Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 3:15 - ಕನ್ನಡ ಸಮಕಾಲಿಕ ಅನುವಾದ

15 ಅಂಥ ಜ್ಞಾನವು ದೈವಿಕ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು. ಅದು ಆತ್ಮಿಕವಾದದ್ದಲ್ಲ. ಅದು ದೆವ್ವಗಳಿಗೆ ಸಂಬಂಧಪಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು, ಪ್ರಾಕೃತವಾದುದು, ಪೈಶಾಚಿಕವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತ ಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಅಸ್ಲಿ ಬುದ್ದ್ ಸರ್ಗಾ ವೈನಾ ಯೆಲ್ಲಿ ನ್ಹಯ್, ತಿ ಬುದ್ದ್ ಶಾರಾಕ್ ಅನಿ ಹ್ಯಾ ಜಗಾಕ್ ಸಮಂದ್ ಪಡಲ್ಲಿ ಸ್ವಾಭಾವಿಕ್ ಅನಿ ಮ್ಹಾರ್ವಾಂಚ್ಯಾಕ್ನಾ ಯೆಲ್ಲಿ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 3:15
30 ತಿಳಿವುಗಳ ಹೋಲಿಕೆ  

ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.


ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.


ಏಕೆಂದರೆ ಇಹಲೋಕ ಜ್ಞಾನವು ದೇವರ ದೃಷ್ಟಿಯಲ್ಲಿ ಮೂರ್ಖತನವಾಗಿದೆ, ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುವರು,” ಎಂದೂ


ವಿನಾಶನವೇ ಅವರ ಅಂತ್ಯವು. ಹೊಟ್ಟೆಯೇ ಅವರ ದೇವರು. ನಾಚಿಕೆ ಕಾರ್ಯಗಳಲ್ಲಿಯೇ ಅವರ ಪ್ರಭಾವ. ಅವರು ಲೌಕಿಕವಾದವುಗಳ ಮೇಲೆ ಮನಸ್ಸಿಡುತ್ತಾರೆ.


ಆದರೆ ಭೌತಿಕ ಮನುಷ್ಯನು ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು.


ಈ ಲೋಕದೊಂದಿಗೂ, ವಿಶೇಷವಾಗಿ ನಮ್ಮ ಮತ್ತು ನಿಮ್ಮ ಸಂಬಂಧದಲ್ಲಿಯೂ, ನಾವು ದೇವರಿಂದ ಹೊಂದಿದ ಪವಿತ್ರತೆ ಮತ್ತು ದೈವಿಕ ನಿಷ್ಕಪಟತ್ವದಿಂದ ಯೋಗ್ಯರಾಗಿ ವರ್ತಿಸಿದ್ದೇವೆ ಎಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಈ ಮನಸ್ಸಾಕ್ಷಿಯ ಹೇಳಿಕೆಯು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಇದನ್ನು ಈ ಲೋಕದ ಜ್ಞಾನದಿಂದ ಅಲ್ಲ, ದೇವರ ಕೃಪೆಯನ್ನೇ ಆಶ್ರಯಿಸಿ ಮಾಡಿದ್ದೇವೆ.


ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.


ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಗೊಟ್ಟು ವಿಶ್ವಾಸದಲ್ಲಿ ಬಿದ್ದುಹೋಗುವರೆಂದು ಪವಿತ್ರಾತ್ಮ ದೇವರು ಸ್ಪಷ್ಟವಾಗಿ ಹೇಳುತ್ತಾರೆ.


ಇವರು ನಿಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವವರೂ ಪ್ರಾಪಂಚಿಕ ಮನುಷ್ಯರೂ ಪವಿತ್ರಾತ್ಮ ದೇವರಿಲ್ಲದವರೂ ಆಗಿದ್ದಾರೆ.


ಏಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ಹೇಗೆಂದರೆ, ನಿಮ್ಮೊಳಗೆ ಅಸೂಯೆ, ಜಗಳಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದೀರಲ್ಲದೆ ಕೇವಲ ಮಾನವರಂತೆ ನಡೆಯುತ್ತೀರಲ್ಲವೇ?


ದೇವರು ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ತಮ್ಮ ಪುತ್ರನ ಮುಖಾಂತರ ಲೋಕದ ಜನರನ್ನು ರಕ್ಷಿಸುವುದಕ್ಕಾಗಿಯೇ ಅವರನ್ನು ಲೋಕಕ್ಕೆ ಕಳುಹಿಸಿದರು.


“ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ. ನನ್ನನ್ನು ಅವರು ಅರಿಯರು; ಮೂರ್ಖ ಮಕ್ಕಳಾಗಿದ್ದಾರೆ, ಅವರು ಗ್ರಹಿಕೆಯಿಲ್ಲದವರು; ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ, ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.”


ಭೂಲೋಕದವರನ್ನೆಲ್ಲಾ ವಂಚಿಸುತ್ತಿದ್ದ ಆ ಮಹಾ ಘಟಸರ್ಪನು ಎಂದರೆ ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲಾದ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರನ್ನೂ ಅವನೊಂದಿಗೆ ತಳ್ಳಲಾಯಿತು.


ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು.


ಥುವತೈರದಲ್ಲಿರುವ ಉಳಿದವರಿಗೆ ನಾನು ಹೇಳುವುದೇನಂದರೆ: ಅವಳ ಬೋಧನೆಯನ್ನು ನೀವು ಅವಲಂಬಿಸಲಿಲ್ಲ. ಸೈತಾನನ ಆಳವಾದ ರಹಸ್ಯ ಬೋಧನೆಗಳು ಎಂದು ಹೇಳುವ ಬೋಧನೆಯನ್ನು ನೀವು ಅವಲಂಬಿಸಲಿಲ್ಲ.


ಆ ನಿಯಮ ಮೀರುವವನ ಬರುವಿಕೆಯು ಸೈತಾನನ ಕಾರ್ಯಗಳಿಗೆ ಅನುಸಾರವಾಗಿರುವುದು. ಅವು ಎಲ್ಲಾ ಶಕ್ತಿಯ ಪ್ರದರ್ಶನದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಇರುವವು.


ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು.


ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವಂತೆ, ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾರೆ. ದೇವರು ಬಲಿಷ್ಠರನ್ನು ನಾಚಿಕೆಪಡಿಸುವಂತೆ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾರೆ.


ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ.


“ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?


ನೀವು ನಿಮ್ಮ ತಂದೆಯಾದ ಪಿಶಾಚನಿಗೆ ಸೇರಿದವರಾಗಿದ್ದೀರಿ. ನಿಮ್ಮ ತಂದೆಯ ಆಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಾನುಸಾರವಾಗಿ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿನ ತಂದೆಯೂ ಆಗಿದ್ದಾನೆ.


“ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ.


ಆ ದಿವಸಗಳಲ್ಲಿ ಅಹೀತೋಫೆಲನು ತಿಳಿಸಿದ ಆಲೋಚನೆಯು ದೇವರನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಗಳನ್ನು ದಾವೀದನೂ, ಅಬ್ಷಾಲೋಮನೂ ಹಾಗೆಯೇ ಗೌರವಿಸುತ್ತಿದ್ದರು.


ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.


ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮೆಯನ ಮಗ ಯೊನಾದಾಬನೆಂಬ ಹೆಸರುಳ್ಳ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಬಹು ಕುಯುಕ್ತಿಯುಳ್ಳವನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು