Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 21:22 - ಕನ್ನಡ ಸಮಕಾಲಿಕ ಅನುವಾದ

22 ಅವನು ದೇವರ ರೊಟ್ಟಿಯಲ್ಲಿ ಪರಿಶುದ್ಧವಾದದ್ದನ್ನೂ, ಮಹಾಪರಿಶುದ್ಧವಾದದ್ದನ್ನೂ ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದದ್ದನ್ನು ಮತ್ತು ಮಹಾಪರಿಶುದ್ಧವಾದುದನ್ನು ಅವನು ಊಟಮಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದುದನ್ನೂ ಮಹಾಪರಿಶುದ್ಧವಾದುದನ್ನೂ ಅವನು ಊಟಮಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದದ್ದನ್ನೂ ಮಹಾಪರಿಶುದ್ಧವಾದದ್ದನ್ನೂ ಅವನು ಊಟಮಾಡಬಹುದೇ ಹೊರತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅವನು ಯಾಜಕರ ಕುಟುಂಬದವನಾಗಿರುವುದರಿಂದ ಪರಿಶುದ್ಧ ರೊಟ್ಟಿಯನ್ನೂ ಮಹಾಪರಿಶುದ್ಧ ರೊಟ್ಟಿಯನ್ನೂ ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 21:22
19 ತಿಳಿವುಗಳ ಹೋಲಿಕೆ  

ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.


ದೇವಾಲಯದಲ್ಲಿ ಸೇವೆಮಾಡುವವರು, ದೇವಾಲಯದಲ್ಲಿ ಊಟ ಪಡೆಯುತ್ತಾರೆಂಬುದೂ; ಬಲಿಪೀಠದ ಬಳಿಯಲ್ಲಿ ಸೇವೆಮಾಡುವವರು, ಆ ಬಲಿಪೀಠದ ಮೇಲೆ ಸಮರ್ಪಿಸಿದ್ದರಲ್ಲಿ ಪಾಲು ಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?


ಇಸ್ರಾಯೇಲರು ಯೆಹೋವ ದೇವರಿಗೆ ನೈವೇದ್ಯ ಮಾಡುವ ಪರಿಶುದ್ಧವಾದ ಬಲಿಗಳನ್ನೆಲ್ಲಾ ನಿನಗೂ ನಿನ್ನ ಪುತ್ರಪುತ್ರಿಯರಿಗೂ ಕ್ರಮ ಪ್ರಕಾರವಾದ ಭಾಗವಾಗಿ ಕೊಟ್ಟಿದ್ದೇನೆ. ಇದು ಯೆಹೋವ ದೇವರ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು,” ಎಂದರು.


“ ‘ಇವು ಪ್ರಾಯಶ್ಚಿತ್ತ ಬಲಿಯ ನಿಯಮಗಳು: ಇದು ಮಹಾಪರಿಶುದ್ಧವಾದದ್ದು.


ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.


ಯಾಜಕರ ಕುಟುಂಬದಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.


ಆದರೆ ಅವನು ನ್ಯೂನತೆವುಳ್ಳವನಾದ್ದರಿಂದ ತೆರೆಯ ಒಳಗೆ ಹೋಗಬಾರದು ಹಾಗು ಯಜ್ಞವೇದಿಯ ಬಳಿಗೆ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ”


ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’ ”


ಯಾಜಕನು ತನ್ನ ನಾರುಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರುಮಡಿಯ ಒಳಉಡುಪುಗಳನ್ನೂ ಧರಿಸಿಕೊಂಡು, ಬಲಿಪೀಠದ ಮೇಲೆ ದಹನಬಲಿಯೊಂದಿಗೆ ಸುಟ್ಟ ಬೂದಿಯನ್ನು ತೆಗೆದುಕೊಂಡು, ಅದನ್ನು ಬಲಿಪೀಠದ ಬಳಿಯಲ್ಲಿ ಹಾಕಬೇಕು.


ಯಾಜಕರಲ್ಲಿ ಪ್ರತಿಯೊಬ್ಬ ಪುರುಷನು ಅದನ್ನು ತಿನ್ನಬೇಕು. ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.


ಮೋಶೆಯು ಆರೋನನೊಂದಿಗೂ ಉಳಿದ ಅವನ ಪುತ್ರರಾದ ಎಲಿಯಾಜರನೊಂದಿಗೂ ಈತಾಮಾರನೊಂದಿಗೂ ಮಾತನಾಡಿ, “ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಗಳಲ್ಲಿ ಉಳಿದಿರುವ ಧಾನ್ಯ ಸಮರ್ಪಣೆಯನ್ನು ತೆಗೆದುಕೊಳ್ಳಿರಿ ಮತ್ತು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿಯಿಲ್ಲದ ರೊಟ್ಟಿ ತಿನ್ನಿರಿ. ಏಕೆಂದರೆ ಅದು ಮಹಾಪರಿಶುದ್ಧವಾದದ್ದು.


“ಅದು ಮಹಾಪರಿಶುದ್ಧವಾದ್ದರಿಂದಲೂ ಯೆಹೋವ ಸನ್ನಿಧಿಯಲ್ಲಿ ಅವರಿಗಾಗಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿಯೂ ನೀವು ಸಭೆಯ ಅಪರಾಧವನ್ನು ಹೊರುವುದಕ್ಕಾಗಿ ದೇವರು ಅದನ್ನು ಕೊಟ್ಟಿದ್ದೆಂದೂ ನೀವು ತಿಳಿದು ಪಾಪ ಪರಿಹಾರದ ಬಲಿಯನ್ನು ಪರಿಶುದ್ಧವಾದ ಸ್ಥಳದಲ್ಲಿ ಏಕೆ ತಿನ್ನಲಿಲ್ಲ?


ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.


ಸೂರ್ಯನು ಮುಳುಗಿದಾಗ ಅವನು ಶುದ್ಧನಾಗಿರುವನು. ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ. ಏಕೆಂದರೆ ಅದು ಅವನಿಗೆ ಆಹಾರ.


“ ‘ಯಾರಾದರೂ ಮನುಷ್ಯನನ್ನಾಗಲಿ, ಪಶುವನ್ನಾಗಲಿ, ಪಿತ್ರಾರ್ಜಿತ ಹೊಲವನ್ನಾಗಲಿ ತನಗಿದ್ದ ಬೇರೆ ಯಾವುದನ್ನಾಗಲಿ ಒಬ್ಬ ಮನುಷ್ಯನು ಯೆಹೋವ ದೇವರಿಗಾಗಿ ಮೀಸಲಾಗಿಟ್ಟಿದ್ದರೆ, ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು. ಮೀಸಲಾಗಿರುವ ಪ್ರತಿಯೊಂದೂ ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು