Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 2:29 - ಕನ್ನಡ ಸಮಕಾಲಿಕ ಅನುವಾದ

29 “ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಯೆಹೋವನು ಹೀಗೆನ್ನುತ್ತಾನೆ, “ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀರಿ? ನೀವೆಲ್ಲರೂ ನನಗೆ ದ್ರೋಹಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ನಿಮ್ಮ ದೂರೇನು? ನೀವೆಲ್ಲರು ನನಗೆ ದ್ರೋಹಿಗಳಾದಿರಿ, ಏಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಯೆಹೋವನು ಹೀಗನ್ನುತ್ತಾನೆ - ಏಕೆ ನನ್ನೊಡನೆ ವ್ಯಾಜ್ಯವಾಡುತ್ತೀರಿ? ನೀವೆಲ್ಲರೂ ನನಗೆ ದ್ರೋಹಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 “ನೀವು ನನ್ನೊಂದಿಗೆ ಏಕೆ ಚರ್ಚೆಮಾಡುವಿರಿ, ನೀವೆಲ್ಲರೂ ನನ್ನ ವಿರುದ್ಧ ದಂಗೆ ಎದ್ದಿದ್ದೀರಿ” ಎನ್ನುತ್ತಾನೆ ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 2:29
8 ತಿಳಿವುಗಳ ಹೋಲಿಕೆ  

ಎಲ್ಲಾ ಇಸ್ರಾಯೇಲರು ನಿಮ್ಮ ನಿಯಮವನ್ನು ಮೀರಿ ನಿಮಗೆ ವಿಧೇಯರಾಗದೇ ತೊಲಗಿ ಹೋದರು. “ಆದ್ದರಿಂದ ಶಾಪವೂ, ದೇವರ ಸೇವಕನಾದ ಮೋಶೆಯು ನಿಯಮದಲ್ಲಿ ಬರೆದ ನ್ಯಾಯ ತೀರ್ಪುಗಳೂ ಅವರಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ, ನಮ್ಮ ಮೇಲೆ ಸುರಿಯಲಾಗಿದೆ.


“ಏಕೆಂದರೆ, ಅವರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರತನಕ, ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರವರೆಗೆ ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.


“ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ, ನ್ಯಾಯವನ್ನು ಮಾಡುವವನೂ, ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ, ತಿಳಿದು ಹುಡುಕಿರಿ; ಸಿಕ್ಕಿದರೆ ಅವಳಿಗೆ ಮನ್ನಿಸುವೆನು.


ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.


“ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆ ಎತ್ತು. ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಮರುಭೂಮಿಯಲ್ಲಿ ಅರಬೀಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ. ಹೀಗೆ ನಿನ್ನ ವೇಶ್ಯೆತನಗಳಿಂದಲೂ, ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀಯೆ.


ಆದರೂ ನೀನು, ‘ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ದೇವರ ಕೋಪವು ನನ್ನನ್ನು ಬಿಟ್ಟು ತಿರುಗುವುದು,’ ಎಂದು ಹೇಳುತ್ತೀ. ನೀನು, ‘ನಾನು ಪಾಪಮಾಡಲಿಲ್ಲ’ ಎಂದು ಹೇಳುವುದರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.


“ಇದಲ್ಲದೆ ನೀನು, ‘ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ,’ ಎಂದು ಹೇಳುವುದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು. ನೀನು ಮಾಡಿದ್ದನ್ನು ತಿಳಿದುಕೋ. ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು