Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 20:1 - ಕನ್ನಡ ಸಮಕಾಲಿಕ ಅನುವಾದ

1 ಯೆರೆಮೀಯನು ಈ ಮಾತುಗಳನ್ನು ಪ್ರವಾದಿಸಲಾಗಿ, ಯೆಹೋವ ದೇವರ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗ ಪಷ್ಹೂರನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೆರೆಮೀಯ ಈ ಪ್ರವಾದನೆ ಮಾಡುವುದನ್ನು ಇಮ್ಮೇರನ ಮಗ ಹಾಗು ಸರ್ವೇಶ್ವರನ ಆಲಯದ ಮುಖ್ಯಾಧಿಕಾರಿಯಾದ ಯಾಜಕ ಪಷ್ಹೂರನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆರೆಮೀಯನು ಈ ಪ್ರವಾದನೆ ಮಾಡುವದನ್ನು ಯಾಜಕ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಪಷ್ಹೂರನೆಂಬುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಧಿಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನ್ನು ಪಷ್ಹೂರನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 20:1
11 ತಿಳಿವುಗಳ ಹೋಲಿಕೆ  

ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;


ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು.


ಈ ವರದಿಯನ್ನು ಕೇಳಿದಾಗ, ದೇವಾಲಯದ ಕಾವಲುಗಾರರ ದಳಪತಿಯೂ ಮುಖ್ಯಯಾಜಕರೂ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು.


ಪೇತ್ರ ಮತ್ತು ಯೋಹಾನರು ಜನರೊಂದಿಗೆ ಮಾತನಾಡುತ್ತಿದ್ದಾಗಲೇ, ಯಾಜಕರೂ ದೇವಾಲಯದ ದಳಪತಿಯೂ ಸದ್ದುಕಾಯರೂ ಅವರ ಬಳಿಗೆ ಬಂದರು.


ಹಾಗೆಯೇ ಅವನ ಪ್ರಧಾನರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ, ಜೆಕರ್ಯನೂ, ಯೆಹೀಯೇಲನೂ ಪಸ್ಕದ ಬಲಿಗೋಸ್ಕರ ಎರಡು ಸಾವಿರದ ಆರುನೂರು ಪಸ್ಕದ ಬಲಿಗಳನ್ನೂ, ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.


ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;


ಪಷ್ಹೂರನೇ, ನೀನೂ, ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ. ಬಾಬಿಲೋನಿಗೆ ಹೋಗಿ ಅಲ್ಲಿಯೇ ಸಾಯುವೆ. ಅಲ್ಲಿಯೇ ಸಮಾಧಿಯಾಗುವೆ. ನಿನಗೂ, ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವುದು.’ ”


‘ಏಕೆಂದರೆ, ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯನಿಗೆ ಯೆಹೋವ ದೇವರ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ, ನೀನು ಅಂಥವರನ್ನು ಕೋಳದಲ್ಲಿಯೂ, ಸೆರೆಯಲ್ಲಿಯೂ ಇಡುವ ಹಾಗೆಯೂ, ಯೆಹೋವ ದೇವರು ಯಾಜಕನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕನಾಗಿ ಇಟ್ಟಿದ್ದಾರೆ.


ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು