Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 24:16 - ಕನ್ನಡ ಸಮಕಾಲಿಕ ಅನುವಾದ

16 ಯೆಹೋವ ದೇವರ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು. ಸಭೆಯವರೆಲ್ಲರೂ ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ಸ್ವದೇಶೀಯನಾಗಿರಲಿ, ಪರಕೀಯನಾಗಿರಲಿ ಯೆಹೋವ ದೇವರ ಹೆಸರನ್ನು ದೂಷಣೆ ಮಾಡಿದಾಗ, ಅವನನ್ನು ಮರಣ ಶಿಕ್ಷೆಗೆ ಒಳಪಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸರ್ವೇಶ್ವರನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆಯಾಗಬೇಕು; ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶೀಯನಾಗಿರಲಿ, ಸ್ವದೇಶೀಯನಾಗಿರಲಿ ಸರ್ವೇಶ್ವರನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇಯಾಗಲಿ ಸ್ವದೇಶಸ್ಥನೇಯಾಗಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯಾವನಾದರೂ ಯೆಹೋವನ ನಾಮದ ವಿರುದ್ಧ ಮಾತಾಡಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಜನರೆಲ್ಲರೂ ಅವನಿಗೆ ಕಲ್ಲೆಸೆದು ಕೊಲ್ಲಬೇಕು. ಯೆಹೋವನ ನಾಮವನ್ನು ನಿಂದಿಸುವ ಪರದೇಶಸ್ಥರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಯೆಹೋವನ ನಾಮವನ್ನು ನಿಂದಿಸುವವನಿಗೆ ಮರಣಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 24:16
19 ತಿಳಿವುಗಳ ಹೋಲಿಕೆ  

ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಕ್ಕೂ ದೂಷಣೆಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.


ನೀವು ಕರೆಸಿಕೊಳ್ಳುವ ಆ ಯೋಗ್ಯವಾದ ನಾಮವನ್ನು ದೂಷಿಸುವವರು ಅವರಲ್ಲವೇ?


ಮೊದಲು ದೇವದೂಷಕನೂ ಹಿಂಸಕನೂ ಅಪಮಾನ ಮಾಡುವವನೂ ಆಗಿದ್ದ ನಾನು ಅಜ್ಞಾನಿಯಾಗಿ ಅಪನಂಬಿಕೆಯಲ್ಲಿ ಹಾಗೆ ವರ್ತಿಸಿದ್ದರೂ ದೇವರು ನನಗೆ ಕರುಣೆತೋರಿದರು.


ಅನೇಕ ಸಲ ಅವರನ್ನು ದಂಡಿಸಲು ನಾನು ಒಂದು ಸಭಾಮಂದಿರದಿಂದ ಇನ್ನೊಂದು ಸಭಾಮಂದಿರಕ್ಕೆ ಹೋಗಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆ. ಇದಲ್ಲದೆ ಅವರ ಮೇಲೆ ಬಹು ಕೋಪಗೊಂಡವನಾಗಿ ನಾನು ಅವರನ್ನು ಹಿಂಸಿಸಲು ವಿದೇಶಿ ಪಟ್ಟಣಗಳಿಗೂ ಹೋದೆನು.


ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಿದ್ದಕ್ಕೆ ಅವರು ಉತ್ತರವಾಗಿ, “ಈತನು ಮರಣಕ್ಕೆ ಪಾತ್ರನು,” ಎಂದರು.


ಅವರು ನಿಮಗೆ ವಿರೋಧವಾಗಿ ಮಾತಾಡುತ್ತಾರೆ; ನಿಮ್ಮ ವೈರಿಗಳು ನಿಮ್ಮ ಹೆಸರನ್ನು ದುರುಪಯೋಗ ಮಾಡುತ್ತಾರೆ.


ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.


ದೇವರೇ, ವೈರಿಯು ನಿಂದಿಸುವುದು ಎಷ್ಟರವರೆಗೆ? ಶತ್ರುವು ನಿಮ್ಮ ಹೆಸರನ್ನು ಎಂದೆಂದಿಗೂ ದೂಷಿಸುವನೋ?


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ನೀವು ದೇವದೂಷಣೆಯನ್ನು ಕೇಳಿದ್ದೀರಲ್ಲಾ ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, “ಈತನಿಗೆ ಮರಣದಂಡನೆ ಆಗಬೇಕು,” ಎಂದು ತೀರ್ಪುಕೊಟ್ಟರು.


ಯೆಹೂದ್ಯ ನಾಯಕರು ಅವನಿಗೆ, “ನಮಗೆ ಒಂದು ನಿಯಮವಿದೆ, ಆ ನಿಯಮದ ಪ್ರಕಾರ ಅವನು ಸಾಯಲೇಬೇಕು. ಏಕೆಂದರೆ ಅವನು ತನ್ನನ್ನು ದೇವರ ಪುತ್ರನನ್ನಾಗಿ ಮಾಡಿಕೊಂಡಿದ್ದಾನೆ,” ಎಂದರು.


ಅವನನ್ನು ಪಟ್ಟಣದ ಹೊರಗೆ ಎಳೆದುಕೊಂಡು ಹೋಗಿ ಅವನ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಾಕ್ಷಿಗಳು ತಮ್ಮ ಬಟ್ಟೆಗಳನ್ನು ಸೌಲ ಎಂಬ ಹೆಸರಿನ ಒಬ್ಬ ಯುವಕನ ಪಾದಗಳ ಬಳಿಯಲ್ಲಿಟ್ಟಿದ್ದರು.


“ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.


ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.


“ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು: ‘ಇಸ್ರಾಯೇಲರಲ್ಲಿಯಾಗಲಿ, ಇಸ್ರಾಯೇಲಿನಲ್ಲಿ ಪ್ರವಾಸಿಯಾದ ಪರಕೀಯರಲ್ಲಿಯಾಗಲಿ ಯಾವನಾದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ, ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು. ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು