Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 11:46 - ಕನ್ನಡ ಸಮಕಾಲಿಕ ಅನುವಾದ

46 “ ‘ಪ್ರಾಣಿಗಳು, ಪಕ್ಷಿಗಳು, ನೀರಿನಲ್ಲಿರುವ ಮತ್ತು ನೆಲದ ಮೇಲೆ ತೆವಳುವ ಪ್ರತಿಯೊಂದು ಜೀವಿಗಳಿಗೆ ಕುರಿತಾದ ನಿಯಮವು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 “‘ಇದೇ ಪಶು, ಪಕ್ಷಿ, ಜಲಚರ ಮತ್ತು ಕ್ರಿಮಿಕೀಟಗಳ ವಿಷಯವಾದ ನಿಯಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಇದೇ ಪಶು, ಪಕ್ಷಿ, ಜಲಚರ ಹಾಗು ಕ್ರಿಮಿಕೀಟಗಳ ವಿಷಯವಾದ ವಿಧಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಇದೇ ಪಶುಪಕ್ಷಿ ಜಲಚರ ಕ್ರಿವಿುಕೀಟಗಳ ವಿಷಯವಾದ ವಿಧಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಎಲ್ಲಾ ಸಾಕುಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲಿರುವ ಇತರ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. ಸಮುದ್ರದಲ್ಲಿರುವ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 11:46
8 ತಿಳಿವುಗಳ ಹೋಲಿಕೆ  

“ಇದು ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿ ಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧವಾಗಿದೆ. ಇಗೋ, ಇದೇ ಆ ಆಲಯದ ನಿಯಮವಾಗಿದೆ.


ಮೇಹಸ್ರಾವವುಳ್ಳವನಿಗೂ ವೀರ್ಯ ಸ್ರಾವವುಳ್ಳವನಿಗೂ ಅವುಗಳಿಂದ ಅಶುದ್ಧವಾಗುವವರೆಗೂ ಇರುವ ನಿಯಮವು ಇದೆ.


ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,


ದಹನಬಲಿ, ಧಾನ್ಯ ಬಲಿ, ಪಾಪ ಪರಿಹಾರದ ಬಲಿ, ಪ್ರಾಯಶ್ಚಿತ್ತದ ಬಲಿ, ಪ್ರತಿಷ್ಠೆಗಳ ಮತ್ತು ಸಮಾಧಾನದ ಬಲಿಗಳ ಉಪದೇಶಗಳು ಇವೇ.


ಆಮೇಲೆ ದೇವರು, “ನೀರಿನಲ್ಲಿ ಜೀವಜಂತುಗಳು ತುಂಬಿಕೊಳ್ಳಲಿ, ಭೂಮಿಯ ಮೇಲೆ ಆಕಾಶಮಂಡಲದಲ್ಲಿ ಪಕ್ಷಿಗಳು ಹಾರಾಡಲಿ,” ಎಂದರು.


ಹೀಗೆ ದೇವರು ದೊಡ್ಡ ಜಲಚರಗಳನ್ನು, ನೀರಿನಲ್ಲಿ ತುಂಬಿರುವ ಎಲ್ಲಾ ಚಲಿಸುವ ಜೀವ ಜಂತುಗಳನ್ನು, ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಯನ್ನು ಅವುಗಳ ಜಾತಿಗನುಸಾರವಾಗಿ ಸೃಷ್ಟಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು.


ಏಕೆಂದರೆ ನಿಮ್ಮ ದೇವರಾಗಿರುವುದಕ್ಕೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಯೆಹೋವ ದೇವರು ನಾನೇ. ನಾನು ಪರಿಶುದ್ಧನಾಗಿರುವುದರಿಂದ ನೀವು ಪರಿಶುದ್ಧರಾಗಿರಬೇಕು.


ಅಶುದ್ಧ ಮತ್ತು ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನಲರ್ಹವಾದ ಮೃಗ ಮತ್ತು ತಿನ್ನಬಾರದ ಮೃಗಗಳ ನಡುವಿನ ವ್ಯತ್ಯಾಸವನ್ನು ಹೀಗೆ ತಿಳಿದುಕೊಳ್ಳುವಿರಿ.’ ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು