ಯೆರೆಮೀಯ 12:13 - ಕನ್ನಡ ಸಮಕಾಲಿಕ ಅನುವಾದ13 ಗೋಧಿಯನ್ನು ಬಿತ್ತಿದ್ದಾರೆ, ಆದರೆ ಮುಳ್ಳುಗಳನ್ನು ಕೊಯ್ಯುವವರು ಕಷ್ಟಪಟ್ಟಿದ್ದಾರೆ, ಆದರೆ ಪ್ರಯೋಜನವಾಗುವುದಿಲ್ಲ. ಯೆಹೋವ ದೇವರ ಉಗ್ರಕೋಪದ ಉರಿಯಿಂದ ನಿಮ್ಮ ಸುಗ್ಗಿಯ ನಿಮಿತ್ತ ನಾಚಿಕೆ ಪಡುವಿರಿ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಗೋದಿಯನ್ನು ಬಿತ್ತಿ ಮುಳ್ಳನ್ನು ಕೊಯ್ದಿದ್ದಾರೆ; ಕ್ಷೇಮಕೆಡುವಷ್ಟು ಪ್ರಯಾಸಪಟ್ಟರೂ ಯಾವ ಲಾಭವನ್ನೂ ಹೊಂದಲಿಲ್ಲ. ಯೆಹೋವನ ರೋಷಾಗ್ನಿಯ ನಿಮಿತ್ತ ನಿಮ್ಮ ಬೆಳೆಯ ವಿಷಯವಾಗಿ ನಿಮಗೆ ನಾಚಿಕೆಯಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಜನರು ಗೋದಿಯನ್ನು ಬಿತ್ತಿದರು ಆದರೆ ಮುಳ್ಳುಗಿಡವನ್ನು ಕೊಯ್ದರು ! ಕ್ಷೇಮ ಕೆಡುವಷ್ಟು ಪ್ರಯಾಸಪಟ್ಟರು ಆದರೆ ಯಾವ ಲಾಭವೂ ಗಿಟ್ಟದೆಹೋಯಿತು. ತಮ್ಮ ಬೆಳೆಯ ವಿಷಯವಾಗಿ ಹೇಸಬೇಕಾಯಿತು ನನ್ನ ಕೋಪಾಗ್ನಿಯೆ ಇದಕ್ಕೆ ಕಾರಣವಾಯಿತು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಗೋದಿಯನ್ನು ಬಿತ್ತಿ ಮುಳ್ಳನ್ನು ಕೊಯ್ದಿದ್ದಾರೆ; ಕ್ಷೇಮ ಕೆಡುವಷ್ಟು ಪ್ರಯಾಸಪಟ್ಟರೂ ಯಾವ ಲಾಭವನ್ನೂ ಹೊಂದಲಿಲ್ಲ; ಯೆಹೋವನ ರೋಷಾಗ್ನಿಯ ನಿವಿುತ್ತ ನಿಮ್ಮ ಬೆಳೆಯ ವಿಷಯವಾಗಿ ನಿಮಗೆ ನಾಚಿಕೆಯಾಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಜನರು ಗೋಧಿಯನ್ನು ಬಿತ್ತುವರು; ಆದರೆ ಅವರು ಕೇವಲ ಮುಳ್ಳಿನ ರಾಶಿಯನ್ನು ಕೊಯ್ಯುವರು. ಅವರು ತುಂಬ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು. ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ. ಅವರು ತಮ್ಮ ಬೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು. ಯೆಹೋವನ ರೋಷವು ಹಾಗೆಲ್ಲ ಮಾಡುವುದು.” ಅಧ್ಯಾಯವನ್ನು ನೋಡಿ |