Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 22:10 - ಕನ್ನಡ ಸಮಕಾಲಿಕ ಅನುವಾದ

10 ಮರಣ ಹೊಂದಿದ ಅರಸನಿಗಾಗಿ ಅಳಬೇಡಿರಿ. ಅವನಿಗಾಗಿ ಗೋಳಾಡಬೇಡಿರಿ. ಹೊರಟು ಹೋದವನಿಗಾಗಿ ಬಹಳವಾಗಿ ಅಳಿರಿ. ಏಕೆಂದರೆ ಅವನು ತಿರುಗಿ ಬರುವುದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಸತ್ತವನಿಗಾಗಿ ಅಳಬೇಡಿರಿ, ಗೋಳಾಡಬೇಡಿರಿ; ಸೆರೆಯಾದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂಮಿಯನ್ನು ನೋಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ಸತ್ತವನಿಗಾಗಿ (ಯೋಷೀಯನಿಗಾಗಿ) ಅಳಬೇಡಿ ಅವನಿಗಾಗಿ ಗೋಳಾಡಬೇಡಿ. ಬದಲಿಗೆ ಸೆರೆಹೋದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ ಇನ್ನು ಅವನು ಹಿಂತಿರುಗನು ಸ್ವಂತ ನಾಡನ್ನು ಮತ್ತೆ ನೋಡನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಸತ್ತವನಿಗಾಗಿ ಅಳಬೇಡಿರಿ, ಬಡುಕೊಳ್ಳಬೇಡಿರಿ; ಸೆರೆಯಾದವನಿಗೇ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂವಿುಯನ್ನು ನೋಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಸತ್ತ ರಾಜನ ಬಗ್ಗೆ ಅಳಬೇಡಿ. ಅವನಿಗೋಸ್ಕರ ಅಳಬೇಡಿ. ಆದರೆ ಇಲ್ಲಿಂದ ಹೋಗುತ್ತಿರುವ ರಾಜನ ಬಗ್ಗೆ ಗಟ್ಟಿಯಾಗಿ ರೋಧಿಸಿರಿ. ಅವನು ಮತ್ತೆ ಇಲ್ಲಿಗೆ ಬರುವದಿಲ್ಲ. ಆದ್ದರಿಂದ ಅವನಿಗೋಸ್ಕರ ರೋಧಿಸಿರಿ. ಯೋಹಾಜನು ತನ್ನ ಜನ್ಮಭೂಮಿಯನ್ನು ಮತ್ತೆಂದಿಗೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 22:10
19 ತಿಳಿವುಗಳ ಹೋಲಿಕೆ  

ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ, ಈ ಸ್ಥಳದಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದೇ ಇಲ್ಲ.


ಆದಕಾರಣ ನಾನು ಇದನ್ನು ನೋಡಿ ಜೀವದಿಂದ ಇರುವವರಿಗಿಂತ, ಮೃತಪಟ್ಟವರೇ ಮೇಲು ಎಂದು ನಾನು ತೀರ್ಮಾನಿಸಿದೆ.


ಖಡ್ಗದಿಂದ ಹತರಾದವರು ಹಸಿವೆಯಿಂದ ಹತರಾದವರಿಗಿಂತಲೂ ಲೇಸು. ಏಕೆಂದರೆ, ಇವರು ಭೂಮಿಯ ಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದು, ಕ್ಷಯಿಸಿ ಹೋದರು.


ನೀತಿವಂತನು ನಾಶವಾಗುವನು ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು. ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾದರು ಎಂಬುದನ್ನು ಯಾರೂ ಯೋಚಿಸರು.


ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.


ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ.


ಆದ್ದರಿಂದ ಯೋಷೀಯನ ಮಗ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವರು ಅವನನ್ನು ಕುರಿತು ಗೋಳಾಡಿ, ‘ಅಯ್ಯೋ, ನನ್ನ ಸಹೋದರನೇ, ಅಯ್ಯೋ, ನನ್ನ ಸಹೋದರಿಯೇ,’ ಎಂದು ಅನ್ನುವುದಿಲ್ಲ. ‘ಅಯ್ಯೋ, ದೊರೆಯೇ, ಅಯ್ಯೋ, ಅವನ ವೈಭವವೇ,’ ಎಂದು ಅವನನ್ನು ಕುರಿತು ಗೋಳಾಡುವುದಿಲ್ಲ.


ಇದಲ್ಲದೆ ಈಜಿಪ್ಟ್ ಅರಸನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಯೆಹೂದದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ನೆಕೋವನು ಎಲ್ಯಾಕೀಮನ ಸಹೋದರನಾದ ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು.


ಸತ್ತವನಿಗಾಗಿ ದುಃಖ ಪಡುವವರನ್ನು ಸಂತೈಸುವುದಕ್ಕೋಸ್ಕರ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ, ತಾಯಿಯನ್ನಾಗಲಿ ಕಳೆದುಕೊಂಡವರಿಗೂ ಕೂಡ ಯಾರೂ ಸಾಂತ್ವನದ ಪಾನಪಾತ್ರೆಯನ್ನು ನೀಡುವುದಿಲ್ಲ.


“ಆದ್ದರಿಂದ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರಿ.’


ಯೆಹೂದದ ಅರಸನಾದ ಯೆಹೋಯಾಕೀಮನ ಮಗ ಯೆಕೊನ್ಯನನ್ನು ಬಾಬಿಲೋನಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನ ನೊಗವನ್ನು ಮುರಿದುಬಿಡುವೆನು.”


ಇಸ್ರಾಯೇಲಿನ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಯೆರೂಸಲೇಮಿನ ಮೇಲೆ ಹೇಗೆ ಸುರಿಯಿತೋ, ಹಾಗೆಯೇ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೇ, ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ಸ್ಥಳವನ್ನು ನೀವು ಮತ್ತೆ ನೋಡಲಾರಿರಿ.’


ಈಜಿಪ್ಟ್ ದೇಶಕ್ಕೆ ಅಲ್ಲಿ ವಾಸಿಸುವುದಕ್ಕೆ ಹೋಗಿರುವ ಯೆಹೂದದ ಉಳಿದಿರುವವರು ತಾವು ತಿರುಗಿಕೊಂಡು, ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿದರೂ, ಒಬ್ಬನಾದರೂ ಯೆಹೂದ ದೇಶಕ್ಕೆ ಹಿಂದಿರುಗುವುದಿಲ್ಲ. ಓಡಿಹೋಗುವ ಸ್ವಲ್ಪ ಜನರೇ ಅಲ್ಲದೆ ಇನ್ಯಾರೂ ಹಿಂತಿರುಗುವುದಿಲ್ಲ,” ಎಂಬುದು.


“ಮನುಷ್ಯಪುತ್ರನೇ, ಒಂದೇ ಏಟಿನಿಂದ ನೇತ್ರಾನಂದವಾಗಿರುವುದನ್ನು ನಿನ್ನಿಂದ ತೆಗೆಯುತ್ತೇನೆ. ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.


ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ಸಹಾಯಮಾಡಲು ಯೂಫ್ರೇಟೀಸ್ ನದಿಯವರೆಗೆ ಹೋದನು. ಅರಸನಾದ ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದಾಗ, ನೆಕೋ ಅವನನ್ನು ಎದುರಿಸಿ ಮೆಗಿದ್ದೋವಿನಲ್ಲಿ ಕೊಂದುಹಾಕಿದನು.


ಆದರೆ ಅವರು ತಿರುಗಿ ಬರುವುದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂದಿರುಗಲಾರರು,” ಎಂದು ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು