ಯೆರೆಮೀಯ 21:6 - ಕನ್ನಡ ಸಮಕಾಲಿಕ ಅನುವಾದ6 ಈ ಪಟ್ಟಣದ ನಿವಾಸಿಗಳನ್ನೂ, ಮನುಷ್ಯರನ್ನೂ, ಮೃಗಗಳನ್ನೂ ಸಹಿತವಾಗಿ ಹೊಡೆಯುವೆನು. ಅವರು ದೊಡ್ಡ ವ್ಯಾಧಿಯಿಂದ ಸಾಯುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಮತ್ತು ಪಶುಗಳನ್ನೂ ಬಾಧಿಸುವೆನು, ಘೋರವ್ಯಾಧಿಯು ಅವರನ್ನು ಸಾಯಿಸುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಈ ನಗರದಲ್ಲಿ ವಾಸಮಾಡುವ ಜನರನ್ನೂ ಜಾನುವಾರುಗಳನ್ನೂ ಹಿಂಸೆಗೆ ಗುರಿಪಡಿಸುವೆನು; ಘೋರ ಜಾಡ್ಯಕ್ಕೆ ತುತ್ತಾಗಿಸಿ ಸಾಯುವಂತೆ ಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಪಶುಗಳನ್ನೂ ಬಾಧಿಸುವೆನು; ಘೋರವ್ಯಾಧಿಯು ಸಾಯಿಸುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿ |
“ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಪ್ರತಿಯೊಬ್ಬನು ತನ್ನ ಸಹೋದರನಿಗೂ, ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವುದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಖಡ್ಗ, ಬರ, ವ್ಯಾಧಿ ಇವುಗಳಿಗಾಗಿಯೇ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಯೆಹೋವ ದೇವರು ಹೇಳುತ್ತಾರೆ ಮತ್ತು ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನೂ ತಿರಸ್ಕಾರ ಹೊಂದುವಂತೆ ಮಾಡುವೆನು.