Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 1:13 - ಕನ್ನಡ ಸಮಕಾಲಿಕ ಅನುವಾದ

13 ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, “ನೀನು ಏನು ನೋಡುತ್ತೀ?” ಎಂದು ಕೇಳಿದ್ದಕ್ಕೆ, ನಾನು, “ಬೇಯುವ ಮಡಕೆಯನ್ನು ನೋಡುತ್ತೇನೆ, ಅದರ ಬಾಯಿ ಉತ್ತರದ ಕಡೆಗೆ ಇದೆ,” ಎಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಎರಡನೆಯ ಬಾರಿ, “ನೀನು ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತನ್ನು ಕೇಳಿದೆನು. ಅದಕ್ಕೆ ನಾನು, “ಉರಿಸುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯನ್ನು ನೋಡುತ್ತೇನೆ. ಅದರ ಬಾಯಿ ಉತ್ತರ ದಿಕ್ಕಿನಿಂದ ಈ ಕಡೆಗೆ ಬಾಗಿಕೊಂಡಿದೆ” ಅಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಮತ್ತೆ ಸರ್ವೇಶ್ವರ ನನಗೆ, “ಇನ್ನೂ ಏನು ನೋಡುತ್ತಿರುವೆ?” ಎಂದರು. ಅದಕ್ಕೆ ನಾನು, “ಉರಿಯುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯೊಂದನ್ನು ನೋಡುತ್ತಿದ್ದೇನೆ. ಅದರ ಬಾಯಿ ಉತ್ತರದಿಂದ ಇತ್ತ ಬಾಗಿಕೊಂಡಿದೆ,” ಎಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇನ್ನೊಂದು ಸಲ ಯೆಹೋವನು ಏನು ನೋಡುತ್ತೀ ಎಂದು ನನ್ನನ್ನು ಕೇಳಿದನು. ಅದಕ್ಕೆ ನಾನು - ಉರಿಸುತ್ತಿರುವ ಬೆಂಕಿಯಿಂದುಕ್ಕುವ ಹಂಡೆಯನ್ನು ನೋಡುತ್ತೇನೆ. ಅದರ ಬಾಯಿ ಬಡಗಲಿಂದ ಇತ್ತ ಬಾಗಿಕೊಂಡಿದೆ ಅಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇನ್ನೊಂದು ಸಲ ಯೆಹೋವನು, “ನಿನಗೆ ಏನು ಕಾಣುತ್ತಿದೆ?” ಎಂದು ಕೇಳಿದನು. ನಾನು ಯೆಹೋವನಿಗೆ, “ಕುದಿಯುವ ನೀರಿನ ಒಂದು ಹಂಡೆ ಕಾಣುತ್ತಿದೆ. ಆ ಹಂಡೆಯು ಉತ್ತರದಿಂದ ಈ ಕಡೆಗೆ ಬಾಗಿಕೊಂಡಿದೆ” ಎಂದು ಉತ್ತರಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 1:13
10 ತಿಳಿವುಗಳ ಹೋಲಿಕೆ  

“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಕೊಂದು ಹಾಕಿದವರ ದೇಹಗಳೇ ಮಾಂಸ, ಈ ಪಟ್ಟಣವು ಬೇಯಿಸುವ ಪಾತ್ರೆ. ಆದರೆ ನಾನು ನಿಮ್ಮನ್ನು ಅದರಿಂದ ಹೊರಗೆ ತರುತ್ತೇನೆ.


ಅವರು, ‘ಇತ್ತೀಚಿಗೆ ನಮ್ಮ ಮನೆಗಳು ನಿರ್ಮಾಣವಾಗಿಲ್ಲವೇ? ಈ ಪಟ್ಟಣವು ಪಾತ್ರೆ, ಮತ್ತು ನಾವು ಅದರಲ್ಲಿರುವ ಮಾಂಸ,’ ಎನ್ನುತ್ತಾರೆ.


ನಿದ್ರೆ ಹತ್ತಿದವನಂತಿದ್ದ ನನ್ನನ್ನು ಎಬ್ಬಿಸಿದನು. ಅವನು ನನಗೆ, “ನೀನು ಏನು ನೋಡುತ್ತೀ?” ಎಂದು ಕೇಳಿದಾಗ ನಾನು, “ಏಳು ದೀಪಗಳುಳ್ಳ ಬಂಗಾರದ ದೀಪಸ್ತಂಭ ಒಂದನ್ನು ನೋಡುತ್ತಿದ್ದೇನೆ. ಅದರ ಮೇಲೆ ಎಣ್ಣೆಯ ಪಾತ್ರೆಗಳಿವೆ.


ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದುದರಿಂದ, ಆ ಕಾರ್ಯವು ದೇವರಿಂದ ಸ್ಥಿರಪಡಿಸಲಾಗಿದೆ. ಆದ್ದರಿಂದ ದೇವರು ಅದನ್ನು ಬೇಗನೆ ನೆರವೇರಿಸುವರು.


ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.


ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.


“ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ, ನನ್ನ ಯಾವುದೇ ಮಾತು ಇನ್ನು ತಡವಾಗದು. ನಾನು ಹೇಳಿದ್ದೆಲ್ಲವನ್ನು ನೆರವೇರುವುದೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”


ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು