Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 1:3 - ಕನ್ನಡ ಸಮಕಾಲಿಕ ಅನುವಾದ

3 “ ‘ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ, ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಯೆಹೋವ ದೇವರಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 “‘ಅವನು ದನವನ್ನು ಸರ್ವಾಂಗಹೋಮವಾಗಿ ಸಮರ್ಪಿಸುವುದಾದರೆ ಪೂರ್ಣಾಂಗವಾದ ಗಂಡನ್ನು ತರಬೇಕು. ತನ್ನನ್ನು ಯೆಹೋವನು ಮೆಚ್ಚುವಂತೆ ದೇವದರ್ಶನದ ಗುಡಾರದ ಬಾಗಿಲಿಗೆ ಅದನ್ನು ತರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಸರ್ವೇಶ್ವರನಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು ದನವನ್ನು ಸರ್ವಾಂಗಹೋಮವಾಗಿ ಸಮರ್ಪಿಸುವದಾದರೆ ಪೂರ್ಣಾಂಗವಾದ ಗಂಡನ್ನು ತರಬೇಕು. ತನಗೆ ಯೆಹೋವನು ಒಲಿಯುವಂತೆ ದೇವದರ್ಶನದ ಗುಡಾರದ ಬಾಗಲಿಗೆ ಅದನ್ನು ತರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ಒಬ್ಬನು ತನ್ನ ದನಗಳಲ್ಲಿ ಒಂದನ್ನು ಸರ್ವಾಂಗಹೋಮವಾಗಿ ಅರ್ಪಿಸಬಯಸಿದರೆ ಆ ಪಶುವು ಯಾವ ದೋಷವಿಲ್ಲದ ಹೋರಿಯಾಗಿರಬೇಕು. ಅವನು ಆ ಪಶುವನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಆಗ ಯೆಹೋವನು ಆ ಸಮರ್ಪಣೆಯನ್ನು ಮೆಚ್ಚಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 1:3
79 ತಿಳಿವುಗಳ ಹೋಲಿಕೆ  

ಅದರಲ್ಲಿ ಏನಾದರೂ ಊನವಿದ್ದರೆ ಅಂದರೆ, ಅದು ಕುಂಟಾಗಲಿ, ಕುರುಡಾಗಲಿ ಏನಾದರೂ ಕೆಟ್ಟ ಊನವುಳ್ಳದ್ದಾಗಿದ್ದರೆ, ಅದನ್ನು ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು.


ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ?


ನೀವು ಆಯ್ದುಕೊಳ್ಳುವ ಕುರಿಮರಿಯು ದೋಷರಹಿತವಾಗಿರುವ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ, ಆಡುಗಳಿಂದಾಗಲಿ ತೆಗೆದುಕೊಳ್ಳಬಹುದು.


ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು.


ಯಾವುದೇ ಊನತೆ ಅಥವಾ ಅವಲಕ್ಷಣವುಳ್ಳ ಹೋರಿಯನ್ನಾಗಲಿ, ಕುರಿಯನ್ನಾಗಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.


ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರೂ ಗಗನ ಮಂಡಲಗಳಿಗಿಂತ ಉನ್ನತಕ್ಕೇರಿದಾತರೂ ಆಗಿರುವ ಇಂಥಾ ಮಹಾಯಾಜಕ ನಮಗಿದ್ದಾರೆ.


ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ನಾವೂ ನೀವೂ ಪವಿತ್ರಾತ್ಮ ದೇವರಿಂದ ತಂದೆಯ ಬಳಿಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು.


ಅಬ್ರಹಾಮನು, “ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು,” ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.


ಆಗ ಯೇಸು ಹೋಗುತ್ತಿರುವುದನ್ನು ಕಂಡು ಅವನು, “ಇಗೋ, ದೇವರ ಕುರಿಮರಿ,” ಎಂದು ಹೇಳಿದನು.


ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.


“ಆದರೆ ತನ್ನ ಮಂದೆಯಲ್ಲಿ ದೋಷವಿಲ್ಲದ ಗಂಡು ಪಶು ಇರಲಾಗಿ ಅದನ್ನು ಅರ್ಪಿಸಲು ಪ್ರಮಾಣಮಾಡಿ, ಯೆಹೋವ ದೇವರಿಗೆ ದೋಷವುಳ್ಳದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ, ಏಕೆಂದರೆ ನಾನು ಮಹಾ ಅರಸನು, ನನ್ನ ಹೆಸರು ಇತರ ಜನಾಂಗಗಳಲ್ಲಿ ಭಯಭಕ್ತಿಯುಳ್ಳದ್ದಾಗಿರಬೇಕು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಪರಿಶುದ್ಧ ಪರ್ವತದಲ್ಲಿಯೇ, ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನದವರೆಲ್ಲರೂ, ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ, ನಿಮ್ಮ ಉತ್ತಮ ಅರ್ಪಣೆಗಳನ್ನೂ, ನಿಮ್ಮ ಕಾಣಿಕೆಗಳ ಪ್ರಥಮ ಫಲವನ್ನೂ, ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.


ನೀವು ನಿಮ್ಮ ಸೈನ್ಯವನ್ನು ಒಟ್ಟುಗೂಡಿಸುವ ದಿನದಲ್ಲಿ ನಿಮ್ಮ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಮುಂಜಾನೆಯ ಉದರದಿಂದ ಬರುವ ಇಬ್ಬನಿಯಂತೆ ನಿಮ್ಮ ಯೋಧರು ನಿಮ್ಮ ಕಡೆ ಇಳಿದು ಬರುವರು.


ನನ್ನ ದೇವರೇ, ನಿಮ್ಮ ಚಿತ್ತವನ್ನು ಮಾಡಲು ಬಯಸುತ್ತೇನೆ; ನಿಮ್ಮ ನಿಯಮವು ನನ್ನ ಅಂತರಂಗದಲ್ಲಿ ಇದೆ.”


ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,


“ ‘ಯಾರಾದರು ಸಮಾಧಾನ ಸಮರ್ಪಣೆಗಾಗಿ ಬಲಿದಾನ ಮಾಡಬೇಕಾದರೆ, ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಯೆಹೋವ ದೇವರ ದೃಷ್ಟಿಯಲ್ಲಿ ಕಳಂಕರಹಿತವಾಗಿರಬೇಕು.


ಅವನು ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಹೋರಿಗಳನ್ನೂ ಅರ್ಪಿಸುವುದಕ್ಕಾಗಿ ಇಸ್ರಾಯೇಲರ ಯೌವನಸ್ಥರನ್ನು ಕಳುಹಿಸಲು ಅವರು ಅದನ್ನು ಅರ್ಪಿಸಿದರು.


ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು, ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.


ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು.


ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು.


“ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು?” ಎಂದು ಯೆಹೋವ ದೇವರು ನುಡಿಯುತ್ತಾರೆ. “ಟಗರುಗಳ ದಹನಬಲಿಗಳು, ಪುಷ್ಟಪಶುಗಳ ಕೊಬ್ಬು ಇದೆಲ್ಲಾ ನನಗೆ ಬೇಸರ. ಹೋರಿ, ಕುರಿ, ಹೋತಗಳ ರಕ್ತಕ್ಕೆ, ನಾನು ಸಂತೋಷಪಡುವುದಿಲ್ಲ.


ಮರುದಿನ ಬೆಳಿಗ್ಗೆ ಜನರು ಎದ್ದು, ದಹನಬಲಿಗಳನ್ನೂ, ಸಮಾಧಾನ ಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು, ಆಮೇಲೆ ಎದ್ದು ಕುಣಿದಾಡಿದರು.


“ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ದೇವದರ್ಶನದ ಗುಡಾರದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವುದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವುದು.


ಅದನ್ನೆಲ್ಲಾ ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ದಹನಬಲಿಯಾಗಿದೆ. ಅದು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ.


ಆಗ ದೇವರು, “ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು,” ಎಂದರು.


ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.


“ಖಡ್ಗವೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ ಎಚ್ಚರವಾಗು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಕುರುಬನನ್ನು ಹೊಡೆ, ಆಗ ಕುರಿಗಳು ಚದರಿಹೋಗುವುವು. ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.


ಆಗ ಬಿಳಾಮನು ಬಾಲಾಕನಿಗೆ, “ನೀನು ನಿನ್ನ ದಹನಬಲಿಯ ಹತ್ತಿರ ನಿಂತುಕೋ, ನಾನು ಸ್ವಲ್ಪ ದೂರಹೋಗಿ ಬರುತ್ತೇನೆ. ಯೆಹೋವ ದೇವರು ನನಗೆ ದರ್ಶನ ಕೊಡಬಹುದು, ಅವರು ನನಗೆ ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುವೆನು,” ಎಂದು ಹೇಳಿ, ಒಂದು ಎತ್ತರವಾದ ಸ್ಥಳಕ್ಕೆ ಹೋದನು.


ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ.


ಯೇಸು ತಿರುಗಿ ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ.


ದೇವರು ಮನುಷ್ಯನಂತೆ ಸುಳ್ಳಾಡುವವರಲ್ಲ. ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಅವರು ನುಡಿದದ್ದನ್ನು ಮಾಡದಿರುವರೇ? ವಾಗ್ದಾನ ಮಾಡಿದ್ದನ್ನು ಅವರು ನೆರವೇರಿಸದಿರುವರೇ?


ಅದನ್ನು ಯೆಹೋವ ದೇವರಿಗೆ ಸಮರ್ಪಿಸುವಂತೆ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ, ಆ ಮನುಷ್ಯನನ್ನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.


ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದುಬಂದರೆ, ಅವನು ಬಲಿಗಾಗಿ ಹೋತಗಳಲ್ಲಿ ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.


ನಿಮ್ಮಲ್ಲಿರುವದರಿಂದ ಯೆಹೋವ ದೇವರಿಗೆ ಕಾಣಿಕೆಯನ್ನು ಅರ್ಪಿಸಿರಿ. ಯಾರ‍್ಯಾರಿಗೆ ಇಷ್ಟವಿದೆಯೋ ಅವರು, “ಚಿನ್ನ, ಬೆಳ್ಳಿ, ಕಂಚು,


ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ತಂದು, ನೀರಿನಲ್ಲಿ ಅವರನ್ನು ತೊಳೆಯಬೇಕು.


ಯೆಹೋವ ದೇವರಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲ ಮುಂದೆ ತಾರದಿದ್ದರೆ, ಆ ಮನುಷ್ಯನ ಮೇಲೆ ರಕ್ತಾಪರಾಧವು ಹೊರಿಸಬೇಕು. ಅವನು ರಕ್ತ ಸುರಿಸಿರುವವನು, ಆ ಮನುಷ್ಯನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.


ಅವನು ಎರಡು ಹೋತಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಂದು, ಅವುಗಳನ್ನು ಯೆಹೋವ ದೇವರ ಎದುರಿನಲ್ಲಿ ನಿಲ್ಲಿಸಬೇಕು.


ಅವನು ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣವಾಗಿ ಬಲಿಪೀಠದ ಮೇಲೆ ಸುಟ್ಟನು. ಇದು ದಹನಬಲಿಯಾಗಿ ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯ ಸಮರ್ಪಣೆಯಾಗಿತ್ತು.


ದಹನಬಲಿಗಾಗಿ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.


“ ‘ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಯಿಚ್ಛೆಯಾದ ಸಮರ್ಪಣೆಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ಅದನ್ನು ತಿನ್ನಬೇಕು. ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬಹುದು.


ಬೆಚಲೇಲನು ಜಾಲಿ ಮರದಿಂದ ದಹನಬಲಿಯ ಪೀಠವನ್ನು ಮಾಡಿದರು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.


ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.


ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.


ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.


ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ, ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.


ಆಗ ನಿಮ್ಮ ದಹನಬಲಿಗಳನ್ನೂ, ರಕ್ತಮಾಂಸವನ್ನೂ, ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸಬೇಕು. ನಿಮ್ಮ ಬಲಿಗಳ ರಕ್ತವನ್ನು ನಿನ್ನ ದೇವರಾದ ಯೆಹೋವ ದೇವರ ಬಲಿಪೀಠದ ಮೇಲೆ ಸುರಿಯಬೇಕು. ಅನಂತರ ಮಾಂಸ ಊಟಮಾಡಬಹುದು.


ಆಗ ಬಾಲಾಕನು ಬಿಳಾಮನಿಗೆ, “ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸುವುದು ಒಂದು ವೇಳೆ ದೇವರಿಗೆ ಯುಕ್ತವಾಗಿದ್ದೀತು,” ಎಂದನು.


“ ‘ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆಯಿಂದ ತರುವುದಾದರೆ ಅವನು ಕುರಿಗಳಲ್ಲಾಗಲಿ, ಮೇಕೆಗಳಲ್ಲಾಗಲಿ, ಕಳಂಕರಹಿತ ಒಂದು ಗಂಡನ್ನು ತರಬೇಕು.


ಸಮಾಜದ ಹಿರಿಯರು ಯೆಹೋವ ದೇವರ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.


ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,


“ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರು ಇಲ್ಲವೆ ನಿಮ್ಮೊಳಗೆ ಪ್ರವಾಸಿಗರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸಿದರೆ,


ಯೆಹೋವ ದೇವರಿಗೆ ಪಶುಗಳಿಂದಾದರೂ ಕುರಿಗಳಿಂದಾದರೂ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ, ಹರಕೆಯನ್ನು ಈಡೇರಿಸುವ ಬಲಿಯನ್ನಾಗಲಿ, ಉಚಿತವಾದ ಸಮರ್ಪಣೆಯಾಗಲಿ, ನಿಮ್ಮ ಪವಿತ್ರ ಹಬ್ಬಗಳಲ್ಲಿಯಾಗಲಿ ಯೆಹೋವ ದೇವರಿಗೆ ಬೆಂಕಿಯಿಂದ ಅರ್ಪಿಸಲಾಗಲಿ.


“ ‘ನೀನು ಯೆಹೋವ ದೇವರಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾಧಾನದ ಬಲಿಗಳಿಗಾಗಿ ಹೋರಿಯನ್ನು ನೀನು ಸಿದ್ಧಮಾಡುವಾಗ,


ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡು ಮೇಜುಗಳು ಈ ಕಡೆಗೆ ಮತ್ತು ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.


“ ‘ಅಭಿಷಿಕ್ತನಾದ ಯಾಜಕನು ಪಾಪಮಾಡಿ ಜನರ ಮೇಲೆ ಅಪರಾಧವನ್ನು ತಂದರೆ, ತಾನು ಮಾಡಿದ ಪಾಪಕ್ಕಾಗಿ ಕಳಂಕರಹಿತವಾದ ಒಂದು ಎಳೆಯ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.


“ ‘ಯಾರಾದರೂ ಪಾಪ ಪರಿಹಾರದ ಬಲಿಗಾಗಿ ಒಂದು ಕುರಿಮರಿಯನ್ನು ತರುವುದಾದರೆ, ಕಳಂಕರಹಿತವಾದ ಒಂದು ಹೆಣ್ಣನ್ನು ತರಬೇಕು.


“ಯಾರಾದರೂ ಅತಿಕ್ರಮಿಸಿದ್ದರೆ ಮತ್ತು ಯೆಹೋವ ದೇವರ ಪರಿಶುದ್ಧ ಸಂಗತಿಗಳನ್ನು ಅರಿಯದೆ ಪಾಪಮಾಡಿದ್ದರೆ, ಅವರು ತಮ್ಮ ಅತಿಕ್ರಮಕ್ಕಾಗಿ ತಮ್ಮ ಹಿಂಡುಗಳಿಂದ ಕಳಂಕರಹಿತವಾದ ಟಗರನ್ನು ಸಮರ್ಪಿಸಬೇಕು. ಪವಿತ್ರ ಸ್ಥಳಕ್ಕೆ ನೇಮಕವಾದ ಎರಡು ಬೆಳ್ಳಿನಾಣ್ಯ ಅಥವಾ ಹೆಚ್ಚು ಬೆಲೆಬಾಳುವ ಟಗರನ್ನು ಹಿಂಡಿನಿಂದ ತಂದು ಪ್ರಾಯಶ್ಚಿತ್ತ ಬಲಿಗಾಗಿ ಯೆಹೋವ ದೇವರಿಗೆ ಅರ್ಪಿಸಬೇಕು.


ಅಲ್ಲದೆ ಅವನು ಹಿಂಡಿನೊಳಗಿಂದ ಕಳಂಕರಹಿತವಾದ ಒಂದು ಟಗರನ್ನು ನಿನ್ನ ಅಂದಾಜಿಗನುಸಾರ ಪ್ರಾಯಶ್ಚಿತ್ತ ಬಲಿಗಾಗಿ, ಯಾಜಕನ ಬಳಿಗೆ ತರಬೇಕು. ಯಾಜಕನು, ಅಜ್ಞಾನದಿಂದ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ, ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನಿಗೆ ಕ್ಷಮೆ ದೊರಕುವುದು.


“ಯಾರಾದರೂ ಪಾಪಮಾಡಿದರೆ ಮತ್ತು ನೆರೆಯವರಿಗೆ ಮೋಸ ಮಾಡುವ ಮೂಲಕ ಯೆಹೋವ ದೇವರಿಗೆ ವಿಶ್ವಾಸದ್ರೋಹಿ ಆಗಿದ್ದರೆ ಅಥವಾ ಅವರ ಆರೈಕೆಯಲ್ಲಿ ಏನಾದರೂ ಉಳಿಸಿಕೊಂಡಿದ್ದರೆ ಅಥವಾ ಯಾವುದನ್ನಾದರೂ ಕದ್ದುಕೊಂಡಿದ್ದರೆ ಅಥವಾ ಅವರು ತಮ್ಮ ನೆರೆಹೊರೆಯವರಿಗೆ ಮೋಸ ಮಾಡಿದ್ದರೆ,


ಅವನು ಆರೋನನಿಗೆ, “ನೀನು ಪಾಪ ಪರಿಹಾರದ ಬಲಿಗಾಗಿ ಒಂದು ಎಳೆಯ ಕರುವನ್ನೂ ಮತ್ತು ದಹನಬಲಿಗಾಗಿ ಕಳಂಕರಹಿತ ಟಗರನ್ನೂ ತೆಗೆದುಕೊಂಡು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸು.


“ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.


ನೀವು ಸಿವುಡನ್ನು ಅರ್ಪಿಸುವ ದಿನದಲ್ಲಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂತೆ ಒಂದು ವರ್ಷದ ಮತ್ತು ಕಳಂಕರಹಿತವಾದ ಕುರಿಮರಿಯನ್ನು ಅರ್ಪಿಸಬೇಕು.


ಇದಲ್ಲದೆ ನೀವು ರೊಟ್ಟಿಯೊಂದಿಗೆ ಕಳಂಕರಹಿತವಾದ ಒಂದು ವರ್ಷದ ಏಳು ಕುರಿಮರಿಗಳನ್ನೂ ಒಂದು ಎಳೆಯ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಅವು ಯೆಹೋವ ದೇವರಿಗೆ ದಹನಬಲಿಗಳಾಗುವುವು. ಅವುಗಳೊಂದಿಗೆ ಆಹಾರ ಬಲಿಯು ಮತ್ತು ಪಾನಾರ್ಪಣೆಗಳು, ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು.


“ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು.


“ ‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,


ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.


ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.


ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.


ಸಭೆಯು ತಂದ ದಹನಬಲಿಗಳ ಲೆಕ್ಕವೇನೆಂದರೆ: ಎಪ್ಪತ್ತು ಹೋರಿಗಳು, ನೂರು ಟಗರುಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಯೆಹೋವ ದೇವರಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು.


ಮೋಶೆಯ ಗ್ರಂಥದಲ್ಲಿ ಬರೆದಿರುವಂತೆ, ಜನರ ವಂಶಗಳ ಮನೆಗಳ ಪ್ರಕಾರ, ಯೆಹೋವ ದೇವರಿಗೆ ಅರ್ಪಿಸಲು ಅವರು ಕೊಡುವ ಹಾಗೆ ದಹನಬಲಿಗಳನ್ನು ತೆಗೆದು ಇಟ್ಟರು. ಹಾಗೆಯೇ ಎತ್ತುಗಳನ್ನು ತೆಗೆದಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು