Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 17:3 - ಕನ್ನಡ ಸಮಕಾಲಿಕ ಅನುವಾದ

3 ನಾಡಿನಲ್ಲಿರುವ ನನ್ನ ಪರ್ವತವೇ, ನಿನ್ನ ಎಲ್ಲಾ ಪ್ರಾಂತಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಪೂಜಾಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಬಯಲಿನ ನನ್ನ ಪರ್ವತದ ಜನರೇ, ನಿಮ್ಮ ಸಕಲ ಪ್ರಾಂತ್ಯಗಳಲ್ಲಿ ನೀವು ಮಾಡಿದ ಪಾಪದ ನಿಮಿತ್ತ, ನಾನು ನಿಮ್ಮ ಎಲ್ಲಾ ಸೊತ್ತು ಸಂಪತ್ತುಗಳನ್ನು ಹಾಗು ಪೂಜಾಸ್ಥಳಗಳನ್ನು ಸೂರೆಗೆ ಈಡು ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಿಮ್ಮ ಪ್ರಾಂತ್ಯಗಳಲ್ಲೆಲ್ಲ ನೀವು ಮಾಡಿದ ಪಾಪದ ನಿಮಿತ್ತ ನಾನು ನಿಮ್ಮ ಎಲ್ಲ ಸೊತ್ತುಸಂಪತ್ತುಗಳನ್ನು ಮತ್ತು ಪೂಜಾಸ್ಥಳಗಳನ್ನು ಸೂರೆಗೆ ಈಡುಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಬೈಲಿನ ನನ್ನ ಪರ್ವತದ ಜನರೇ, ನಿಮ್ಮ ಸಕಲ ಪ್ರಾಂತಗಳಲ್ಲಿ ನೀವು ಮಾಡಿದ ಪಾಪದ ನಿವಿುತ್ತ ನಾನು ನಿಮ್ಮ ಎಲ್ಲಾ ಸೊತ್ತು ಸಂಪತ್ತುಗಳನ್ನೂ ಪೂಜಾಸ್ಥಳಗಳನ್ನೂ ಸೂರೆಗೆ ಈಡುಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವರು ಆ ವಸ್ತುಗಳನ್ನು ಬೆಟ್ಟಗಳ ಮೇಲೆಯೂ ಬಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು. ಯೆಹೂದದ ಜನರಲ್ಲಿ ಭಂಡಾರಗಳಿವೆ. ನಾನು ಅವುಗಳನ್ನು ಬೇರೆಯವರಿಗೆ ಒಪ್ಪಿಸುತ್ತೇನೆ. ನಿಮ್ಮ ದೇಶದಲ್ಲಿದ್ದ ಎಲ್ಲಾ ಉನ್ನತಸ್ಥಳಗಳನ್ನು ಜನರು ನಾಶಮಾಡುವರು. ಆ ಸ್ಥಳಗಳಲ್ಲಿ ಪೂಜೆಮಾಡಿ ನೀವು ಪಾಪಕ್ಕೆ ಗುರಿಯಾಗಿರುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 17:3
23 ತಿಳಿವುಗಳ ಹೋಲಿಕೆ  

ನಿನ್ನ ಸಕಲ ಪ್ರಾಂತಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡು ಮಾಡಿ,


“ಮೊರೇಷೆತಿನವನಾದ ಮೀಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ, ಯೆಹೂದದ ಜನರಿಗೆಲ್ಲಾ ಹೇಳಿದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಚೀಯೋನನ್ನು ಹೊಲದ ಹಾಗೆ ಉಳಲಾಗುವುದು; ಯೆರೂಸಲೇಮು ಹಾಳುದಿಬ್ಬಗಳಾಗುವುದು; ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.’


ಯೆಹೋವ ದೇವರು ಮುಂತಿಳಿಸಿದ ಪ್ರಕಾರವೇ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದಲ್ಲಿ ಸಮಸ್ತ ಬೊಕ್ಕಸಗಳನ್ನೂ, ಅರಮನೆಯ ಬೊಕ್ಕಸಗಳನ್ನೂ, ಇಸ್ರಾಯೇಲಿನ ಅರಸನಾದ ಸೊಲೊಮೋನನು ಅರಸನ ಆಲಯದಲ್ಲಿ ಮಾಡಿದ ಬಂಗಾರದ ಸಮಸ್ತ ಪಾತ್ರೆಗಳನ್ನೂ ಸೂರೆಯಾಗಿ ತೆಗೆದುಕೊಂಡನು.


ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನನ್ನು ಹೊಲದ ಹಾಗೆ ಉಳಲಾಗುವುದು. ಯೆರೂಸಲೇಮು ಹಾಳುದಿಬ್ಬಗಳಾಗುವುದು. ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.


ಅನಂತರ ನಿನ್ನನ್ನು ಅವರ ಕೈಗಳಿಗೆ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ, ನಿನ್ನ ಉನ್ನತ ಸ್ಥಾನಗಳನ್ನು ಒಡೆದು ಬಿಡುವರು. ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಆಭರಣಗಳನ್ನು ಕಸಿದುಕೊಂಡು, ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿಹೋಗುವರು.


‘ಇಸ್ರಾಯೇಲಿನ ಪರ್ವತಗಳೇ, ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಹೌದು, ಸಾರ್ವಭೌಮ ಯೆಹೋವ ದೇವರು ಪರ್ವತಗಳಿಗೂ ಗುಡ್ಡಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳುತ್ತಾರೆ, ನಾನೇ ನಿಮ್ಮ ಮೇಲೆ ಖಡ್ಗವನ್ನು ಹಿಡಿದು, ನಿಮ್ಮ ಪೂಜಾಸ್ಥಳಗಳನ್ನು ನಾಶಮಾಡುತ್ತೇನೆ.


ವೈರಿಯು ಆಕೆಯ ಎಲ್ಲಾ ಬೊಕ್ಕಸಗಳ ಮೇಲೆ ತನ್ನ ಕೈಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರಬಾರದೆಂದು ನೀನು ಆಜ್ಞಾಪಿಸಿದ ಇತರ ಜನಾಂಗಗಳು, ತನ್ನ ಪರಿಶುದ್ಧ ಸ್ಥಳದಲ್ಲಿ ಸೇರುವುದನ್ನು ನೋಡಿದ್ದಾಳೆ.


ಮರುಭೂಮಿಯಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ನಾಶಮಾಡುವವರು ಬಂದಿದ್ದಾರೆ. ಏಕೆಂದರೆ, ಯೆಹೋವ ದೇವರ ಖಡ್ಗವು ದೇಶದ ಒಂದು ಕಡೆಯಿಂದ ದೇಶದ ಇನ್ನೊಂದು ಕಡೆಯವರೆಗೂ ನುಂಗಿಬಿಡುತ್ತದೆ. ಯಾವ ಮನುಷ್ಯನೂ ಸುರಕ್ಷಿತವಾಗಿ ಉಳಿಯುವುದಿಲ್ಲ.


ಹೀಗಿರುವದರಿಂದ ಯಾಕೋಬನು ಬಲಿಪೀಠಗಳ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿಪುಡಿಮಾಡಿ, ಅಶೇರ ಸ್ತಂಭಗಳನ್ನೂ ಧೂಪವೇದಿಗಳನ್ನೂ ಇನ್ನು ಪ್ರತಿಷ್ಠಾಪಿಸದೆ ಹೋದರೆ ಅದೇ ಯಾಕೋಬನ ಅಪರಾಧಕ್ಕೆ ಪ್ರಾಯಶ್ಚಿತ್ತವಾಗುವುದು ಮತ್ತು ಅವನ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲವು ಇದೇ ಆಗಿದೆ.


ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.


ತಮ್ಮ ಉನ್ನತ ಸ್ಥಳಗಳಿಂದ ದೇವರಿಗೆ ಬೇಸರಗೊಳಿಸಿದರು. ತಮ್ಮ ಮೂರ್ತಿಗಳಿಂದ ದೇವರಿಗೆ ದುಃಖಪಡಿಸಿದರು.


ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ, ಅದರ ಎಲ್ಲಾ ನಿಧಿನಿಕ್ಷೇಪಗಳನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ, ಯೆಹೂದದ ಅರಸರ ಎಲ್ಲಾ ಭಂಡಾರಗಳನ್ನೂ ಅವರ ಶತ್ರುಗಳ ಕೈಗೆ ಒಪ್ಪಿಸುವೆನು. ಅವರು ಅವುಗಳನ್ನು ಸುಲಿದುಕೊಂಡು, ತೆಗೆದುಕೊಂಡು ಬಾಬಿಲೋನಿಗೆ ಒಯ್ಯುವರು.


ಆದ್ದರಿಂದ ಅವರ ಸಂಪತ್ತು ಕೊಳ್ಳೆಯಾಗುವುದು, ಅವರ ಮನೆಗಳು ಹಾಳಾಗುವುವು. ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು. ದ್ರಾಕ್ಷಿತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.”


ಇಗೋ, ತಗ್ಗಿನ ನಗರಿಯೇ, ಬಯಲಿನ ಬಂಡೆಯಲ್ಲಿ ವಾಸಮಾಡುವವರೇ, “ನಮ್ಮ ಮೇಲೆ ಯಾರು ಇಳಿದು ಬರುವರೆಂದು ನಮ್ಮ ನಿವಾಸಗಳಲ್ಲಿ ಯಾರು ಸೇರುವರೆಂದು, ಅನ್ನುವವರೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ, ಅವರನ್ನು ಸೂರೆಗೂ ಹೆದರಿಕೆಗೂ ಒಪ್ಪಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು