಲೆ ಯೆಹೋವ ದೇವರು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು!” ಎಂದರು.


“ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು, ನ್ಯಾಯವನ್ನೂ, ನೀತಿಯನ್ನೂ ನಡೆಸಿದರೆ, ಅವನು ಸಾಯದೆ ಖಂಡಿತವಾಗಿ ಬದುಕುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು