Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 3:16 - ಕನ್ನಡ ಸಮಕಾಲಿಕ ಅನುವಾದ

16 ಯಾಜಕನು ಅವುಗಳನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಸುವಾಸನೆಯ ಯಜ್ಞಾರ್ಪಣೆಯ ಆಹಾರವಾಗಿರುವುದು. ಎಲ್ಲಾ ಕೊಬ್ಬು ಯೆಹೋವ ದೇವರದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮದ ರೂಪವಾಗಿ ಅರ್ಪಿಸಿದ ಆಹಾರವಾಗಿರುವುದು. ಯಜ್ಞಪಶುಗಳ ಕೊಬ್ಬೆಲ್ಲವೂ ಯೆಹೋವನದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯಾಜಕನು ಅದನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ಸುಗಂಧಹೋಮ ರೂಪವಾಗಿ ಸರ್ವೇಶ್ವರನಿಗೆ ಆಹಾರವಾಗಿರುವುದು. ಬಲಿಪ್ರಾಣಿಗಳ ಕೊಬ್ಬೆಲ್ಲವು ಸರ್ವೇಶ್ವರನದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು. ಅದು ಸುಗಂಧ ಹೋಮರೂಪವಾಗಿ ಯೆಹೋವನಿಗೆ ಆಹಾರವಾಗಿರುವದು. ಯಜ್ಞಪಶುಗಳ ಕೊಬ್ಬೆಲ್ಲವೂ ಯೆಹೋವನದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಬಳಿಕ ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಇದು ಆಹಾರದ ರೂಪದಲ್ಲಿ ಯೆಹೋವನಿಗೆ ಅರ್ಪಿಸಿದ ಸುವಾಸನೆಯನ್ನು ಉಂಟುಮಾಡುವ ಸಮಾಧಾನಯಜ್ಞವಾಗಿರುತ್ತದೆ. ಆದರೆ ಅದರ ಕೊಬ್ಬು ಯೆಹೋವನಿಗೆ ಸೇರಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 3:16
19 ತಿಳಿವುಗಳ ಹೋಲಿಕೆ  

ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’


ಆದರೂ ಆತನನ್ನು ಜಜ್ಜುವುದು ಯೆಹೋವ ದೇವರ ಚಿತ್ತವಾಗಿತ್ತು. ಯೆಹೋವ ದೇವರು ಆತನನ್ನು ಸಂಕಟಕ್ಕೆ ಒಳಪಡಿಸಿದನು. ಯೆಹೋವ ದೇವರು ಆತನ ಪ್ರಾಣವನ್ನು ದೋಷಪರಿಹಾರದ ಬಲಿಯನ್ನಾಗಿ ಮಾಡುವಾಗ, ಆತನು ತನ್ನ ಸಂತಾನವನ್ನು ಕಾಣುವನು. ಆತನು ತನ್ನ ದಿವಸಗಳನ್ನು ಉದ್ದ ಮಾಡಿದ ಮೇಲೆ ಮತ್ತು ಯೆಹೋವ ದೇವರ ಚಿತ್ತವು ಆತನ ಕೈಯಲ್ಲಿ ಸಫಲವಾಗುವುದು.


ಸೊಲೊಮೋನನು ಮಾಡಿಸಿದ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಯ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಸೊಲೊಮೋನನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆಮಾಡಿ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.


ಯಾಜಕನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಬಲಿಪೀಠದ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಯೆಹೋವ ದೇವರಿಗೆ ಆಹ್ಲಾದಕರ ಸುಗಂಧ ವಾಸನೆಯಾಗಿ ಸುಡಬೇಕು.


ಆಗ ಅಲ್ಲಿ ಬೆಂಕಿಯು ಯೆಹೋವ ದೇವರ ಸನ್ನಿಧಿಯಿಂದ ಬಂದು, ಬಲಿಪೀಠದ ಮೇಲಿದ್ದ ದಹನಬಲಿಯನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಇದನ್ನು ಜನರೆಲ್ಲರೂ ಕಂಡಾಗ, ಅವರು ಆನಂದದಿಂದ ಜಯಘೋಷ ಮಾಡಿ ಅಡ್ಡಬಿದ್ದರು.


ಅವನು ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಂಡನು.


ಅವನು ಸಮಾಧಾನ ಬಲಿಯ ಕೊಬ್ಬನ್ನು ತೆಗೆದಂತೆ, ಅದರ ಎಲ್ಲಾ ಕೊಬ್ಬನ್ನು ತೆಗೆಯಬೇಕು. ಯಾಜಕನು ಅದನ್ನು ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯಾಗಿ ಸುಡಬೇಕು. ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.


ಅವರು ಸಮಾಧಾನದ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಯಾಜಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.


“ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಳ್ಳಬೇಕು. ಏಕೆಂದರೆ ಅದು ಪ್ರತಿಷ್ಠೆಯ ಟಗರು.


ನೀನು ಕರುಳುಗಳನ್ನೂ ಅವುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು.


ಇದಲ್ಲದೆ ದಹನಬಲಿಗಳೂ, ಸಮಾಧಾನದ ಬಲಿಗಳ ಕೊಬ್ಬೂ, ದಹನಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳವಾಗಿದ್ದವು. ಹೀಗೆ ಯೆಹೋವ ದೇವರ ಆಲಯದ ಸೇವೆಯು ಸಿದ್ಧವಾಯಿತು.


“ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು