Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 23:29 - ಕನ್ನಡ ಸಮಕಾಲಿಕ ಅನುವಾದ

29 ಅದೇ ದಿವಸದಲ್ಲಿ ಯಾರಾದರೂ ಉಪವಾಸ ಮಾಡದೆ ಇದ್ದಲ್ಲಿ, ಅವರು ತಮ್ಮ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಯಾವನಾದರು ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನು ಕುಲದಿಂದ ತೆಗೆದು ಹಾಕಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 “ಈ ದಿನದಲ್ಲಿ ಯಾವನಾದರೂ ಉಪವಾಸ ಮಾಡದಿದ್ದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 23:29
14 ತಿಳಿವುಗಳ ಹೋಲಿಕೆ  

ಸುನ್ನತಿ ಮಾಡಿಸಿಕೊಳ್ಳದವನು ನನ್ನ ಒಡಂಬಡಿಕೆಯನ್ನು ಮೀರಿದ ಕಾರಣ, ಅವನನ್ನು ಜನರೊಳಗಿಂದ ಬಹಿಷ್ಕರಿಸಬೇಕು,” ಎಂದರು.


“ಚರ್ಮರೋಗವಿರುವವರೆಲ್ಲರನ್ನು, ಮೇಹಸ್ರಾವವುಳ್ಳವರೆಲ್ಲರನ್ನು ಮತ್ತು ಹೆಣದ ಸೋಂಕಿನಿಂದ ಅಶುದ್ಧರಾದವರೆಲ್ಲರನ್ನು ಪಾಳೆಯದೊಳಗಿಂದ ಹೊರಗೆ ಕಳುಹಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.


ಇದು ನಿಮಗೆ ಸಬ್ಬತ್ ದಿನವಾಗಿರುವುದು. ನೀವು ನಿಮ್ಮನ್ನು ಉಪವಾಸ ಇಡಬೇಕು. ಆ ತಿಂಗಳಿನ ಒಂಬತ್ತನೆಯ ದಿವಸದ ಸಾಯಂಕಾಲದಿಂದ ಹಿಡಿದು ಮರುದಿನದ ಸಂಜೆಯವರೆಗೆ ಸಬ್ಬತ್ ದಿನವನ್ನು ಆಚರಿಸಬೇಕು,” ಎಂಬದೇ.


ಆದರೆ ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಳ್ಳುವರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಗೋಳಾಡಿ, ಪರ್ವತಗಳ ಮೇಲೆ ಇರುವರು.


ಅವರು ಅಳುತ್ತಾ ಬರುವರು. ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು. ಅವು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು. ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ. ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.


ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.


“ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿರುವುದು. ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವುದು. ನೀವು ಉಪವಾಸ ಮಾಡಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು.


ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ತನ್ನ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.’


ಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.


ಅದೇ ದಿವಸದಲ್ಲಿ ಯಾರಾದರೂ ಕೆಲಸವನ್ನು ಮಾಡಿದರೆ, ಅವರನ್ನು ನಾನು ಅವರ ಜನರ ಮಧ್ಯದಿಂದ ನಾಶಮಾಡುವೆನು.


ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುವುದಕ್ಕೂ, ನಮಗೂ ನಮ್ಮ ಮಕ್ಕಳಿಗೂ, ನಮ್ಮ ಎಲ್ಲಾ ಸ್ಥಿತಿಗೂ ಅವರಿಂದ ಸರಿಯಾದ ಮಾರ್ಗವನ್ನು ಹುಡುಕುವುದಕ್ಕೂ, ನಾನು ಅಲ್ಲಿ ಅಹಾವ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಪ್ರಕಟಿಸಿದೆನು.


ಇದರ ಹಾಗೆ ತೈಲ ಮಾಡುವವನೂ ಯಾಜಕನಲ್ಲದವನ ಮೇಲೆ ಇದನ್ನು ಹಚ್ಚುವವನನ್ನು ಸ್ವಜನರೊಳಗಿಂದ ತೆಗೆದುಹಾಕಬೇಕು,’ ಎಂದು ಹೇಳು,” ಎಂದರು.


ಆದರೆ ಯೆಹೋವ ದೇವರಿಗೆ ಸಂಬಂಧಪಟ್ಟ ಸಮಾಧಾನದ ಬಲಿಯ ಯಜ್ಞದ ಮಾಂಸವನ್ನು ಯಾವನಾದರೂ ಅಶುದ್ಧನಾಗಿದ್ದು ತಿನ್ನುವನೋ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.


ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧ ವಸ್ತುವನ್ನೇ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧವಸ್ತುವನ್ನಾಗಲಿ ಮುಟ್ಟಿದರೆ ಮತ್ತು ಯೆಹೋವ ದೇವರಿಗೆ ಸಂಬಂಧಿಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು,’ ” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು