Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 2:22 - ಕನ್ನಡ ಸಮಕಾಲಿಕ ಅನುವಾದ

22 ನೀನು ಸಾಬೂನಿನಿಂದ ತೊಳೆದುಕೊಂಡರೂ, ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀನು ಬಹಳ ಸೌಳನ್ನು ಹಾಕಿಕೊಂಡು ಸಾಬೂನಿನಿಂದ ತೊಳೆದುಕೊಂಡರೂ ಶುದ್ಧವಾಗದೆ, ನಿನ್ನ ಅಧರ್ಮವು ನನ್ನ ಕಣ್ಣೆದುರಿಗೆ ಕೊಳಕಾಗಿ ನಿಂತಿದೆ” ಎಂದು ಕರ್ತನಾದ ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀನು ಎಷ್ಟೇ ಚೌಳಿನಿಂದ ತೊಳೆದುಕೊಂಡರೂ ಎಷ್ಟೇ ಸಬ್ಬುಸೀಗೆಯಿಂದ ಉಜ್ಜಿಕೊಂಡರೂ ನಿನ್ನ ಅಕ್ರಮ ನನ್ನೆದುರಿಗೆ ಕಣ್ಣುಕಿಚ್ಚಾಗಿ ನಿಂತಿದೆ. ಇದು ಸರ್ವೇಶ್ವರ ಸ್ವಾಮಿಯಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನೀನು ಬಹಳ ಚೌಳನ್ನು ಹಾಕಿಕೊಂಡು ಸಬ್ಬಿನಿಂದ ತೊಳಕೊಂಡರೂ ನಿನ್ನ ಅಧರ್ಮವು ನನ್ನ ಕಣ್ಣೆದುರಿಗೆ ಕರೆಯಾಗಿ ನಿಂತಿದೆ ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನೀನು ಚೌಳನಿಂದ ತೊಳೆದುಕೊಂಡರೂ ಹೆಚ್ಚು ಸೋಪನ್ನು ಉಪಯೋಗಿಸಿದರೂ ನಾನು ನಿನ್ನ ದೋಷವನ್ನು ಕಂಡುಹಿಡಿಯಬಲ್ಲೆ” ಅನ್ನುತ್ತಾನೆ ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 2:22
12 ತಿಳಿವುಗಳ ಹೋಲಿಕೆ  

“ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ, ವಜ್ರದ ಮೊನೆಯಿಂದಲೂ ಬರೆಯಲಾಗಿದೆ. ಅದು ಅವರ ಹೃದಯದ ಹಲಗೆಯ ಮೇಲೆಯೂ ಅವರ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲಾಗಿದೆ.


ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ; ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ.


ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ. ಅವನ ಪಾಪವು ದಾಖಲೆಯಾಗಿದೆ.


ನನ್ನ ಕಣ್ಣುಗಳು ಅವರ ಎಲ್ಲಾ ಮಾರ್ಗಗಳ ಮೇಲೆ ಇವೆ. ಅವು ನನ್ನ ಮುಖಕ್ಕೆ ಮರೆಯಾದವುಗಳಲ್ಲ, ಅವರ ಅಕ್ರಮವು ನನ್ನ ದೃಷ್ಟಿಗೆ ಅಡಗಿರುವುದಿಲ್ಲ.


ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ, ನಿಮ್ಮ ಮುಂದೆ ಯಾರು ನಿಲ್ಲುವರು?


ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ.


ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ. ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.


“ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?


ಯೆರೂಸಲೇಮೇ, ನಿನಗೆ ರಕ್ಷಣೆಯಾಗುವ ಹಾಗೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರವರೆಗೆ ನಿನ್ನಲ್ಲಿ ತಂಗುವುವು.


ಆಗ ದಾವೀದನು ಊರೀಯನಿಗೆ, “ಈ ಹೊತ್ತು ಇಲ್ಲಿರು. ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಊರೀಯನೂ ಆ ದಿನವೂ, ಮಾರನೆಯ ದಿವಸವೂ ಯೆರೂಸಲೇಮಿನಲ್ಲಿ ಇದ್ದನು.


“ ‘ಆದಕಾರಣ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ರಕ್ತಮಯವಾದ ಆ ಪಟ್ಟಣಕ್ಕೆ ಕಷ್ಟ! ಯಾವುದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ ಆ ಹಂಡೆಗೆ ಕಷ್ಟ! ಅದರಿಂದ ತುಂಡುತುಂಡಾಗಿ ಹೊರಗೆ ತೆಗೆ. ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು