Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 19:12 - ಕನ್ನಡ ಸಮಕಾಲಿಕ ಅನುವಾದ

12 ಹೀಗೆ ಈ ಸ್ಥಳಕ್ಕೂ, ಅದರ ನಿವಾಸಿಗಳಿಗೂ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಈ ಪಟ್ಟಣವನ್ನು ತೋಫೆತಿನ ಹಾಗೆಯೇ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ, ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಅಷ್ಟರಮಟ್ಟಿಗೆ ನಾಶಪಡಿಸಿ ಈ ನಗರವನ್ನು ತೋಫೆತಿನ ಪರಿಸ್ಥಿತಿಗೆ ಇಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 19:12
4 ತಿಳಿವುಗಳ ಹೋಲಿಕೆ  

ಹಾಲು ಜೇನು ಹರಿಯುವ ನಾಡನ್ನು, ಎಂದರೆ ಇಂದು ನೀವಿರುವ ನಾಡನ್ನು ಕೊಡುವುದಾಗಿ ನಿಮ್ಮ ಮೂಲ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವ ಮಾತು.” “ಓ ಯೆಹೋವ ದೇವರೇ, ಹಾಗೆಯೇ ಆಗಲಿ,” ಎಂದೆನು.


ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ. ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.


ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾನೆ: ಯಾವ ಪ್ರಕಾರ ಒಬ್ಬನು ಕುಂಬಾರನ ಮಡಕೆಯನ್ನು ಅದು ತಿರುಗಿ ಒಂದುಗೂಡದ ಹಾಗೆ ಒಡೆಯುತ್ತಾನೋ, ಅದೇ ಪ್ರಕಾರ ನಾನು ಈ ಜನರನ್ನೂ, ಈ ಪಟ್ಟಣವನ್ನೂ ಒಡೆದುಬಿಡುವೆನು. ಆಗ ಹೂಳಿಡುವುದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಳಿಡುವರು.


ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪ ಸುಟ್ಟು, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ, ಆ ಎಲ್ಲಾ ಮನೆಗಳ ನಿಮಿತ್ತವಾಗಿ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವುವು, ಎಂಬುದೇ.’ ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು