Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 20:4 - ಕನ್ನಡ ಸಮಕಾಲಿಕ ಅನುವಾದ

4 ಆ ಮನುಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ, ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ, ಅವನನ್ನು ಕೊಲ್ಲದೆ ಹೋದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆ ಮನುಷ್ಯನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟಾಗ ಸ್ವದೇಶದವರು ಅವನನ್ನು ಕೊಲ್ಲದೆ ಅವನು ಮಾಡಿದ ಕೆಲಸವನ್ನು ನೋಡಿಯೂ ನೋಡದವರಂತಿದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆ ವ್ಯಕ್ತಿ ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿದ್ದರೂ ನಾಡಿನವರು ಅವನನ್ನು ಕೊಲ್ಲದೆ ಅವನು ಮಾಡಿದ ಕೃತ್ಯವನ್ನು ನೋಡಿಯೂ ನೋಡದವರಂತೆ ವರ್ತಿಸಿದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆ ಮನುಷ್ಯನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಡಲಾಗಿ ದೇಶದವರು ಅವನನ್ನು ಕೊಲ್ಲದೆ ಅವನು ಮಾಡಿದ ಕೆಲಸವನ್ನು ನೋಡಿಯೂ ನೋಡದವರಂತಿದ್ದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಒಂದುವೇಳೆ ದೇಶದ ಜನರು ಅವನು ಮಾಡಿದ ಕಾರ್ಯವನ್ನು ನಿರ್ಲಕ್ಷಿಸಿ ಅವನನ್ನು ಕೊಲ್ಲದಿದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 20:4
9 ತಿಳಿವುಗಳ ಹೋಲಿಕೆ  

ಇಂಥಾ ಅಜ್ಞಾನ ಕಾಲವನ್ನು ಹಿಂದಿನ ಕಾಲದಲ್ಲಿ ದೇವರು ತಮ್ಮ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲಾ ಕಡೆಗಳಲ್ಲಿರುವ ಸರ್ವಮಾನವರೂ ಪಶ್ಚಾತ್ತಾಪ ಪಡಬೇಕೆಂದು ದೇವರು ಆಜ್ಞಾಪಿಸುತ್ತಾರೆ.


ಆಗ ಪ್ರವಾದಿಯು ಅಹಾಬನಿಗೆ, “ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಪೂರ್ಣ ನಾಶಕ್ಕೆ ಒಪ್ಪಿಸಿದ ಮನುಷ್ಯನನ್ನು ನೀನು ಬಿಟ್ಟುಬಿಟ್ಟ ಕಾರಣ, ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣ ಹೋಗುವುದು, ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು,’ ” ಎಂದನು.


ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನು ತೋರಿಸಿದ್ದಾರೆ. ಅದರಿಂದ ಅವರು ನಾಶನಕ್ಕೆ ಪಾತ್ರರಾದರು. ನೀವು ಶಾಪಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ, ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವುದಿಲ್ಲ.


ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.


ಆದರೂ ನಿನಗೆ ವಿರೋಧವಾಗಿ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ ವ್ಯಭಿಚಾರ ಮಾಡುವುದರಲ್ಲಿಯೂ ಇಸ್ರಾಯೇಲರು ಮುಗ್ಗರಿಸಿ ಬೀಳುವಂತೆ ಬಿಳಾಮನು ಬಾಲಾಕನಿಗೆ ಕಲಿಸಿದ ಬೋಧನೆಯನ್ನು ಹಿಡಿದುಕೊಂಡಿರುವವರು ನಿನ್ನಲ್ಲಿದ್ದಾರೆ.


ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಏಕೆಂದರೆ ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಅಶುದ್ಧಮಾಡುವಂತೆ ತನ್ನ ಮಕ್ಕಳನ್ನು ಮೋಲೆಕನಿಗೆ ಕೊಟ್ಟಿದ್ದಾನೆ.


ಆಗ ನಾನು ಆ ಮನುಷ್ಯನಿಗೂ, ಅವನ ಕುಟುಂಬಕ್ಕೂ ವಿರೋಧವಾಗಿಯೂ, ವಿಮುಖವಾಗಿಯೂ ಇರುವೆನು. ಮೋಲೆಕನನ್ನು ಪೂಜೆ ಮಾಡಿದ್ದಕ್ಕಾಗಿ ಅವನನ್ನೂ, ದೇವದ್ರೋಹಿಗಳಾಗಿ ಅವನನ್ನು ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು