Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 19:26 - ಕನ್ನಡ ಸಮಕಾಲಿಕ ಅನುವಾದ

26 “ ‘ರಕ್ತದೊಂದಿಗೆ ಯಾವುದನ್ನೂ ನೀವು ತಿನ್ನಬಾರದು. “ ‘ಇದಲ್ಲದೆ ಮಂತ್ರವನ್ನು ಮಾಡಬಾರದು. ಇಲ್ಲವೆ ಶಕುನಗಳನ್ನು ನೋಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 “‘ರಕ್ತಸಹಿತವಾದ ಯಾವ ಮಾಂಸವನ್ನು ತಿನ್ನಬಾರದು. “‘ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 “ರಕ್ತ ಸಹಿತವಾದ ಯಾವ ಮಾಂಸವನ್ನೂ ತಿನ್ನಬೇಡ. ತಂತ್ರಮಂತ್ರಗಳನ್ನು ಮಾಡಬೇಡ; ಶಕುನಗಳನ್ನು ನೋಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ರಕ್ತ ಸಹಿತವಾದ ಯಾವ ಮಾಂಸವನ್ನೂ ತಿನ್ನಬಾರದು. ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 “ರಕ್ತಸಹಿತವಾದ ಮಾಂಸವನ್ನು ನೀವು ತಿನ್ನಬಾರದು. “ನೀವು ಕಣಿ ಹೇಳಬಾರದು; ಮಂತ್ರತಂತ್ರಗಳನ್ನು ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 19:26
22 ತಿಳಿವುಗಳ ಹೋಲಿಕೆ  

ಕಣಿಗಳನ್ನೂ, ಶಕುನಗಳನ್ನೂ ಬಳಸಿ, ಯೆಹೋವ ದೇವರಿಗೆ ಕೋಪ ಬರುವಂತೆ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.


ಇದಲ್ಲದೆ ಮನಸ್ಸೆಯು ಬೆನ್ ಹಿನ್ನೋಮ್ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನೂ ಮಾಟವನ್ನೂ ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.


ಇದಲ್ಲದೆ ಮನಸ್ಸೆಯು ತನ್ನ ಸ್ವಂತ ಮಗನನ್ನು ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನು ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.


ರಕ್ತವನ್ನು ಮಾತ್ರ ಭುಜಿಸದ ಹಾಗೆ ಜಾಗ್ರತೆಯಾಗಿರಿ. ಏಕೆಂದರೆ ರಕ್ತವು ಪ್ರಾಣವೇ. ಮಾಂಸದೊಡನೆ ಅದರ ಜೀವವನ್ನು ತಿನ್ನಬಾರದು.


ಇದಲ್ಲದೆ ನೀವು ಯಾವ ತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾಗಿರಲಿ, ಪ್ರಾಣಿಯದಾಗಿರಲಿ ನಿಮ್ಮ ಯಾವ ನಿವಾಸಗಳಲ್ಲಿಯೂ ತಿನ್ನಬಾರದು.


“ ‘ನೀವು ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನದೆ ಇರುವುದು ನಿಮ್ಮ ಸಂತತಿಯವರಿಗೆಲ್ಲಾ ನಿಮ್ಮ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವುದು,’ ” ಎಂದು ಹೇಳಿದರು.


ಯೆಹೋವ ದೇವರು ಹೀಗೆ ಹೇಳುತ್ತಾರೆ: ಬೇರೆ ಜನಾಂಗಗಳ ಆಚರಣೆಗಳನ್ನು ಅನುಸರಿಸಬೇಡಿರಿ. ಅವರು ಆಕಾಶದ ಗುರುತುಗಳಿಗೆ ಹೆದರುತ್ತಾರೆ. ನೀವು ಅವುಗಳಿಗೆ ಹೆದರಬೇಡಿರಿ.


“ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಆಗ ಪಂಡಿತರು ಅರಸನಿಗೆ ಉತ್ತರವಾಗಿ, “ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕದಲ್ಲಿಲ್ಲ! ಆದ್ದರಿಂದ ಯಾವ ಅರಸನಾದರೂ, ಯಾವ ಪ್ರಭುವಾದರೂ, ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ, ಜೋತಿಷ್ಯನಲ್ಲೂ, ಪಂಡಿತನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.


ಏಕೆಂದರೆ ಪ್ರತಿಭಟಿಸುವುದು ಮಂತ್ರತಂತ್ರಗಳಷ್ಟು ಪಾಪವಾಗಿದೆ. ಹಟಮಾರಿತನವು ದುಷ್ಟತನಕ್ಕೂ ವಿಗ್ರಹಾರಾಧನೆಗೂ ಸಮಾನವಾಗಿದೆ. ನೀನು ಯೆಹೋವ ದೇವರ ವಾಕ್ಯವನ್ನು ಅಲಕ್ಷ್ಯಮಾಡಿದ್ದರಿಂದ ಅವರು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕರಿಸಿಬಿಟ್ಟಿದ್ದಾರೆ.”


ಆದರೆ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿ, ಕಪ್ಪೆಗಳನ್ನು ಈಜಿಪ್ಟ್ ದೇಶದ ಮೇಲೆ ಬರಮಾಡಿದರು.


ಫರೋಹನು ಜ್ಞಾನಿಗಳನ್ನೂ, ಮಂತ್ರವಾದಿಗಳನ್ನೂ ಕರೆಸಿದನು. ಆಗ ಈಜಿಪ್ಟಿನ ಮಂತ್ರಗಾರರೂ ಸಹ ತಮ್ಮ ಮಾಟಗಳಿಂದ ಹಾಗೆಯೇ ಮಾಡಿದರು.


ಅದರ ಬದಲಾಗಿ ನಾವು ಅವರಿಗೆ, ದೇವರಲ್ಲದವುಗಳಿಂದ ಮಲಿನವಾದ ಆಹಾರದಿಂದಲೂ ಅನೈತಿಕತೆಯಿಂದಲೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ರಕ್ತದಿಂದಲೂ ದೂರವಿರಬೇಕು.


“ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು.


ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ,’ ಎಂದು ಅವರಿಗೆ ಹೇಳು,” ಎಂದನು.


ಐದನೆಯ ವರುಷದಲ್ಲಿ ಅದರ ಫಲವನ್ನು ನೀವು ತಿನ್ನಬೇಕು. ಆಗ ಅದು ನಿಮಗೆ ಇನ್ನೂ ಸಮೃದ್ಧಿಯಾಗಿ ಫಲಿಸುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.


ರಕ್ತವನ್ನು ಮಾತ್ರ ಭುಜಿಸಬೇಡಿರಿ. ಅದನ್ನು ನೀರಿನಂತೆ ನೆಲಕ್ಕೆ ಚೆಲ್ಲಬೇಕು.


ಅದರ ರಕ್ತವನ್ನು ಮಾತ್ರ ಭುಜಿಸಬಾರದು, ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.


ಆದ್ದರಿಂದ ಅವರು ಕೊಳ್ಳೆ ಹೊಡೆದವುಗಳ ಮೇಲೆ ಬಿದ್ದು ಕುರಿಗಳನ್ನೂ, ದನಗಳನ್ನೂ, ಕರುಗಳನ್ನೂ ಹಿಡಿದು, ನೆಲದ ಮೇಲೆ ಕೊಯ್ದು, ಮಾಂಸವನ್ನು ರಕ್ತದ ಸಂಗಡ ತಿಂದರು.


ಆಗ ಅವರು ಸೌಲನಿಗೆ, “ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವುದರಿಂದ, ಯೆಹೋವ ದೇವರಿಗೆ ವಿರೋಧವಾಗಿ ಪಾಪ ಮಾಡುತ್ತಾರೆ,” ಎಂದು ತಿಳಿಸಿದರು. ಅದಕ್ಕವನು, “ನೀವು ನಂಬಿಕೆದ್ರೋಹ ಮಾಡಿದಿರಿ. ಈಗ ಒಂದು ದೊಡ್ಡ ಕಲ್ಲನ್ನು ನನ್ನ ಬಳಿಗೆ ಹೊರಳಿಸಿ ಬಿಡಿರಿ,” ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು