Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 19:13 - ಕನ್ನಡ ಸಮಕಾಲಿಕ ಅನುವಾದ

13 ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪ ಸುಟ್ಟು, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ, ಆ ಎಲ್ಲಾ ಮನೆಗಳ ನಿಮಿತ್ತವಾಗಿ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವುವು, ಎಂಬುದೇ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ, ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ, ಆ ಮನೆಗಳೆಲ್ಲಾ ಹೊಲಸಾಗಿ ತೋಫೆತ್ ಎಂಬ ಸ್ಥಳಕ್ಕೆ ಸಮಾನವಾಗುವವು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆರೂಸಲೇವಿುನ ಮನೆಗಳೂ ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲಾ ಹೊಲಸಾಗಿ ತೋಫೆತೆಂಬ ಸ್ಥಳಕ್ಕೆ ಸಮಾನವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 19:13
19 ತಿಳಿವುಗಳ ಹೋಲಿಕೆ  

ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರು ಬಂದು, ಈ ಪಟ್ಟಣಕ್ಕೆ ಬೆಂಕಿ ಹಚ್ಚಿ; ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವನ್ನರ್ಪಿಸಿ, ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ ಅವುಗಳನ್ನೂ ಸುಟ್ಟುಬಿಡುವರು.


ಯೆಹೂದದ ಅರಸರು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ, ಮನಸ್ಸೆಯು ಯೆಹೋವ ದೇವರ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠಗಳನ್ನೂ ಅರಸನು ಕೆಡವಿಸಿ, ಅಲ್ಲಿಂದ ಅದರ ಧೂಳನ್ನು ಕಿದ್ರೋನ್ ಕಣಿವೆಯಲ್ಲಿ ಹಾಕಿಸಿಬಿಟ್ಟನು.


ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ


‘ಗಗನದ ಒಡತಿ,’ ಎಂದು ಇವರು ಕರೆಯುವ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯ ದೇವತೆಗಳಿಗೆ ಪಾನ ನೈವೇದ್ಯವನ್ನು ಅರ್ಪಿಸುತ್ತಾರೆ.”


ನೀವು ನಿಮ್ಮ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ, ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ, ನಿಮ್ಮ ದೇವರಾದ ಯೆಹೋವ ದೇವರು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಕೊಟ್ಟಿದ್ದಾರೆ. ನೀವು ಅವುಗಳಿಗೆ ಅಡ್ಡಬಿದ್ದು, ಮರುಳುಗೊಂಡು ಅವುಗಳನ್ನು ಪೂಜಿಸದಂತೆಯೂ ನೋಡಿಕೊಳ್ಳಿರಿ.


ಆದರೆ ನಾವು ಗಗನದ ಒಡತಿಗೆ ಧೂಪ ಸುಡುವುದನ್ನೂ, ಪಾನಾರ್ಪಣೆಗಳನ್ನೂ ಅವಳಿಗೆ ಹೊಯ್ಯುವುದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು. ಖಡ್ಗದಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು.”


ದೇವರೇ, ಜನಾಂಗಗಳು ನಿಮ್ಮ ಬಾಧ್ಯತೆಗೆ ಬಂದು, ನಿಮ್ಮ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.


ನಿಮ್ಮ ಪರಿಶುದ್ಧ ಸ್ಥಳಕ್ಕೆ ಬೆಂಕಿಹಚ್ಚಿದ್ದಾರೆ. ನಿಮ್ಮ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಅಪವಿತ್ರಗೊಳಿಸಿದ್ದಾರೆ.


ಯಾವನೂ ತನ್ನ ಮಗನನ್ನಾದರೂ, ಮಗಳನ್ನಾದರೂ ಮೋಲೆಕನಿಗೋಸ್ಕರ ಬೆಂಕಿಯಲ್ಲಿ ಬಲಿ ಅರ್ಪಿಸದಂತೆ ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತನ್ನು ಅಶುದ್ಧ ಮಾಡಿದನು.


ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ: “ ‘ಇಸ್ರಾಯೇಲಿನ ಮನೆತನದವರೇ, ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.


ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಮರಗಳನ್ನೂ ನೋಡಿ, ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಸುವಾಸನೆಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.


ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.


ಇದಲ್ಲದೆ ಯೋಷೀಯನು ವಿಗ್ರಹಗಳನ್ನು ಮುರಿದು, ಅಶೇರ ಸ್ತಂಭಗಳನ್ನು ಕಡಿದುಬಿಟ್ಟು, ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.


ಮಾರನೆಯ ದಿನ ಅವರು ಪ್ರಯಾಣಮಾಡಿ ಮಧ್ಯಾಹ್ನದ ಸಮಯ ಯೊಪ್ಪ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆಗತಾನೇ ಪೇತ್ರನು ಪ್ರಾರ್ಥಿಸಲು ಮಾಳಿಗೆಯ ಮೇಲಕ್ಕೆ ಹೋದನು.


ಇದಲ್ಲದೆ ಅವರು ತಮ್ಮ ದೇವರಾದ ಯೆಹೋವ ದೇವರ ಸಮಸ್ತ ಆಜ್ಞೆಗಳನ್ನು ಬಿಟ್ಟುಬಿಟ್ಟು, ತಮಗೆ ತಾವೇ ಎರಡು ಎರಕದ ಕರುಗಳ ಮೂರ್ತಿಗಳನ್ನು ಮಾಡಿಕೊಂಡರು. ಅವರು ಅಶೇರ ಸ್ತಂಭವನ್ನು ನಿಲ್ಲಿಸಿ, ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು, ಬಾಳನನ್ನು ಸೇವಿಸಿ ತಮ್ಮ ಪುತ್ರಪುತ್ರಿಯರನ್ನೂ ಬೆಂಕಿಯಲ್ಲಿ ಬಲಿಕೊಟ್ಟರು.


ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು.


ಹೀಗೆ ಈ ಸ್ಥಳಕ್ಕೂ, ಅದರ ನಿವಾಸಿಗಳಿಗೂ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಈ ಪಟ್ಟಣವನ್ನು ತೋಫೆತಿನ ಹಾಗೆಯೇ ಮಾಡುವೆನು.


ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ: ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು