ಯಾಜಕಕಾಂಡ 13:20 - ಕನ್ನಡ ಸಮಕಾಲಿಕ ಅನುವಾದ20 ಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಯಾಜಕನು ಪರೀಕ್ಷಿಸುವಾಗ ಆ ಕಲೆ ಉಳಿದ ಚರ್ಮಕ್ಕಿಂತ ಆಳವಾಗಿ ಕಂಡರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠ ಹುಟ್ಟಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಯಾಜಕನು ಪರೀಕ್ಷಿಸಿ ನೋಡುವಾಗ ಆ ಕಲೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠಹುಟ್ಟಿರುವುದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಯಾಜಕನು ನೋಡುವಾಗ ಆ ಕಲೆ ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠಹುಟ್ಟಿದದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ. ಅಧ್ಯಾಯವನ್ನು ನೋಡಿ |