Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 24:7 - ಕನ್ನಡ ಸಮಕಾಲಿಕ ಅನುವಾದ

7 ನಾನೇ ಯೆಹೋವನೆಂದು ನನ್ನನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಹಿಂದಿರುಗಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಾನೇ ಸರ್ವೇಶ್ವರ ಎಂದು ಒಪ್ಪಿಕೊಳ್ಳುವ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು. ಅವರು ನನ್ನತ್ತ ಮನಪೂರ್ವಕವಾಗಿ ಹಿಂದಿರುಗಿ ಬರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅವರಲ್ಲಿ ನನ್ನನ್ನು ಅರಿತುಕೊಳ್ಳುವ ಬಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಬುದನ್ನು ಅವರು ತಿಳಿದುಕೊಳ್ಳುವರು. ಅವರು ನನ್ನ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಬಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 24:7
32 ತಿಳಿವುಗಳ ಹೋಲಿಕೆ  

ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.


‘ನೀವು ನನಗೆ ಪ್ರಜೆಯಾಗಿರುವಿರಿ. ನಾನು ನಿಮಗೆ ದೇವರಾಗಿರುವೆನು.’ ”


ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.


ನಾನು ಅವರನ್ನು ತರುವೆನು. ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು. ನಾನು ಅವರಿಗೆ ನಂಬಿಗಸ್ತನೂ, ನೀತಿವಂತನೂ ಆದ ದೇವರಾಗಿರುವೆನು.”


ಆದರೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಒಪ್ಪಿಸಿದ ಬೋಧನೆಗೆ ಹೃದಯದಿಂದ ವಿಧೇಯರಾದುದ್ದಕ್ಕಾಗಿ, ದೇವರಿಗೆ ಸ್ತೋತ್ರವಾಗಲಿ.


ಆಗ ಸಮುಯೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ, “ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರ ಕಡೆಗೆ ತಿರುಗಿ, ನಿಮ್ಮಲ್ಲಿರುವ ಅನ್ಯದೇವರುಗಳನ್ನೂ, ಅಷ್ಟೋರೆತನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ, ನಿಮ್ಮ ಹೃದಯವನ್ನು ಯೆಹೋವ ದೇವರಿಗೆ ಸಿದ್ಧಮಾಡಿ, ಅವರೊಬ್ಬರನ್ನೇ ಸೇವಿಸಿದರೆ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಗಳೊಳಗಿಂದ ತಪ್ಪಿಸುವರು,” ಎಂದನು.


ನನ್ನ ಗುಡಾರವು ಸಹ ಅವರೊಂದಿಗಿರುವುದು. ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.


ಈ ಮೂರನೆಯ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ, ಬೆಳ್ಳಿಯನ್ನು ಶುದ್ಧ ಮಾಡುವಂತೆ ಶುದ್ಧಮಾಡುವೆನು. ಬಂಗಾರವನ್ನು ಶೋಧಿಸುವ ಪ್ರಕಾರ ಅವರನ್ನು ಶೋಧಿಸುವೆನು. ಅವರು ನನ್ನ ಹೆಸರನ್ನು ಕರೆಯುವರು. ನಾನು ಅವರಿಗೆ ಉತ್ತರಕೊಡುವೆನು. ನಾನು, ‘ಇವರು ನನ್ನ ಜನರೆಂದು ಹೇಳುವೆನು,’ ‘ಯೆಹೋವ ದೇವರು ನಮ್ಮ ದೇವರು’ ಎಂದು ಅವರು ಹೇಳುವರು,” ಎಂದು ಹೇಳುತ್ತೇನೆ.


ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.


ಆಕಾಶಗಳನ್ನು ನೆಡುವುದಕ್ಕೂ, ಭೂಮಿಯ ಅಸ್ತಿವಾರವನ್ನು ಹಾಕುವುದಕ್ಕೂ, ಚೀಯೋನಿಗೆ ನೀನು ನನ್ನ ಜನರೆಂದು ಹೇಳುವುದಕ್ಕೂ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು, ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.”


ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,


ಅದರ ಬದಲು ಅವರು ಅದಕ್ಕಿಂತ ಉತ್ತಮವಾದ ಪರಲೋಕದ ದೇಶವನ್ನು ನಿರೀಕ್ಷಿಸಿದರು. ಆದ್ದರಿಂದ ದೇವರು ಅವರ ದೇವರೆನಿಸಿಕೊಳ್ಳುವುದಕ್ಕೆ ನಾಚಿಕೊಳ್ಳದೆ ಅವರಿಗಾಗಿ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾರೆ.


ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು


ಆದರೆ ನಾನು ಇದನ್ನು ಅವರಿಗೆ, “ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು; ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೆಯದಾಗುವಂತೆ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ,” ಎಂದು ಆಜ್ಞಾಪಿಸಿ ಹೇಳಿದೆನು.


ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ, ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ, ನನ್ನ ಪ್ರಜೆಯಾಗುವಿರಿ; ನಾನು ನಿಮ್ಮ ದೇವರಾಗಿರುವೆನು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನಲ್ಲಿ ಎಪ್ಪತ್ತು ವರ್ಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿಸುವೆನು. ನನ್ನ ಒಳ್ಳೆಯ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ, ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು.


ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ, ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವುದರಿಂದ ಅವರು ನನ್ನ ಜನರಾಗಿರುವರು, ಅವರಿಗೆ ನಾನು ದೇವರಾಗಿರುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”


ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು. ಆದ್ದರಿಂದ ನಾನೇ ಯೆಹೋವ ದೇವರೆಂದು ನಿಮಗೆ ಗೊತ್ತಾಗುವುದು.


ಹೀಗೆ ಇಸ್ರಾಯೇಲನ ಮನೆತನದವರು ಯೆಹೋವ ದೇವರಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವರಾಗಿರುವೆನು ಎಂದು ತಿಳಿಯುವರು.


“ಆದ್ದರಿಂದ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಶ್ಚಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ, ನೀವು ಚದರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ. ಇಸ್ರಾಯೇಲ್ ದೇಶವನ್ನು ನಿಮಗೆ ತಿರುಗಿ ಕೊಡುವೆನು.’


ಭೂಮಿಯು ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೇಳುವುವು. ಅವು ಇಜ್ರೆಯೇಲಿಗೆ ಒಲಿಯುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು