ಯೆರೆಮೀಯ 17:1 - ಕನ್ನಡ ಸಮಕಾಲಿಕ ಅನುವಾದ1 “ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ, ವಜ್ರದ ಮೊನೆಯಿಂದಲೂ ಬರೆಯಲಾಗಿದೆ. ಅದು ಅವರ ಹೃದಯದ ಹಲಗೆಯ ಮೇಲೆಯೂ ಅವರ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ಹಾಗೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ. ಅದು ಅವರ ಹೃದಯದ ಹಲಗೆಯಲ್ಲಿಯೂ, ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಸರ್ವೇಶ್ವರ ಸ್ವಾಮಿ ಜುದೇಯದ ಜನರಿಗೆ ಹೀಗೆನ್ನುತ್ತಾರೆ : “ಜುದೇಯದ ಪಾಪವನ್ನು ಕಬ್ಬಿಣದ ಲೇಖನಿಯಿಂದ, ವಜ್ರದ ಮೊನೆಯಿಂದ ಬರೆಯಲಾಗಿದೆ. ಅದನ್ನು ನಿಮ್ಮ ಜನರ ಹೃದಯದ ಹಲಗೆಯ ಮೇಲೂ ಅವರ ಬಲಿಪೀಠಗಳ ಕೊಂಬುಗಳ ಮೇಲೂ ಕೆತ್ತಲಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ; ಅವರ ಹೃದಯದ ಹಲಗೆಯಲ್ಲಿಯೂ ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 “ಯೆಹೂದದ ಜನರ ಅಪರಾಧ ಅಳಿಸಲಾಗದ ಸ್ಥಳದಲ್ಲಿ ಬರೆಯಲಾಗಿದೆ. ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ. ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ. ಅವರ ಹೃದಯವೇ ಆ ಕಲ್ಲು, ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಬುಗಳಲ್ಲಿ ಕೆತ್ತಿವೆ. ಅಧ್ಯಾಯವನ್ನು ನೋಡಿ |