Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 5:17 - ಕನ್ನಡ ಸಮಕಾಲಿಕ ಅನುವಾದ

17 “ಯಾರಾದರೂ ಯೆಹೋವ ದೇವರು ನಿಷೇಧಿಸಿದ ಆಜ್ಞೆಗಳಲ್ಲಿ ಯಾವುದನ್ನಾದರೂ ಮಾಡಿ, ಪಾಪಮಾಡಿದರೆ, ಅದು ಅವರಿಗೆ ತಿಳಿಯದಿದ್ದರೂ ಅವರು ಅಪರಾಧಿಯಾಗಿರುವರು ಮತ್ತು ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಕ್ಕೆ ಒಳಗಾದರೆ, ಅದು ಅವನಿಗೆ ತಿಳಿಯದೆ ಹೋದರೂ ಅವನು ಅದರಿಂದ ಅಪರಾಧಿಯಾಗಿ ತನ್ನ ಪಾಪಫಲವನ್ನು ಅನುಭವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 “ನಿಮ್ಮಲ್ಲಿ ಯಾರಾದರು ಸರ್ವೇಶ್ವರನು ವಿಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ಮಾಡಿ ದೋಷಕ್ಕೆ ಒಳಗಾದರೆ, ಅದು ಅವರಿಗೆ ತಿಳಿಯದೆ ಹೋದರೂ, ಅವರು ಅದರಿಂದ ಅಪರಾಧಿಯಾಗಿ ತಮ್ಮ ಪಾಪಫಲವನ್ನು ಅನುಭವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವದನ್ನಾದರೂ ಮಾಡಿ ದೋಷಕ್ಕೆ ಒಳಗಾದರೆ ಅದು ಅವನಿಗೆ ತಿಳಿಯದೆಹೋದರೂ ಅವನು ಅದರಿಂದ ಅಪರಾಧಿಯಾಗಿ ತನ್ನ ಪಾಪಫಲವನ್ನು ಅನುಭವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದಾದರೊಂದನ್ನು ಮಾಡಿ ದೋಷಕ್ಕೆ ಗುರಿಯಾಗಿದ್ದರೆ, ಅದು ಅವನಿಗೆ ತಿಳಿದಿಲ್ಲದಿದ್ದರೂ ಅವನು ಆ ಪಾಪಫಲವನ್ನು ಅನುಭವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 5:17
11 ತಿಳಿವುಗಳ ಹೋಲಿಕೆ  

“ ‘ಸಾಮಾನ್ಯ ಜನರಲ್ಲಿ ಯಾವನಾದರೂ ಮಾಡಬಾರದವುಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,


“ ‘ಮಾಡಬಾರದ ಕೆಲಸಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ಯಾವುದನ್ನಾದರೂ ಇಸ್ರಾಯೇಲರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಮತ್ತು ಅದು ಸಮೂಹಕ್ಕೆ ಕಣ್ಮರೆಯಾಗಿದ್ದರೆ


ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ? ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.


“ಯಾರಾದರೂ ಅತಿಕ್ರಮಿಸಿದ್ದರೆ ಮತ್ತು ಯೆಹೋವ ದೇವರ ಪರಿಶುದ್ಧ ಸಂಗತಿಗಳನ್ನು ಅರಿಯದೆ ಪಾಪಮಾಡಿದ್ದರೆ, ಅವರು ತಮ್ಮ ಅತಿಕ್ರಮಕ್ಕಾಗಿ ತಮ್ಮ ಹಿಂಡುಗಳಿಂದ ಕಳಂಕರಹಿತವಾದ ಟಗರನ್ನು ಸಮರ್ಪಿಸಬೇಕು. ಪವಿತ್ರ ಸ್ಥಳಕ್ಕೆ ನೇಮಕವಾದ ಎರಡು ಬೆಳ್ಳಿನಾಣ್ಯ ಅಥವಾ ಹೆಚ್ಚು ಬೆಲೆಬಾಳುವ ಟಗರನ್ನು ಹಿಂಡಿನಿಂದ ತಂದು ಪ್ರಾಯಶ್ಚಿತ್ತ ಬಲಿಗಾಗಿ ಯೆಹೋವ ದೇವರಿಗೆ ಅರ್ಪಿಸಬೇಕು.


“ ‘ಒಬ್ಬ ಅಧಿಪತಿಯು ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,


ದಂಡನೆಗೆ ಯೋಗ್ಯವಾದದ್ದನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳಿಗೆ ಗುರಿಯಾಗುವನು. ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು.”


ಆದರೆ ಅನುಮಾನವುಳ್ಳವರು ಊಟಮಾಡುವುದು ವಿಶ್ವಾಸದಿಂದ ಅಲ್ಲವಾದ್ದರಿಂದ ಅವರು ದೋಷಿಯಾಗುತ್ತಾರೆ. ವಿಶ್ವಾಸವಿಲ್ಲದೆ ಮಾಡುವ ಎಲ್ಲವೂ ಪಾಪವಾಗಿವೆ.


ಅಲ್ಲದೆ ಅವನು ಹಿಂಡಿನೊಳಗಿಂದ ಕಳಂಕರಹಿತವಾದ ಒಂದು ಟಗರನ್ನು ನಿನ್ನ ಅಂದಾಜಿಗನುಸಾರ ಪ್ರಾಯಶ್ಚಿತ್ತ ಬಲಿಗಾಗಿ, ಯಾಜಕನ ಬಳಿಗೆ ತರಬೇಕು. ಯಾಜಕನು, ಅಜ್ಞಾನದಿಂದ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ, ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನಿಗೆ ಕ್ಷಮೆ ದೊರಕುವುದು.


ಅವನು ನಿಶ್ಚಯವಾಗಿ ಯೆಹೋವ ದೇವರ ವಿರುದ್ಧವಾಗಿ ಅಪರಾಧ ಮಾಡಿದ್ದಾನೆ, ಅದಕ್ಕಾಗಿ ಇದು ಪ್ರಾಯಶ್ಚಿತ್ತ ಬಲಿಯಾಗಿದೆ,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು