Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 7:1 - ಕನ್ನಡ ಸಮಕಾಲಿಕ ಅನುವಾದ

1 “ ‘ಇವು ಪ್ರಾಯಶ್ಚಿತ್ತ ಬಲಿಯ ನಿಯಮಗಳು: ಇದು ಮಹಾಪರಿಶುದ್ಧವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 “‘ಪ್ರಾಯಶ್ಚಿತ್ತಯಜ್ಞದ ನಿಯಮಗಳು: ಆ ಯಜ್ಞವು ಮಹಾಪರಿಶುದ್ಧವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 “ಪ್ರಾಯಶ್ಚಿತ್ತ ಬಲಿ ನಿಯಮಗಳು ಹೀಗಿವೆ: ಈ ಬಲಿ ಮಹಾಪರಿಶುದ್ಧವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಪ್ರಾಯಶ್ಚಿತ್ತ ಯಜ್ಞನಿಯಮಗಳು. ಆ ಯಜ್ಞವು ಮಹಾಪರಿಶುದ್ಧವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 “ದೋಷಪರಿಹಾರಕ ಯಜ್ಞದ ನಿಯಮಗಳು: ಅದು ಪವಿತ್ರವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 7:1
17 ತಿಳಿವುಗಳ ಹೋಲಿಕೆ  

“ಆರೋನನಿಗೂ, ಅವನ ಪುತ್ರರಿಗೂ ಹೇಳು: ‘ಪಾಪ ಪರಿಹಾರದ ಬಲಿಯ ನಿಯಮವು ಇದೇ. ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯೂ ಯೆಹೋವ ದೇವರ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು.


ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ಅವರು ನನಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆಗಳಲ್ಲಿ ಅವರ ಪಾಲನ್ನು ಅವರಿಗೆ ನಾನು ಕೊಟ್ಟಿದ್ದೇನೆ. ಅದು ದೋಷಪರಿಹಾರದ ಬಲಿಯ ಹಾಗೆಯೂ ಮಹಾಪರಿಶುದ್ಧವಾದದ್ದು.


ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಬೇಯಿಸಿದ ಧಾನ್ಯ ಸಮರ್ಪಣೆಯನ್ನು ಸುಡುವಂತೆ ಏರ್ಪಡಿಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡುವುದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು,” ಎಂದು ಹೇಳಿದನು.


ಧಾನ್ಯ ಸಮರ್ಪಣೆಯನ್ನು ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅವರು ತಿನ್ನಬೇಕು. ಇಸ್ರಾಯೇಲಿನಲ್ಲಿ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.


ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡು ಮೇಜುಗಳು ಈ ಕಡೆಗೆ ಮತ್ತು ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.


ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.


ಅವನು ದೇವರ ರೊಟ್ಟಿಯಲ್ಲಿ ಪರಿಶುದ್ಧವಾದದ್ದನ್ನೂ, ಮಹಾಪರಿಶುದ್ಧವಾದದ್ದನ್ನೂ ತಿನ್ನಬಹುದು.


“ ‘ಆದರೆ ಅವರು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅಶಕ್ತರಾಗಿದ್ದರೆ, ಪಾಪಮಾಡಿದವರು ತಮ್ಮ ಬಲಿಗಾಗಿ, ಮೂರು ಸೇರು ಗೋಧಿ ಹಿಟ್ಟನ್ನು ಪಾಪ ಪರಿಹಾರದ ಬಲಿಯಾಗಿ ತರಬೇಕು. ಅವರು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಏಕೆಂದರೆ ಅದು ದೋಷಪರಿಹಾರ ಬಲಿಯಾಗಿದೆ.


ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಅವನು ಪಾಪ ಪರಿಹಾರದ ಬಲಿಗೆ ತಂದಿರುವುದನ್ನು ಮೊದಲು ಸಮರ್ಪಿಸಿ, ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು. ಆದರೆ ಅದನ್ನು ವಿಭಾಗಿಸಬಾರದು.


“ ‘ಯಾರಾದರೂ ಒಂದು ಕುರಿಮರಿಯನ್ನು ತರುವುದಕ್ಕೆ ಅಶಕ್ತರಾಗಿದ್ದರೆ, ತಾವು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ, ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ಯೆಹೋವ ದೇವರಿಗೆ ತರಬೇಕು. ಒಂದನ್ನು ಪಾಪ ಪರಿಹಾರದ ಬಲಿಗಾಗಿ, ಮತ್ತೊಂದನ್ನು ದಹನಬಲಿಗಾಗಿ ತರಬೇಕು.


“ಯಾರಾದರೂ ಅತಿಕ್ರಮಿಸಿದ್ದರೆ ಮತ್ತು ಯೆಹೋವ ದೇವರ ಪರಿಶುದ್ಧ ಸಂಗತಿಗಳನ್ನು ಅರಿಯದೆ ಪಾಪಮಾಡಿದ್ದರೆ, ಅವರು ತಮ್ಮ ಅತಿಕ್ರಮಕ್ಕಾಗಿ ತಮ್ಮ ಹಿಂಡುಗಳಿಂದ ಕಳಂಕರಹಿತವಾದ ಟಗರನ್ನು ಸಮರ್ಪಿಸಬೇಕು. ಪವಿತ್ರ ಸ್ಥಳಕ್ಕೆ ನೇಮಕವಾದ ಎರಡು ಬೆಳ್ಳಿನಾಣ್ಯ ಅಥವಾ ಹೆಚ್ಚು ಬೆಲೆಬಾಳುವ ಟಗರನ್ನು ಹಿಂಡಿನಿಂದ ತಂದು ಪ್ರಾಯಶ್ಚಿತ್ತ ಬಲಿಗಾಗಿ ಯೆಹೋವ ದೇವರಿಗೆ ಅರ್ಪಿಸಬೇಕು.


ಲೇವಿಯನಾಗಿರುವ ಇಮ್ನನ ಮಗ ಕೋರೆಯು ಎಂಬ ಪೂರ್ವದಿಕ್ಕಿನಲ್ಲಿರುವ ದ್ವಾರಪಾಲಕನು ಯೆಹೋವ ದೇವರ ಕಾಣಿಕೆಗಳನ್ನೂ, ಮಹಾಪರಿಶುದ್ಧವಾದವುಗಳನ್ನೂ ಪಾಲು ಹಂಚುವುದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಕಾಣಿಕೆಗಳ ಮೇಲ್ವಿಚಾರಕನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು