Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 25:6 - ಕನ್ನಡ ಸಮಕಾಲಿಕ ಅನುವಾದ

6 ದೇಶದ ಆ ಸಬ್ಬತ್ ವರ್ಷದಲ್ಲಿ ತಾನಾಗಿಯೇ ಬೆಳೆದದ್ದು ನಿಮ್ಮ ಆಹಾರಕ್ಕಾಗಿ ಇರುವುದು. ಅದು ನಿಮಗೂ, ನಿಮ್ಮ ದಾಸದಾಸಿಯರಿಗೂ, ನಿಮ್ಮ ಕೂಲಿಯವರಿಗೂ, ನಿಮ್ಮೊಂದಿಗೆ ಪ್ರವಾಸಿಯಾಗಿರುವ ಪರಕೀಯರಿಗೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಅಂತಹ ಸಬ್ಬತ್ ಸಂವತ್ಸರದಲ್ಲಿ ತಾನಾಗಿ ಭೂಮಿಯಲ್ಲಿ ಹುಟ್ಟಿದ್ದು ನಿಮಗೂ, ನಿಮ್ಮ ದಾಸದಾಸಿಯರಿಗೂ, ಕೂಲಿಯವರಿಗೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆದರೆ ಅಂಥ ಸಬ್ಬತ್ ಸಂವತ್ಸರದಲ್ಲಿ ಭೂಮಿ ತಾನಾಗಿಯೇ ಬೆಳೆದದ್ದು ನಿಮಗೆ, ನಿಮ್ಮ ದಾಸದಾಸಿಯರಿಗೆ, ಕೂಲಿಯವರಿಗೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದರೆ ಅಂಥ ಸಬ್ಬತ್ ಸಂವತ್ಸರದಲ್ಲಿ ತಾನಾಗಿ ಭೂವಿುಯಲ್ಲಿ ಹುಟ್ಟಿದ್ದು ನಿಮಗೂ ನಿಮ್ಮ ದಾಸದಾಸಿಯರಿಗೂ ಕೂಲಿಯವರಿಗೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಸಬ್ಬತ್ ವರ್ಷದಲ್ಲಿ ಭೂಮಿಯು ತಾನಾಗಿ ಫಲಿಸುವ ಬೆಳೆಯಿಂದ ನಿಮಗೆ ಸಾಕಷ್ಟು ಆಹಾರವಿರುವುದು. ನಿಮ್ಮ ದಾಸದಾಸಿಯರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದೇಶದಲ್ಲಿ ವಾಸವಾಗಿರುವ ಕೂಲಿಯಾಳುಗಳಿಗೂ ಪರದೇಶಸ್ಥರಿಗೂ ಸಾಕಷ್ಟು ಆಹಾರವಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 25:6
9 ತಿಳಿವುಗಳ ಹೋಲಿಕೆ  

ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು. ಯಾವನೂ ತನ್ನ ಆಸ್ತಿಯನ್ನು ತನ್ನದೇ ಎಂದು ಹಕ್ಕು ಸಾಧಿಸಲಿಲ್ಲ. ಆದರೆ ಅವರೆಲ್ಲರೂ ತಮಗಿದ್ದ ಎಲ್ಲವನ್ನು ಹಂಚಿಕೊಂಡರು.


ವಿಶ್ವಾಸಿಗಳೆಲ್ಲರೂ ಒಟ್ಟಾಗಿದ್ದು, ತಮ್ಮಲ್ಲಿರುವ ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.


ನೀವು, “ನಾವು ಬಿತ್ತುವುದಿಲ್ಲ, ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವುದಿಲ್ಲ. ಏಳನೆಯ ವರ್ಷದಲ್ಲಿ ನಾವು ಏನು ತಿನ್ನೋಣ,” ಎನ್ನುವಿರಿ.


ಆದರೆ ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು, ಅದನ್ನು ಬೀಳುಬಿಡಬೇಕು. ಆಗ ನಿಮ್ಮ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ. ಅವರು ಬಿಟ್ಟದ್ದನ್ನು ಕಾಡುಮೃಗಗಳು ತಿನ್ನಲಿ. ನಿಮ್ಮ ದ್ರಾಕ್ಷಿತೋಟದ, ಓಲಿವ್ ಮರಗಳ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು.


ತನ್ನಷ್ಟಕ್ಕೆ ತಾನೇ ಬೆಳೆದಿರುವ ಪೈರನ್ನು ನೀವು ಕೊಯ್ಯಬಾರದು. ಇಲ್ಲವೆ ಕತ್ತರಿಸದಿರುವ ದ್ರಾಕ್ಷಿಯ ಬಳ್ಳಿಯ ದ್ರಾಕ್ಷಿಹಣ್ಣುಗಳನ್ನು ಕೂಡಿಸಬಾರದು. ಏಕೆಂದರೆ ಅದು ದೇಶಕ್ಕೆ ವಿಶ್ರಾಂತಿಯ ವರ್ಷವಾಗಿರುವುದು.


ನಿಮ್ಮ ದೇಶದಲ್ಲಿರುವ ಹುಟ್ಟುವಳಿಯೆಲ್ಲಾ ನಿಮ್ಮ ಪಶು ಮತ್ತು ಕಾಡುಮೃಗಗಳಿಗೆ ಆಹಾರವಾಗಬಹುದು.


ಆಗ ನಾನು, “ಆರನೆಯ ವರ್ಷದಲ್ಲಿ ಮೂರು ವರ್ಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಕೊಡುವೆನು.


“ಹಿಜ್ಕೀಯನೇ, ಇದು ನಿಮಗೆ ಸಂಕೇತವಾಗಿರುವದು, “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು