Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 18:23 - ಕನ್ನಡ ಸಮಕಾಲಿಕ ಅನುವಾದ

23 ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ. ಅವರ ಅಕ್ರಮವನ್ನು ಮನ್ನಿಸಬೇಡಿ. ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ. ಅವರ ಅಪರಾಧವನ್ನು ಕ್ಷಮಿಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ. ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ; ಅವರ ಅಪರಾಧವನ್ನು ಕ್ಷವಿುಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೆಹೋವನೇ, ನನ್ನನ್ನು ಕೊಲ್ಲಲು ಅವರು ಹಾಕಿದ ಯೋಜನೆಗಳನ್ನೆಲ್ಲ ನೀನು ಬಲ್ಲೆ. ಅವರ ಅಪರಾಧಗಳನ್ನು ಮನ್ನಿಸಬೇಡ. ಅವರ ಪಾಪಗಳನ್ನು ಅಳಿಸಬೇಡ. ನನ್ನ ವೈರಿಗಳನ್ನು ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನ್ನು ಶಿಕ್ಷಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 18:23
28 ತಿಳಿವುಗಳ ಹೋಲಿಕೆ  

ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.


ಆದ್ದರಿಂದ ಮನುಷ್ಯರು ನಮ್ರರಾಗುತ್ತಾರೆ; ಎಲ್ಲರೂ ತಲೆಬಾಗುತ್ತಾರೆ; ಅವರನ್ನು ಕ್ಷಮಿಸಬೇಡಿ.


ನೀನು ನಿನ್ನ ಕಠಿಣವಾದ ಮತ್ತು ಪಶ್ಚಾತ್ತಾಪ ಪಡದ ಹೃದಯದಿಂದ, ನಿನಗೋಸ್ಕರ ದೇವರ ನೀತಿಯುಳ್ಳ ತೀರ್ಪು ಪ್ರಕಟವಾಗುವ ಕೋಪದ ದಿನಕ್ಕಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಿದ್ದಿ.


ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ.


ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು.


ಅದಕ್ಕೆ ನಾನು ಯೆಹೋವ ದೇವರೇ, ನೀನೇ ಬಲ್ಲೆ, ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿ ತೀರಿಸು, ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ ಏಕೆಂದರೆ ನೀವು ಕನಿಕರ ಉಳ್ಳವರು, ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಚಿತ್ತಕ್ಕೆ ತಂದುಕೋ.


ಅವರಲ್ಲಿ ಶೇಷವು ಇರುವುದಿಲ್ಲ. ಏಕೆಂದರೆ ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಎಂದರೆ ಅವರ ಶಿಕ್ಷೆಯ ವರ್ಷವನ್ನೇ ತರುತ್ತೇನೆ.”


ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ, ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು, ಎಂದು ಯೆಹೋವ ದೇವರು ಹೇಳುತ್ತಾರೆ.


ವಿಚಾರಣೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?


ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.


ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ.


ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ. ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.


ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಈ ಜನರ ಮುಂದೆ ಅಡೆತಡೆಗಳನ್ನು ಇಡುತ್ತೇನೆ. ತಂದೆಯೂ, ಮಕ್ಕಳೂ ಕೂಡ ಅವುಗಳ ಮೇಲೆ ಬೀಳುವರು. ನೆರೆಯವರೂ, ಅವರ ಸ್ನೇಹಿತರೂ ನಾಶವಾಗುವರು.”


“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ಈ ಸ್ಥಳದ ಮೇಲೆಯೂ, ಮನುಷ್ಯರ ಮೇಲೆಯೂ, ಮೃಗಗಳ ಮೇಲೆಯೂ, ಹೊಲದ ಮರಗಳ ಮೇಲೆಯೂ, ಭೂಮಿಯ ಫಲದ ಮೇಲೆಯೂ ನನ್ನ ಕೋಪ ಮತ್ತು ಉಗ್ರತೆಯು ಹೊಯ್ಯಲಾಗುವುದು. ಅದು ಉರಿಯುವುದು ಮತ್ತು ಆರಿಹೋಗುವುದಿಲ್ಲ.


ಆಗ ನಿನ್ನ ದೋಷದಿಂದಲೇ ನೀನು ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ. ನಿನಗೆ ತಿಳಿಯದ ದೇಶದಲ್ಲಿ ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ. ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”


ಯೆರೆಮೀಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಅವನನ್ನು ಹಿಡಿದು, “ನೀನು ನಿಶ್ಚಯವಾಗಿ ಸಾಯಬೇಕು.


ಆಗ ಯಾಜಕರೂ, ಪ್ರವಾದಿಗಳೂ, ಅಧಿಕಾರಿಗಳಿಗೂ, ಜನರೆಲ್ಲರಿಗೂ, “ಈ ಮನುಷ್ಯನು ಮರಣಕ್ಕೆ ತಕ್ಕವನು. ಏಕೆಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ, ಇವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ,” ಎಂದರು.


ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.


ಆಗ ಆ ಪ್ರಧಾನರು ಅರಸನಿಗೆ, “ಈ ಮನುಷ್ಯನು ಸಾಯಬೇಕು; ಇವನು ಅವರ ಸಂಗಡ ಇಂಥಾ ಮಾತುಗಳನ್ನು ಆಡಿ, ಈ ಪಟ್ಟಣದಲ್ಲಿ ಉಳಿದ ಎಲ್ಲಾ ಸೈನಿಕರನ್ನೂ, ಎಲ್ಲಾ ಜನರನ್ನೂ ಎದೆಗುಂದುವಂತೆ ಮಾಡುತ್ತಿದ್ದಾನೆ. ಈ ಮನುಷ್ಯನು ಈ ಜನರ ಕ್ಷೇಮವನ್ನಲ್ಲ, ಅವರ ಹಾನಿಯನ್ನೇ ಹಾರೈಸುತ್ತಾನೆ,” ಎಂದು ಹೇಳಿದರು.


ನನ್ನ ಗೋಳಾಟವನ್ನು ಎಣಿಕೆ ಮಾಡಿರಿ, ನಿಮ್ಮ ಸುರುಳಿಯಲ್ಲಿ ನನ್ನ ಕಣ್ಣೀರ ಲೆಕ್ಕಮಾಡಿರಿ, ಅವು ನಿಮ್ಮ ಗ್ರಂಥದಲ್ಲಿ ಬರೆದಿದೆಯಲ್ಲವೇ?


ನನ್ನನ್ನು ಹಿಂಸಿಸುವವರು ನಾಚಿಕೆಗೆ ಗುರಿಯಾಗಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲು ಪಡಲಿ; ಆದರೆ ನಾನು ದಿಗಿಲು ಪಡದಿರಲಿ. ಆದರೆ ನಾನು ದಿಗಿಲು ಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡಿ. ಎರಡರಷ್ಟಾದ ನಾಶದಿಂದ ಅವರನ್ನು ನಾಶಪಡಿಸಿ.


ನನಗೆ ವಿರುದ್ಧವಾಗಿ ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ.


ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು