ಯೆರೆಮೀಯ 16:9 - ಕನ್ನಡ ಸಮಕಾಲಿಕ ಅನುವಾದ9 ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮ ಕಣ್ಣುಗಳ ಮುಂದೆ ನಿಮ್ಮ ದಿನಗಳಲ್ಲಿಯೇ ಉಲ್ಲಾಸದ ಸ್ವರವನ್ನೂ, ಸಂತೋಷದ ಸ್ವರವನ್ನೂ, ಮದುಮಗನ ಸ್ವರವನ್ನೂ, ಮದುಮಗಳ ಸ್ವರವನ್ನೂ ಈ ಸ್ಥಳದೊಳಗಿಂದ ನಿಲ್ಲಿಸಿಬಿಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಏಕೆಂದರೆ ಇಸ್ರಯೇಲಿನ ದೇವರೂ ಸರ್ವಶಕ್ತ ಸರ್ವೇಶ್ವರನೂ ಆದ ನಾನು ಹೇಳುತ್ತೇನೆ, ಕೇಳು : ನಿಮ್ಮ ಕಾಲದಲ್ಲೆ, ನಿಮ್ಮ ಕಣ್ಣೆದುರಿಗೆ, ಸಂತೋಷ ಸಂಭ್ರಮದ ಧ್ವನಿಯನ್ನು ನಿಲ್ಲಿಸಿಬಿಡುವೆನು. ವಧೂವರರ ಸದ್ದೂ ಇಲ್ಲವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗಂದಿದ್ದಾನೆ - ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ಉಲ್ಲಾಸಪಡುತ್ತಿದ್ದ ಜನರ ಧ್ವನಿಯನ್ನು ನಾನು ಬೇಗನೆ ನಿಲ್ಲಿಸಿಬಿಡುತ್ತೇನೆ. ಮದುವೆಯ ಸಮಾರಂಭಗಳಲ್ಲಿ ಜನರು ಮಾಡುವ ಸಂತೋಷ ಸಂಭ್ರಮದ ಧ್ವನಿಯನ್ನು ನಾನು ನಿಲ್ಲಿಸಿಬಿಡುತ್ತೇನೆ. ಇದು ನಿನ್ನ ಜೀವನಕಾಲದಲ್ಲಿಯೇ ಸಂಭವಿಸುತ್ತದೆ. ಇದೆಲ್ಲವನ್ನು ನಾನು ಬೇಗ ಮಾಡುತ್ತೇನೆ.’ ಅಧ್ಯಾಯವನ್ನು ನೋಡಿ |