Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 4:4 - ಕನ್ನಡ ಸಮಕಾಲಿಕ ಅನುವಾದ

4 ಅವನು ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿಗೆ ತರಬೇಕು. ತನ್ನ ಕೈಯನ್ನು ಆ ಹೋರಿಯ ತಲೆಯ ಮೇಲಿಟ್ಟು, ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವನು ಆ ಹೋರಿಯನ್ನು ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ತಂದು, ಅದರ ತಲೆಯ ಮೇಲೆ ಕೈಯನ್ನಿಟ್ಟು, ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅವನು ಆ ಹೋರಿಯನ್ನು ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ, ತಂದು ಅದರ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವನು ಆ ಹೋರಿಯನ್ನು ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಲಿಗೆ ತಂದು ಅದರ ತಲೆಯ ಮೇಲೆ ಕೈಯಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅಭಿಷಿಕ್ತನಾದ ಯಾಜಕನು ಹೋರಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 4:4
11 ತಿಳಿವುಗಳ ಹೋಲಿಕೆ  

ಕ್ರಿಸ್ತ ಯೇಸುವು ನೀತಿವಂತರಾಗಿದ್ದರೂ ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವುದಕ್ಕಾಗಿ, ಒಂದೇ ಸಾರಿ ಪಾಪಗಳಿಗೋಸ್ಕರ ಬಾಧೆಪಟ್ಟು ಶರೀರದಲ್ಲಿ ಮರಣಹೊಂದಿದರು. ಆದರೆ ಆತ್ಮದಲ್ಲಿ ಬದುಕುವವರಾದರು.


ಅರವತ್ತೆರಡು ವಾರಗಳಾದ ಮೇಲೆ ಆ ಅಭಿಷಿಕ್ತರನ್ನು ಕೊಂದುಹಾಕುವರು. ಅವರಿಗೆ ಏನೂ ಇರುವುದಿಲ್ಲ. ಆದರೆ ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ, ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವುದು. ಅಂತ್ಯದವರೆಗೂ ಯುದ್ಧವಾಗಿ ನಾಶ ಸಂಭವಿಸುವುದು.


ನಾವೆಲ್ಲರೂ ದಾರಿತಪ್ಪಿದ ಕುರಿಗಳಂತೆ ಇದ್ದೆವು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು. ಯೆಹೋವ ದೇವರು ನಮ್ಮ ಎಲ್ಲಾ ದುಷ್ಕೃತ್ಯಗಳನ್ನು ಆತನ ಮೇಲೆ ಹಾಕಿದರು.


ಆರೋನನು ಆ ಜೀವವುಳ್ಳ ಹೋತದ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು, ಅದರ ಮೇಲೆ ಇಸ್ರಾಯೇಲರ ಎಲ್ಲಾ ಅಕ್ರಮಗಳನ್ನೂ, ಅವರ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆಮಾಡಿ ಅವುಗಳನ್ನು ಹೋತದ ತಲೆಯ ಮೇಲೆ ಇರಿಸಿ, ನೇಮಕವಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.


ಸಮಾಜದ ಹಿರಿಯರು ಯೆಹೋವ ದೇವರ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.


ಅವರು ತಮ್ಮ ಕೈಯನ್ನು ಪಾಪದ ಬಲಿಯ ಮೇಲಿಟ್ಟು, ಆ ಪಾಪ ಪರಿಹಾರದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.


ಪಾಪ ಪರಿಹಾರದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಪುತ್ರರೂ ಪಾಪ ಪರಿಹಾರದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.


“ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರಿಗೆ ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿಯೂ ಮತ್ತೊಂದು ಹೋರಿಯನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು.


ಅರಸನ ಮುಂದೆಯೂ, ಸಭೆಯ ಮುಂದೆಯೂ ದೋಷಪರಿಹಾರದ ಬಲಿಗಾಗಿ ತಂದ ಹೋತಗಳನ್ನು ಹತ್ತಿರ ತೆಗೆದುಕೊಂಡು ಬಂದು, ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು