ಯಾಜಕಕಾಂಡ 7:30 - ಕನ್ನಡ ಸಮಕಾಲಿಕ ಅನುವಾದ30 ಅವನು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಯೆಹೋವ ದೇವರ ಮುಂದೆ ನೈವೇದ್ಯರೂಪವಾಗಿ ನಿವಾಳಿಸುವದಕ್ಕೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201930 ಯೆಹೋವನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪಶುವಿನ ಕೊಬ್ಬನ್ನು ತನ್ನ ಕೈಯಿಂದಲೇ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವುದಕ್ಕಾಗಿ ತಂದು ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)30 ಸರ್ವೇಶ್ವರನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪ್ರಾಣಿಯ ಕೊಬ್ಬನ್ನು ತನ್ನ ಕೈಯಿಂದಲೆ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಲು ತಂದು ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)30 ಯೆಹೋವನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದದ್ದನ್ನು ಅಂದರೆ ಪಶುವಿನ ಕೊಬ್ಬನ್ನು ತನ್ನ ಕೈಯಿಂದಲೇ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನೂ ನೈವೇದ್ಯರೂಪವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವದಕ್ಕಾಗಿ ತಂದು ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್30 ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು. ಅಧ್ಯಾಯವನ್ನು ನೋಡಿ |