ಯೆರೆಮೀಯ 2:24 - ಕನ್ನಡ ಸಮಕಾಲಿಕ ಅನುವಾದ24 ಮರುಭೂಮಿಯ ಅಭ್ಯಾಸವುಳ್ಳ ಕಾಡುಕತ್ತೆಯೇ. ಅವಳ ಅತ್ಯಾಶೆಯಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತಾಳೆ. ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವರೆಲ್ಲರೂ ಆಯಾಸ ಪಡುವುದಿಲ್ಲ. ಅವಳ ಸಂಗಮಿಸುವ ಋತುಗಳಲ್ಲಿ ಅವಳನ್ನು ಕಾಣುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ನೀನು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿ ನೋಡುವ ಅಡವಿಯ ಹೆಣ್ಣು ಕಾಡುಕತ್ತೆಯ ಹಾಗಿದ್ದಿ; ಅದಕ್ಕೆ ಬೆದೆ ಏರಿದಾಗ ಯಾವ ಗಂಡು ಕತ್ತೆಯೂ ಅದನ್ನು ಬದಿಗೆ ನೂಕುವುದಿಲ್ಲ. ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಅಡವಿಯಲ್ಲೆ ಪಳಗಿದ, ಮದದಿಂದ ಗಾಳಿಯನ್ನು ಬುಸಬುಸನೆ ಮೂಸಿನೋಡುವ ಹೆಣ್ಣು ಕಾಡುಕತ್ತೆಯ ಹಾಗಿರುವೆ. ಅದಕ್ಕೆ ಬೆದೆ ಏರಿದಾಗ ಯಾವ ಗಂಡುಕತ್ತೆಯೂ ಅದನ್ನು ಬದಿಗೊತ್ತುವಂತಿಲ್ಲ ಅದನ್ನು ಹುಡುಕುವವುಗಳೆಲ್ಲ ಆಯಾಸಪಡಬೇಕಾಗಿಲ್ಲ. ಅವಳ ತಿಂಗಳಲ್ಲಿ ಅವಳನ್ನು ಸುಲಭವಾಗಿ ದೊರಕಿಸಿಕೊಳ್ಳುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಅಡವಿಯಲ್ಲಿ ಪಳಗಿದ್ದು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿನೋಡುವ ಹೆಣ್ಣು ಕಾಡುಕತ್ತೆಯ ಹಾಗಿದ್ದೀ; ಅದಕ್ಕೆ ಬೆದೆ ಏರಿದಾಗ ಯಾವ ಗಂಡುಕತ್ತೆಯು ನೂಕಿಬಿಟ್ಟೀತು? ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ. ಅದು ಬೆದೆಯ ಕಾಲದಲ್ಲಿ ಗಾಳಿಯನ್ನು ಮೂಸಿ ನೋಡುತ್ತದೆ. ಅದಕ್ಕೆ ಬೆದೆ ಏರಿದಾಗ ಯಾರೂ ಅದನ್ನು ಹಿಡಿಯಲು ಸಾಧ್ಯವಿಲ್ಲ. ಅದು ಬೆದೆಗೆ ಬಂದಾಗ ಅದನ್ನು ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು. ಆಗ ಅದನ್ನು ಪಡೆಯುವುದು ಬಹಳ ಸುಲಭ. ಅಧ್ಯಾಯವನ್ನು ನೋಡಿ |