Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 15:19 - ಕನ್ನಡ ಸಮಕಾಲಿಕ ಅನುವಾದ

19 “ ‘ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತ ಸ್ರಾವವಿದ್ದರೆ, ಅವಳು ಏಳು ದಿವಸಗಳವರೆಗೆ ಪ್ರತ್ಯೇಕವಾಗಿರಬೇಕು, ಅವಳನ್ನು ಯಾರಾದರೂ ಮುಟ್ಟಿದರೆ, ಅವರು ಸಂಜೆಯವರೆಗೆ ಅಶುದ್ಧರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 “‘ಸ್ತ್ರೀಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ಮಹಿಳೆಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಂಜೆಯವರೆಗೆ ಅಶುದ್ಧರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಸ್ತ್ರೀಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಾಯಂಕಾಲದವರೆಗೆ ಅಶುದ್ಧರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ಸ್ತ್ರೀಗೆ ಅವಳ ತಿಂಗಳ ಮುಟ್ಟಿನಿಂದ ಸ್ರಾವವಿದ್ದರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಯಾವನಾದರೂ ಆಕೆಯನ್ನು ಮುಟ್ಟಿದರೆ, ಆ ವ್ಯಕ್ತಿಯೂ ಸಾಯಂಕಾಲದವರೆಗೆ ಆಶುದ್ಧನಾಗಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 15:19
10 ತಿಳಿವುಗಳ ಹೋಲಿಕೆ  

“ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಒಬ್ಬ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು. ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.


ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು.


ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ.


“ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.


ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ. ಅವಳನ್ನು ಆದರಿಸುವವನು ಒಬ್ಬನೂ ಇಲ್ಲ. ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ. ಯೆರೂಸಲೇಮ್ ಅವರ ಮಧ್ಯದಲ್ಲಿ ಅಶುದ್ಧ ವಸ್ತುವಿನಂತಿದೆ.


“ ‘ಒಬ್ಬ ಮನುಷ್ಯನು ಮುಟ್ಟಾದ ಸ್ತ್ರೀಯೊಂದಿಗೆ ಮಲಗಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ, ಅವನು ಆಕೆಯ ಮುಟ್ಟಿನ ಮೂಲವನ್ನು ಬಹಿರಂಗಪಡಿಸಿದ್ದಾನೆ. ಆಕೆ ಅದನ್ನು ಬಹಿರಂಗಪಡಿಸಿದ್ದಾಳೆ. ಅವರಿಬ್ಬರನ್ನೂ ಸ್ವಜನರಿಂದ ಬಹಿಷ್ಕರಿಸಬೇಕು.


ಅವಳು ಮೂವತ್ತಮೂರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. ಅವಳ ಶುದ್ಧೀಕರಣದ ದಿನಗಳು ಪೂರೈಸುವ ತನಕ ಅವಳು ಪರಿಶುದ್ಧವಾದದ್ದನ್ನು ಮುಟ್ಟಬಾರದು, ಇಲ್ಲವೆ ಪರಿಶುದ್ಧ ಸ್ಥಳಕ್ಕೆ ಬರಬಾರದು.


“ ‘ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ಹಾಸಿಗೆ ಅಶುದ್ಧವಾಗಿರುವುದು. ಅವಳು ಕೂತುಕೊಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರುವುದು.


ಇಲ್ಲವೆ ತನ್ನನ್ನು ಅಶುದ್ಧನಾಗುವಂತೆ ಹರಿದಾಡುವ ಯಾವುದನ್ನಾಗಲಿ ಇಲ್ಲವೆ ಅಶುದ್ಧ ಮನುಷ್ಯನನ್ನಾಗಲಿ ಮುಟ್ಟಿದವನು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು