Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 19:12 - ಕನ್ನಡ ಸಮಕಾಲಿಕ ಅನುವಾದ

12 “ ‘ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣ ಮಾಡಬಾರದು. ನಿಮ್ಮ ದೇವರ ಹೆಸರನ್ನು ಅಗೌರವಿಸಬಾರದು. ನಾನೇ ಯೆಹೋವ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 “‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ. ನಾನೇ ಸರ್ವೇಶ್ವರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 19:12
19 ತಿಳಿವುಗಳ ಹೋಲಿಕೆ  

ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು, ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


“ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.


ಮುಖ್ಯವಾಗಿ ನನ್ನ ಪ್ರಿಯರೇ, ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ನಾವುದರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ “ಹೌದು” ಎನ್ನಿರಿ. ಇಲ್ಲವಾದರೆ “ಇಲ್ಲ” ಎನ್ನಿರಿ. ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.


ಇಲ್ಲವೆ ಕಳೆದುಹೋಗಿದ ವಸ್ತು ಸಿಕ್ಕಿ, ಅದರ ವಿಷಯದಲ್ಲಿ ಸುಳ್ಳಾಡಿದ್ದರೆ ಮತ್ತು ಸುಳ್ಳಾಗಿ ಪ್ರಮಾಣ ಮಾಡಿದ್ದರೆ, ಇವೆಲ್ಲವುಗಳಲ್ಲಿ ಯಾವುದನ್ನಾದರೂ ಒಬ್ಬನು ಮಾಡಿದ್ದರೆ, ಅವನು ಪಾಪಮಾಡುವವನಾಗಿದ್ದಾನೆ.


ಇಸ್ರಾಯೇಲ್ ಸ್ತ್ರೀಯ ಮಗನು ಯೆಹೋವ ದೇವರ ನಾಮವನ್ನು ದೂಷಿಸಿ, ಶಪಿಸಿದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು. ಅವನ ತಾಯಿಯ ಹೆಸರು ಶೆಲೋಮಿತ್. ಇವಳು ದಾನ್ ಕುಲದ ದಿಬ್ರೀಯನ ಮಗಳು.


“ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”


ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿಯಿಂದಲೂ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡುವೆ. ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯ ಬಯಸುವರು. ನನ್ನಲ್ಲಿಯೇ ಹೆಮ್ಮೆಪಡುವರು.”


ಅವರು ದುಷ್ಟರ ಸಹವಾಸ ಇಲ್ಲದವರೂ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು.


“ ‘ಕಳ್ಳತನ, ಹತ್ಯೆ, ವ್ಯಭಿಚಾರಗಳನ್ನು ನೀವು ನಡೆಸುವಿರೋ? ಸುಳ್ಳು ಪ್ರಮಾಣವನ್ನು ಮಾಡಿ, ಬಾಳನಿಗೆ ಧೂಪವನ್ನು ಸುಡುವಿರೋ? ನಿಮಗೆ ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿ,


ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ.


ಆಗ ದೂತನು ನನಗೆ, “ಭೂಮಿಯ ಮೇಲೆಲ್ಲಾ ಹರಡುವ ಶಾಪವು ಇದೇ. ಈ ದಿಕ್ಕಿನಲ್ಲಿ ಬರೆದಿರುವ ಪ್ರಕಾರ ಕಳ್ಳತನ ಮಾಡುವವರೆಲ್ಲರನ್ನು ತೆಗೆದುಹಾಕಲಾಗುವುದು. ಸುಳ್ಳಾಣೆ ಇಡುವವರೆಲ್ಲರನ್ನು ಆ ಕಡೆಯಲ್ಲಿ ಬರೆದಿರುವ ಪ್ರಕಾರ ತೆಗೆದುಹಾಕಲಾಗುವುದು.


ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಏಕೆಂದರೆ ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಅಶುದ್ಧಮಾಡುವಂತೆ ತನ್ನ ಮಕ್ಕಳನ್ನು ಮೋಲೆಕನಿಗೆ ಕೊಟ್ಟಿದ್ದಾನೆ.


“ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.


ಅವರು, ‘ಯೆಹೋವ ದೇವರು ಜೀವದಾಣೆ,’ ಎಂದು ಪ್ರಮಾಣ ಮಾಡಿದರೂ ಆ ಪ್ರಮಾಣ ಸುಳ್ಳಾಗಿಯೇ ಇರುತ್ತದೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು