ಯೆರೆಮೀಯ 14:17 - ಕನ್ನಡ ಸಮಕಾಲಿಕ ಅನುವಾದ17 “ಆದ್ದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು. “ ‘ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ. ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ಏಟಿನಿಂದಲೂ, ದೊಡ್ಡ ಪೆಟ್ಟಿನಿಂದಲೂ ಗಾಯಗೊಂಡಿದ್ದಾಳೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ನೀನು ಅವರಿಗೆ, “ನನ್ನ ಕಣ್ಣೀರು ರಾತ್ರಿ ಹಗಲು ನಿರಂತರ ಸುರಿಯಲಿ; ಏಕೆಂದರೆ ನನ್ನ ಜನವೆಂಬ ಯುವತಿಗೆ ದೊಡ್ಡ ಗಾಯವಾಯಿತು, ಹೌದು ಗಡುಸಾದ ಪೆಟ್ಟು ಬಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 “ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ‘ರಾತ್ರಿಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ನೀನು ಈ ಮಾತನ್ನು ಅವರಿಗೆ ಹೇಳು - ನನ್ನ ಕಣ್ಣೀರು ರಾತ್ರೀಹಗಲು ನಿರಂತರ ಸುರಿಯಲಿ; ಏಕಂದರೆ ನನ್ನ ಜನವೆಂಬ ಯುವತಿಗೆ ದೊಡ್ಡ ಗಾಯವಾಯಿತು, ಹೌದು ಗಡುಸಾದ ಪೆಟ್ಟುಬಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 “ಯೆರೆಮೀಯನೇ, ಯೆಹೂದದ ಜನರಿಗೆ ಈ ಸಂದೇಶವನ್ನು ಹೇಳು: ‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು. ನಾನು ನನ್ನ ಕನ್ಯೆಯಾದ ಮಗಳಿಗಾಗಿ ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು. ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ, ಅವರಿಗೆ ಬಹಳ ಗಾಯಗಳಾಗಿವೆ. ಅಧ್ಯಾಯವನ್ನು ನೋಡಿ |