Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 2:2 - ಕನ್ನಡ ಸಮಕಾಲಿಕ ಅನುವಾದ

2 ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಅವನು ಹಿಟ್ಟಿನಲ್ಲಿಯೂ, ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜಕನು ಅದನ್ನು ಜ್ಞಾಪಕಾರ್ಥವಾಗಿ ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಯಾಜಕನು ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಹಾಗು ಇಡೀ ಸಾಂಬ್ರಾಣಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಸೂಚಿಸುವದಕ್ಕಾಗಿ ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 2:2
17 ತಿಳಿವುಗಳ ಹೋಲಿಕೆ  

ಯಾಜಕನು ಧಾನ್ಯ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ, ಧಾನ್ಯ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ, ಅದರ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದುಕೊಂಡು ಜ್ಞಾಪಕಾರ್ಥವಾಗಿ ಯೆಹೋವ ದೇವರಿಗೆ ಬಲಿಪೀಠದ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು.


ತರುವಾಯ ಅವರು ಅದನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಜ್ಞಾಪಕಾರ್ಥವಾಗಿ ಅದರಿಂದ ತನ್ನ ಹಿಡಿಯಷ್ಟು ತೆಗೆದುಕೊಂಡು, ಬಲಿಪೀಠದ ಮೇಲೆ ಬೆಂಕಿಯ ಅರ್ಪಣೆಗಳಿಗನುಸಾರವಾಗಿ ಯೆಹೋವ ದೇವರಿಗಾಗಿ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿರುವುದು.


ಕೊರ್ನೇಲ್ಯನು ಭಯದಿಂದ ದೇವದೂತನನ್ನೇ ದೃಷ್ಟಿಸಿ ನೋಡಿ, “ಏನು ಸ್ವಾಮೀ?” ಎಂದು ಕೇಳಲು, “ನಿನ್ನ ಪ್ರಾರ್ಥನೆಗಳು, ಬಡವರಿಗೆ ನೀನು ಕೊಟ್ಟ ದಾನಗಳು ದೇವರ ಸನ್ನಿಧಿಗೆ ಜ್ಞಾಪಕಾರ್ಥ ಅರ್ಪಣೆಗಳಾಗಿ ಬಂದಿವೆ.


ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾಗಿ ಇರುವಂತೆಯೂ, ಬೆಂಕಿಯ ಮೂಲಕ ಯೆಹೋವ ದೇವರಿಗೆ ಸಮರ್ಪಣೆಯಾಗುವಂತೆಯೂ, ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.


ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾಗಿ ಧಾನ್ಯ ಸಮರ್ಪಣೆಯನ್ನಾಗಿ ತೆಗೆದುಕೊಂಡು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು, ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿರುವುದು.


ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡುವವನ ಹಾಗಿದ್ದಾನೆ. ಕುರಿಮರಿಯನ್ನು ಬಲಿ ಕೊಡುವವನು, ನಾಯಿಯ ಕುತ್ತಿಗೆಯನ್ನು ಕಡಿಯುವವನ ಹಾಗಿದ್ದಾನೆ. ಕಾಣಿಕೆಯನ್ನು ಅರ್ಪಿಸುವವನು, ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಹಾಕುವವನು, ವಿಗ್ರಹವನ್ನು ಪೂಜಿಸುವವನ ಹಾಗಿದ್ದಾನೆ. ಹೀಗೆ, ಅವರು ಸ್ವಂತ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ. ಅವರ ಪ್ರಾಣವು ಅವರ ಅಸಹ್ಯಗಳಲ್ಲಿ ಹರ್ಷಿಸುತ್ತವೆ.


ಯಾಜಕನು ಬಡಿದ ಕಾಳುಗಳಲ್ಲಿ ಕೆಲವು ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿಯನ್ನು ಜ್ಞಾಪಕಾರ್ಥವಾಗಿ ಸುಡಬೇಕು. ಇದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.


ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ.


ನನ್ನ ದೇವರೇ, ಇದಕ್ಕಾಗಿ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ. ನಾನು ನನ್ನ ದೇವರ ಆಲಯಕ್ಕೋಸ್ಕರವೂ, ಅದರ ಸೇವೆಗೋಸ್ಕರವೂ ನಂಬಿಗಸ್ತಿಕೆಯಿಂದ ಮಾಡಿದ ಭಕ್ತಿಕಾರ್ಯಗಳನ್ನು ಅಳಿಸಿಬಿಡಬೇಡಿರಿ.


ಯಾಜಕನು ಆ ಸ್ತ್ರೀಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಿ, ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು, ಅವಳ ಕೈಗಳಲ್ಲಿ ಸಂಶಯ ಸೂಚಿಸುವ ಕಾಣಿಕೆಯಾದ ನೈವೇದ್ಯದ ಹಿಟ್ಟನ್ನು ಇಡಬೇಕು. ಯಾಜಕನ ಕೈಯಲ್ಲಿ ಶಾಪತರುವ ಕಹಿಯಾದ ನೀರು ಇರಬೇಕು.


ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಕೆಲಸಕ್ಕಾಗಿ ಪ್ರತ್ಯೇಕಿಸಬೇಕು. ಇದೇ ಯೆಹೋವ ದೇವರ ಮುಂದೆ ಇಸ್ರಾಯೇಲರಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಯಶ್ಚಿತ್ತಕ್ಕಾಗಿಯೂ ಇರುವುದು,” ಎಂದರು.


ಅವನು ಸಮಾಧಾನ ಬಲಿಯ ಕೊಬ್ಬನ್ನು ತೆಗೆದಂತೆ, ಅದರ ಎಲ್ಲಾ ಕೊಬ್ಬನ್ನು ತೆಗೆಯಬೇಕು. ಯಾಜಕನು ಅದನ್ನು ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯಾಗಿ ಸುಡಬೇಕು. ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.


“ ‘ಆದರೆ ಅವರು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅಶಕ್ತರಾಗಿದ್ದರೆ, ಪಾಪಮಾಡಿದವರು ತಮ್ಮ ಬಲಿಗಾಗಿ, ಮೂರು ಸೇರು ಗೋಧಿ ಹಿಟ್ಟನ್ನು ಪಾಪ ಪರಿಹಾರದ ಬಲಿಯಾಗಿ ತರಬೇಕು. ಅವರು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಏಕೆಂದರೆ ಅದು ದೋಷಪರಿಹಾರ ಬಲಿಯಾಗಿದೆ.


ಆಗ ಯಾಜಕನು ಜ್ಞಾಪಕಾರ್ಥವಾಗಿ ಕಾಣಿಕೆಯಿಂದ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಸುಟ್ಟು, ಸ್ತ್ರೀಗೆ ಆ ನೀರನ್ನು ಕುಡಿಸಬೇಕು.


ಅದರ ಕರುಳುಗಳನ್ನೂ, ಕಾಲುಗಳನ್ನೂ ಅವರು ನೀರಿನಲ್ಲಿ ತೊಳೆಯಬೇಕು. ಯಾಜಕನು ಎಲ್ಲವನ್ನೂ ಬಲಿಪೀಠದ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ, ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.


ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು. ಆಗ ಯಾಜಕನು ಅವೆಲ್ಲವುಗಳನ್ನೂ ತಂದು ಬಲಿಪೀಠದ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.


ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು. ಆದರೆ ಬೇರೆಬೇರೆಯಾಗಿ ವಿಭಾಗಿಸಬಾರದು. ಆಗ ಯಾಜಕನು ಅದನ್ನು ಬಲಿಪೀಠದ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆ ಸುಡಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು