Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 19:9 - ಕನ್ನಡ ಸಮಕಾಲಿಕ ಅನುವಾದ

9 ಅವರು ತಮ್ಮ ಪುತ್ರಪುತ್ರಿಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಮುತ್ತಿಗೆಯಲ್ಲಿಯೂ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವರು ತಮ್ಮ ಗಂಡು ಹೆಣ್ಣು ಮಕ್ಕಳ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಅವರ ಪ್ರಾಣವನ್ನು ಹುಡುಕುವ ಶತ್ರುಗಳು ಅವರನ್ನು ಮುತ್ತಿ, ಸಂಕಟಕ್ಕೆ ಗುರಿಮಾಡುವಾಗ, ಅವರು ತಮ್ಮ ಇಷ್ಟ ಮಿತ್ರರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಇದು ಯೆಹೋವನಾದ ನನ್ನ ನುಡಿ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವರ ಶತ್ರುಗಳು, ಕೊಲೆಗಡುಕರು ಅವರನ್ನು ಮುತ್ತಿ ನಸುಕುವಾಗ ಒಬ್ಬರು ಮತ್ತೊಬ್ಬರನ್ನು ತಿನ್ನುವುದು ಮಾತ್ರವಲ್ಲ, ತಮ್ಮ ಪುತ್ರಪುತ್ರಿಯರ ಮಾಂಸವನ್ನೇ ತಿನ್ನುವರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರ ಪ್ರಾಣವನ್ನು ಹುಡುಕುವ ಶತ್ರುಗಳು ಅವರನ್ನು ಮುತ್ತಿ ಬಹಳವಾಗಿ ಇರಕಿಸುವಾಗ ಅವರು ತಮ್ಮ ಗಂಡು ಹೆಣ್ಣು ಮಕ್ಕಳ ಮಾಂಸವನ್ನೂ ಇಷ್ಟ ವಿುತ್ರರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಇದು ಯೆಹೋವನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 19:9
10 ತಿಳಿವುಗಳ ಹೋಲಿಕೆ  

ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು ತಿಂದರೂ ಹಸಿದೇ ಇರುವನು, ಅವನು ಎಡಗಡೆಯಲ್ಲಿರುವುದನ್ನು ತಿಂದರೂ ಅವು ಅವನನ್ನು ತೃಪ್ತಿಪಡಿಸಲಾರವು. ಒಬ್ಬೊಬ್ಬನೂ ತನ್ನ ನೆರೆಯವನನ್ನು ಹಾನಿ ಮಾಡುತ್ತಿದ್ದಾನೆ.


ಕನಿಕರ ತುಂಬಿದ ಸ್ತ್ರೀಯರ ಕೈಗಳು ತಮ್ಮ ಸ್ವಂತ ಮಕ್ಕಳನ್ನೇ ಬೇಯಿಸಿದವು. ಇವರು ನನ್ನ ಜನರ ನಾಶದಲ್ಲಿ ಅವರಿಗೆ ಆಹಾರವಾದರು.


ನೀವು ನಿಮ್ಮ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.


ಆದ್ದರಿಂದ ನಿಮ್ಮ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು. ಮಕ್ಕಳು ಅವರ ತಂದೆಗಳನ್ನು ತಿನ್ನುವರು. ಹೀಗೆ ನಿಮ್ಮಲ್ಲಿ ನ್ಯಾಯತೀರ್ಪನ್ನು ನಡಿಸುವೆನು. ನಿಮ್ಮಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.


ಯೆಹೋವ ದೇವರೇ, ಕಟಾಕ್ಷಿಸಿ: ನೀವು ಇದನ್ನು ಯಾರಿಗೆ ಮಾಡಿದಿರೋ ಯೋಚಿಸಿರಿ. ಸ್ತ್ರೀಯರು ತಮ್ಮ ಫಲವಾದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಮತ್ತು ಪ್ರವಾದಿಯು ಕರ್ತದೇವರ ಪರಿಶುದ್ಧ ಸ್ಥಳದಲ್ಲಿ ಹತರಾಗಬೇಕೋ?


ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು ಹಾಗೂ ನಾಶಮಾಡದೆ ಬಿಡೆನು,’ ಇದು ಯೆಹೋವ ದೇವರಾದ ನನ್ನ ನುಡಿ.”


ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.


“ನನ್ನ ಒಡೆಯನಾದ ಅರಸನೇ, ಈ ಮನುಷ್ಯರು ಬಾವಿಯಲ್ಲಿ ಹಾಕಿದ ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ; ಏಕೆಂದರೆ ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು