Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 23:16 - ಕನ್ನಡ ಸಮಕಾಲಿಕ ಅನುವಾದ

16 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿಗೊಡಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಯೆಹೋವ ದೇವರ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನವನ್ನು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಸೇನಾಧೀಶ್ವರನಾದ ಯೆಹೋವನು, “ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಮನಸ್ಸಿಗೆ ಬಂದದ್ದನ್ನೇ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸರ್ವಶಕ್ತ ಸರ್ವೇಶ್ವರನ ನುಡಿಯಿದು: “ಪ್ರವಾದಿಗಳು ನಿಮಗೆ ಹೇಳುವ ಮಾತುಗಳನ್ನು ಕೇಳಬೇಡಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಂಬಿಕೆ ನಿರೀಕ್ಷೆಯನ್ನು ಹುಟ್ಟಿಸುತ್ತಾರಷ್ಟೆ. ಸರ್ವೇಶ್ವರನ ಬಾಯಿಂದ ಹೊರಟದ್ದನ್ನು ನುಡಿಯದೆ ತಮ್ಮ ಸ್ವಂತ ಮನಸ್ಸಿಗೆ ತೋಚಿದ್ದನ್ನೇ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ; ನಿಮ್ಮಲ್ಲಿ ವ್ಯರ್ಥನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಹೃದಯಕ್ಕೆ ಹೊಳೆದದ್ದನ್ನೇ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಬೇಡಿರಿ. ಅವರು ನಿಮ್ಮನ್ನು ಮರುಳುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ದರ್ಶನಗಳ ಬಗ್ಗೆ ಹೇಳುತ್ತಾರೆ. ಅವರ ದರ್ಶನಗಳು ಅವರ ಮನಸ್ಸಿನಿಂದ ಬಂದವುಗಳೇ ಹೊರತು ನನ್ನಿಂದ ಬಂದವುಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 23:16
26 ತಿಳಿವುಗಳ ಹೋಲಿಕೆ  

ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳುಗಳನ್ನು ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಆಜ್ಞೆಕೊಡಲಿಲ್ಲ. ಅವರ ಸಂಗಡ ಮಾತಾಡಲಿಲ್ಲ. ಸುಳ್ಳಿನ ದರ್ಶನವನ್ನೂ, ಶಕುನವನ್ನೂ, ಮಾಯ ಮಂತ್ರವನ್ನೂ, ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.


“ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು, ಯೆಹೋವ ದೇವರು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.


“ಕುರಿಯ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆ. ಏಕೆಂದರೆ ಅವರು ಒಳಗೆ ಕ್ರೂರವಾದ ತೋಳಗಳಾಗಿದ್ದಾರೆ.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುತ್ತಿರುವ ಮೂರ್ಖ ಪ್ರವಾದಿಗಳೇ ನಿಮಗೆ ಕಷ್ಟ!


ಪ್ರಿಯ ಸ್ನೇಹಿತರೇ, ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.


ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ; ಆದರೂ ಅವರು ತಮ್ಮ ಸಂದೇಶದೊಂದಿಗೆ ಓಡಿದ್ದಾರೆ ನಾನು ಅವರ ಸಂಗಡ ಮಾತನಾಡಲಿಲ್ಲ. ಆದರೂ ಪ್ರವಾದಿಸಿದರು.


ದೇವರ ಕಟ್ಟಳೆಗಳನ್ನೂ, ದೇವರು ತಮ್ಮ ಪಿತೃಗಳ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಅವರಿಗೆ ಹೇಳಿದ ಎಚ್ಚರಿಕೆಯನ್ನೂ ತಿರಸ್ಕರಿಸಿದರು. ಅವರು ವ್ಯರ್ಥವಾದ ವಿಗ್ರಹಗಳನ್ನು ಹಿಂಬಾಲಿಸಿ, ನಿಷ್ಪ್ರಯೋಜಕರಾದರು. “ನೀವು ಅವರ ಹಾಗೆ ಮಾಡಬೇಡಿರಿ,” ಎಂದು ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ್ದರೂ, ಅವರು ತಮ್ಮ ಸುತ್ತಲಿನ ಜನರನ್ನೇ ಅನುಸರಿಸಿದರು.


ಒಬ್ಬ ಸುಳ್ಳುಗಾರನೂ ಮೋಸಗಾರನೂ ಬಂದು, ‘ನಿನಗೆ ದ್ರಾಕ್ಷಾರಸವೂ ಮದ್ಯಪಾನವೂ ಯಥೇಚ್ಛವಾಗಿ ದೊರೆಯುವುದೆಂದು ನಾನು ಪ್ರವಾದಿಸುವೆನು,’ ಎಂದು ಹೇಳಿದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.


ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರವರೆಗೆ ಇರುವುದು? ಹೌದು, ಅವರು ತಮ್ಮ ಮನಸ್ಸಿನ ಭ್ರಮೆಗಳನ್ನು ಪ್ರವಾದಿಸುವವರೇ.


ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಯೆಹೋವ ದೇವರು ಮಾತನಾಡದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ’ ಎಂದು ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ.


ಆದ್ದರಿಂದ ನೀವು ಇನ್ನು ಮೇಲೆ ಸುಳ್ಳು ದರ್ಶನಗಳನ್ನು ಕಾಣುವುದಿಲ್ಲ ಮತ್ತು ಸುಳ್ಳು ದೈವೋಕ್ತಿಗಳನ್ನು ಅಭ್ಯಾಸಿಸುವುದಿಲ್ಲ. ಏಕೆಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ಬಿಡಿಸುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.’ ”


ಯೆರೂಸಲೇಮಿನ ವಿಷಯ ಪ್ರವಾದಿಸಿ, ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ಇರುವುದಿಲ್ಲವೆಂದೂ, ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.” ’


ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ.


ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ, ವ್ಯರ್ಥವಾಗುವ ಹಾಗೆ ನನ್ನಲ್ಲಿ ಏನು ತಪ್ಪನ್ನು ಕಂಡಿದ್ದಾರೆ?


ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.


ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು.


ಇದನ್ನು ಗ್ರಹಿಸುವ ಜ್ಞಾನಿಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಯೆಹೋವ ದೇವರ ಬಾಯಿ ಯಾರ ಸಂಗಡ ಮಾತನಾಡಿತು? ದೇಶವು ಯಾವುದಕ್ಕಾಗಿ ನಾಶವಾಗಿ ಹಾದು ಹೋಗುವವನಿಲ್ಲದೆ ಮರುಭೂಮಿಯ ಹಾಗೆ ಹಾಳಾಯಿತು?


ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ. ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಅವಳ ಪ್ರಭುಗಳು ಇತರ ಜನಾಂಗಗಳ ಮಧ್ಯೆ ಇರುವರು. ಇನ್ನು ದೈವನಿಯಮವು ನಿಂತುಹೋಗಿವೆ. ಆಕೆಯ ಪ್ರವಾದಿಗಳು ಸಹ ಯೆಹೋವ ದೇವರಿಂದ ದರ್ಶನವನ್ನು ಕಂಡುಕೊಳ್ಳುವುದಿಲ್ಲ.


ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.


ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.


ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು