Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 5:16 - ಕನ್ನಡ ಸಮಕಾಲಿಕ ಅನುವಾದ

16 ಪರಿಶುದ್ಧವಾದದ್ದಲ್ಲದೆ, ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ವಸ್ತುಗಳನ್ನು ಅದಕ್ಕೆ ಐದನೆಯ ಪಾಲನ್ನು ಕೂಡಿಸಿ, ಅದನ್ನು ಯಾಜಕನಿಗೆ ಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವನು ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ಪವಿತ್ರ ವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ತಾವು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪರಿಹಾರಾರ್ಥವಾಗಿ ತಂದ ಟಗರಿನಿಂದ ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದಾಗ ಅವರಿಗೆ ಕ್ಷಮೆ ದೊರಕುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಮತ್ತು ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ವಸ್ತುಗಳನ್ನು ಅಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 5:16
22 ತಿಳಿವುಗಳ ಹೋಲಿಕೆ  

ಅವನು ಮಾಡಿದ ಪಾಪವನ್ನು ಅರಿಕೆ ಮಾಡಬೇಕು. ಅವನ ಅಪರಾಧದ ಬದಲುಕೊಟ್ಟು, ಅದರ ಸಂಗಡ ಅದರ ಐದನೆಯ ಪಾಲನ್ನು ಕೂಡಿಸಿ, ಯಾರಿಗೆ ಅಪರಾಧ ಮಾಡಿದರೋ, ಅವರಿಗೆ ಕೊಡಬೇಕು.


“ ‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.


ಯಾವನಾದರೂ ತನ್ನ ಹತ್ತನೆಯ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ, ಅದಕ್ಕಿಂತ ಹೆಚ್ಚಾಗಿ ಅದರ ಐದನೆಯ ಒಂದು ಪಾಲನ್ನು ಕೊಡಬೇಕು.


ಆದರೆ ಅದು ಅಶುದ್ಧ ಪಶುಗಳಲ್ಲಿ ಹುಟ್ಟಿದ್ದಾಗಿದ್ದರೆ, ಹರಕೆ ಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆಹೋದರೆ ಅದನ್ನು ಕಟ್ಟಿದ ಕ್ರಯದ ಪ್ರಕಾರ ಮಾರಬೇಕು.


ಆದರೆ ಪ್ರತಿಷ್ಠೆ ಪಡಿಸಿದವನು ತನ್ನ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಒಂದು ಭಾಗ ಹಣವನ್ನು ಕೊಡಲಿ, ಆಗ ಅದು ಅವನದಾಗಿರುವುದು.


ಹರಕೆ ಮಾಡುವವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿದ್ದರೆ, ನೀನು ನಿರ್ಧರಿಸಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು.


ಅವನು ಕ್ರಮದ ಪ್ರಕಾರ, ಎರಡನೆಯದನ್ನು ದಹನಬಲಿಯಾಗಿ ಸಮರ್ಪಿಸಬೇಕು. ಯಾಜಕನು ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.


ಆದರೆ ಮೊದಲು ದಮಸ್ಕದಲ್ಲಿದ್ದವರಿಗೂ ಆಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಗಳಲ್ಲಿ ಇದ್ದವರಿಗೂ ಯೆಹೂದ್ಯರಲ್ಲದವರಿಗೂ ನಾನು ಬೋಧಿಸಿದೆನು. ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು, ಪಶ್ಚಾತ್ತಾಪಕ್ಕೆ ಯೋಗ್ಯ ಕೃತ್ಯಗಳನ್ನು ನಡೆಸಬೇಕೆಂದು ನಾನು ಘೋಷಿಸಿದೆನು.


ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.


ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.


ಇವುಗಳಲ್ಲಿ ಒಂದನ್ನು ಪಾಪದ ವಿಷಯವಾಗಿ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲಾಗುವುದು. ಉಳಿದದ್ದು ಯಾಜಕನಿಗಾಗಿ ಧಾನ್ಯ ಸಮರ್ಪಣೆಯಾಗಿರುವುದು.’ ”


ಅವನು ತಾನು ಮಾಡಿದ ಪಾಪಕ್ಕಾಗಿ ಯೆಹೋವ ದೇವರಿಗೆ ಅಪರಾಧ ಬಲಿಯನ್ನು ಪಾಪ ಪರಿಹಾರದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣು ಕುರಿಯನ್ನಾಗಲಿ, ಒಂದು ಮೇಕೆಯನ್ನಾಗಲಿ ತರಬೇಕು. ಯಾಜಕನು ಅವನ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು.


ಅವರು ಸಮಾಧಾನದ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಯಾಜಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.


“ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದು ಕೊಯ್ದರೆ, ಇಲ್ಲವೆ ಅದನ್ನು ಮಾರಿದರೆ, ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ, ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.


ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಪ್ರಾಯಶ್ಚಿತ್ತದ ಬಲಿಯನ್ನು ವಧಿಸಬೇಕು. ಅದರ ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.


ಆದರೆ ಅಪರಾಧಕ್ಕೆ ಬದಲು ಕೊಡುವುದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಅದು ಯೆಹೋವ ದೇವರಿಗೆ ಸೇರಬೇಕು. ಅದು ದೋಷಪರಿಹಾರಕ್ಕಾಗಿ ಅರ್ಪಿಸಲಾಗುವ ಪ್ರಾಯಶ್ಚಿತ್ತದ ಟಗರು, ಇವೆರಡೂ ಯಾಜಕನಿಗೆ ಸೇರಬೇಕು.


ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು,” ಎಂದರು.


ಪಾಪ ಪರಿಹಾರದ ಬಲಿಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ, ಈ ಹೋರಿಗೂ ಮಾಡಬೇಕು. ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವರಿಗೆ ಕ್ಷಮಾಪಣೆಯಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು