ಯಾಜಕಕಾಂಡ 26:41 - ಕನ್ನಡ ಸಮಕಾಲಿಕ ಅನುವಾದ41 ನಾನು ಸಹ ಅವರಿಗೆ ವಿರೋಧವಾಗಿ ನಡೆದುಕೊಂಡು ಅವರನ್ನು ತಮ್ಮ ಶತ್ರುಗಳ ದೇಶದಲ್ಲಿ ಬರಮಾಡಿದ್ದನ್ನೂ ಅರಿಕೆಮಾಡಿದರೆ, ಆಗಲೇ ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆಬಾಗಿ, ಅವರು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಒಪ್ಪಿಕೊಳ್ಳುವುದಾದರೆ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201941 ನಾನು ಅವರಿಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶದಲ್ಲಿ ಸೆರೆಯವರನ್ನಾಗಿ ಮಾಡಬೇಕಾಯಿತೆಂದೂ ಒಪ್ಪಿ, ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆ ಬಾಗಿ ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವುದಾದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)41 ನಾನು ಅವರಿಗೆ ವಿರುದ್ಧವಾಗಿ ವರ್ತಿಸಿ ಶತ್ರುದೇಶದಲ್ಲಿ ಸೆರೆ ಸೇರಿಸಬೇಕಾಯಿತೆಂದು ಅರಿತುಕೊಂಡು, ತಮ್ಮ ಮೊಂಡುತನವನ್ನು ಬಿಟ್ಟು, ನನ್ನ ಆಜ್ಞೆಗೆ ತಲೆಬಾಗಿ, ತಮ್ಮ ಪಾಪ ಪರಿಣಾಮದ ಶಿಕ್ಷೆಯನ್ನು ಸ್ವೀಕರಿಸಿದ್ದೇ ಆದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)41 ನಾನು ತಮಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶಕ್ಕೆ [ಸೆರೆಯವರನ್ನಾಗಿ] ಬರಮಾಡಬೇಕಾಯಿತೆಂದೂ ಒಪ್ಪಿ ತಮ್ಮ ಮೊಂಡವಾದ ಮನಸ್ಸನ್ನು ನನ್ನ ಆಜ್ಞೆಗೆ ಒಳಪಡಿಸಿ, ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವದಾದರೆ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್41 ನಾನು ಅವರಿಗೆ ವಿಮುಖನಾಗಿ ಅವರನ್ನು ಶತ್ರುಗಳ ದೇಶಕ್ಕೆ ಕರೆದುಕೊಂಡು ಬಂದೆನೆಂದು ಅವರು ಅರಿತುಕೊಂಡು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಪಾಪಕ್ಕೆ ಬರತಕ್ಕ ಶಿಕ್ಷೆಯನ್ನು ಸ್ವೀಕರಿಸಲು ಯೋಗ್ಯರೆಂದು ಹೇಳಿಕೊಂಡರೆ ಅಧ್ಯಾಯವನ್ನು ನೋಡಿ |
ನಿಮ್ಮಲ್ಲಿ ತಪ್ಪಿಸಿಕೊಂಡವರು, ತಾವು ಸೆರೆಯಾಗಿ ಹೋಗುವಾಗ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ಅನ್ಯದೇವತೆಗಳಲ್ಲಿ ವಿಶ್ವಾಸವಿಟ್ಟು, ನನ್ನನ್ನೂ ತೊರೆದ ತಮ್ಮ ಹೃದಯವನ್ನು ಮತ್ತು ಅನ್ಯ ದೇವರ ವಿಗ್ರಹಗಳಲ್ಲಿ ಮೋಹಗೊಂಡ ತಮ್ಮ ಕಣ್ಣುಗಳನ್ನು ಮುರಿದವನು ನಾನೇ ಎಂಬುದಾಗಿ ಜ್ಞಾಪಕಮಾಡಿಕೊಳ್ಳುವರು. ಅವರು ತಮ್ಮ ಅಸಹ್ಯ ಕಾರ್ಯಗಳನ್ನು ಮಾಡುವ ಕೇಡುಗಳ ನಿಮಿತ್ತ ತಮ್ಮ ಬಗ್ಗೆ ತಾವೇ ಅಸಹ್ಯಪಡುವರು.