Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 16:13 - ಕನ್ನಡ ಸಮಕಾಲಿಕ ಅನುವಾದ

13 ಆದ್ದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ, ನಿಮಗೂ, ನಿಮ್ಮ ಪಿತೃಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು. ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆ ಮಾಡುವಿರಿ ಮತ್ತು ನಾನು ನಿಮಗೆ ಕನಿಕರ ತೋರಿಸುವುದಿಲ್ಲ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಈ ಕಾರಣಗಳ ನಿಮಿತ್ತ ನೀವಾಗಲಿ ನಿಮ್ಮ ಪೂರ್ವಜರಾಗಲಿ ನೋಡದ ನಾಡಿಗೆ ನಿಮ್ಮನ್ನು ಇಲ್ಲಿಂದ ಎಸೆದುಬಿಡುವೆನು. ಅಲ್ಲಿ ಹಗಲಿರುಳೂ ಅನ್ಯದೇವತೆಗಳಿಗೆ ಸೇವೆಮಾಡುವಿರಿ, ನನ್ನ ದಯೆ ದಾಕ್ಷಿಣ್ಯ ಮಾತ್ರ ನಿಮಗೆ ದೊರಕದು".

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀವಾಗಲಿ ನಿಮ್ಮ ಪಿತೃಗಳಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದ್ದರಿಂದ ನಾನು ನಿಮ್ಮನ್ನು ಈ ದೇಶದ ಹೊರಗೆ ಎಸೆಯುತ್ತೇನೆ. ನೀವು ಪರದೇಶಕ್ಕೆ ಸೆರೆಹೋಗುವಂತೆ ಮಾಡುತ್ತೇನೆ. ನೀವು ಮತ್ತು ನಿಮ್ಮ ಪೂರ್ವಿಕರು ಎಂದೂ ನೋಡದ ಪ್ರದೇಶಕ್ಕೆ ನೀವು ಹೋಗುವಿರಿ. ಆ ಪ್ರದೇಶದಲ್ಲಿ ನೀವು ನಿಮ್ಮ ಮನಸ್ಸಿಗೆ ಬಂದಷ್ಟು ಸುಳ್ಳುದೇವತೆಗಳ ಸೇವೆಮಾಡಬಹುದು. ನಾನು ನಿಮಗೆ ಸಹಾಯವನ್ನೂ ಮಾಡುವದಿಲ್ಲ, ಯಾವ ರೀತಿಯ ಒಲವನ್ನೂ ತೋರುವದಿಲ್ಲ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 16:13
21 ತಿಳಿವುಗಳ ಹೋಲಿಕೆ  

ಯೆಹೋವ ದೇವರು ನಿಮ್ಮನ್ನೂ, ನೀವು ನಿಮ್ಮ ಮೇಲೆ ನೇಮಿಸಿಕೊಳ್ಳುವ ಅರಸನನ್ನೂ, ನೀವೂ, ನಿಮ್ಮ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗುವಂತೆ ಮಾಡುವರು. ಅಲ್ಲಿ ಮರವೂ, ಕಲ್ಲೂ ಆಗಿರುವ ಬೇರೆ ದೇವರುಗಳನ್ನೂ ನೀವು ಪೂಜಿಸುವಿರಿ.


ನಿನ್ನ ಶತ್ರುಗಳ ಕೈಗೆ ಕೊಟ್ಟು, ನಿನ್ನನ್ನು ಗೊತ್ತಿಲ್ಲದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.


ಆಗ ನಿನ್ನ ದೋಷದಿಂದಲೇ ನೀನು ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ. ನಿನಗೆ ತಿಳಿಯದ ದೇಶದಲ್ಲಿ ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ. ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”


ಆಗ ನಾನು ಇಸ್ರಾಯೇಲಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ಕಿತ್ತುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಅದನ್ನು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಆಸ್ಪದವಾಗುವಂತೆ ಮಾಡುವೆನು.


ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದುಹೋದ ಮಡಿಕೆಯೆ? ಮೆಚ್ಚುಗೆ ಇಲ್ಲದ ಪಾತ್ರೆಯೆ? ಏಕೆ ಕೊನ್ಯನೂ, ಅವನ ಸಂತಾನವೂ ಬೀದಿಪಾಲಾಗಿದ್ದಾರೆ, ತಮಗೆ ತಿಳಿಯದ ದೇಶಕ್ಕೆ ಗಡಿಪಾರಾಗಿದ್ದಾರೆ?


ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯು ಯೆರೂಸಲೇಮಿನಲ್ಲಿ ನಡಿಸಿದ್ದಕ್ಕೆ ಪ್ರತಿಫಲವಾಗಿ ನಾನು ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಂತೆ ಮಾಡುವೆನು.


ಓ ಇಸ್ರಾಯೇಲಿನ ನಿರೀಕ್ಷೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವವರೇ, ನೀನು ಏಕೆ ದೇಶದಲ್ಲಿ ಅನ್ಯನ ಹಾಗೆಯೂ, ರಾತ್ರಿ ಕಳೆಯುವುದಕ್ಕೆ ಇಳಿದುಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?


ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ. ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.


“ ‘ನಮ್ಮ ದೇವರಾದ ಯೆಹೋವ ದೇವರು ನಮಗೆ ಯಾತಕ್ಕೆ ಇವುಗಳನ್ನೆಲ್ಲಾ ಮಾಡುತ್ತಾರೆ,’ ಎಂದು ನೀವು ಕೇಳುವಾಗ, ನೀನು ಅವರಿಗೆ ಹೀಗೆ ಹೇಳಬೇಕು: ‘ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ, ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ.’


ಆದ್ದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಂತೆ ನಡೆದುಕೊಂಡರು.


ಯೆಹೋವ ದೇವರು ಅವರನ್ನು ತೀವ್ರಕೋಪದಲ್ಲಿಯೂ, ಮಹಾ ಆಸಕ್ತಿಯಲ್ಲಿಯೂ ದೇಶದಿಂದ ಕಿತ್ತುಹಾಕಿ, ಇಂದು ಇರುವ ಪ್ರಕಾರ ಅವರನ್ನು ಬೇರೆ ದೇಶಕ್ಕೆ ಕಳುಹಿಸಿದ್ದಾರೆ.”


ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಮೋಶೆಯೂ ಸಮುಯೇಲನೂ ನನ್ನ ಮುಂದೆ ನಿಂತರೂ, ನನ್ನ ಮನಸ್ಸು ಈ ಜನರ ಮೇಲೆ ಇರುವುದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿಬಿಡು. ಅವರು ಹೋಗಲಿ.


ನಿನ್ನನ್ನೂ, ನಿನ್ನ ಹೆತ್ತ ತಾಯಿಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಹಾಕಿಬಿಡುವೆನು. ನೀವು ಅಲ್ಲೇ ಸಾಯುವಿರಿ.


ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು. ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು.


ಏಕೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಈ ಒಂದೇ ಸಾರಿ ದೇಶದ ನಿವಾಸಿಗಳನ್ನು ಕವಣೆಯಿಂದ ಎಸೆದುಬಿಡುತ್ತೇನೆ. ಅವರಿಗೆ ತಗಲುವ ಹಾಗೆ ಅವರನ್ನು ಸಂಕಟಪಡಿಸುತ್ತೇನೆ.”


ಯೆಹೋವ ದೇವರು ಹೀಗೆ ಹೇಳುತ್ತಾರೆ: “ದುಃಖದ ಮನೆಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡುವುದಕ್ಕೂ, ದುಃಖ ಪಡುವುದಕ್ಕೂ ಹೋಗಬೇಡ. ಏಕೆಂದರೆ ನಾನು ನನ್ನ ಸಮಾಧಾನವನ್ನೂ, ಪ್ರೀತಿಯನ್ನೂ, ಕನಿಕರವನ್ನೂ ಈ ಜನರಿಂದ ತೆಗೆದುಹಾಕಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು