Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 1:21 - ಕನ್ನಡ ಸಮಕಾಲಿಕ ಅನುವಾದ

21 ಆದಕಾರಣ ಎಲ್ಲಾ ಮಾಲಿನ್ಯವನ್ನೂ ಉಳಿದಿರುವ ದುಷ್ಟತನವನ್ನೂ ತೆಗೆದುಹಾಕಿ, ನಿಮ್ಮೊಳಗೆ ಬೇರೂರಿರುವ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದಕಾರಣ ಎಲ್ಲಾ ನೀಚತನವನ್ನೂ ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆಯಿಂದ ಎಡೆಗೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸುವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ತುಮಿ ಅದ್ದಿಚ್ಯಾನುಚ್ ಯೆಲ್ಲೆ ಬುರ್ಶೆಪಾನ್ ಅನಿ ಬುರ್ಶಿ ಚಾಲ್ ಸೊಡುನ್ ಸೊಡಾ ಅನಿ ತುಮ್ಕಾಚ್ ತುಮಿ ದೆವಾಕ್ ಒಪ್ಸುನ್ ದಿವಾ ಅನಿ ತುಮ್ಕಾ ರಾಕುಕ್ ಸಕ್ತಲ್ಯಾ ಗೊಸ್ಟಿಕ್ ಸ್ವಿಕಾರ್ ಕರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 1:21
37 ತಿಳಿವುಗಳ ಹೋಲಿಕೆ  

ನಿಮಗೆ ಉಪದೇಶಿಸಿದಂತೆ, ನೀವು ನಿಮ್ಮ ಹಿಂದಿನ ನಡತೆಯ ಪ್ರಕಾರ ಮೋಸಕರವಾದ ಆಶೆಗಳ ಅನುಸಾರವಾಗಿರುವ ಹಳೆಯ ಸ್ವಭಾವವನ್ನು ತೆಗೆದುಹಾಕಬೇಕು.


ನೀವು ಸಹ ನಿಮ್ಮ ರಕ್ಷಣೆಯ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿದ ಮೇಲೆ ಕ್ರಿಸ್ತನಲ್ಲಿ ನಂಬಿಕೆಯಿಟ್ಟು ವಾಗ್ದಾನದ ಪವಿತ್ರಾತ್ಮರಿಂದ ಮುದ್ರೆಹೊಂದಿದ್ದೀರಿ.


ಪ್ರಿಯರೇ, ಈ ಲೋಕದಲ್ಲಿ ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಬದುಕಿಸುವುದು ದೇವರ ಆತ್ಮವೇ, ನರಮಾಂಸವಾದರೋ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ನುಡಿದ ಮಾತುಗಳೇ ದೇವರಾತ್ಮವೂ ಜೀವವೂ ಆಗಿರುತ್ತವೆ.


ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ, ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ.


ಆದಕಾರಣ, ಎಲ್ಲಾ ದ್ವೇಷವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೆಕಿಚ್ಚನ್ನೂ ಎಲ್ಲಾ ಅಪವಾದಗಳನ್ನೂ ವಿಸರ್ಜಿಸಿರಿ.


ಆದಕಾರಣ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು,


ದೇವರ ಸಮೀಪಕ್ಕೆ ಬನ್ನಿರಿ. ಆಗ ನಿಮ್ಮ ಸಮೀಪಕ್ಕೆ ದೇವರು ಬರುವರು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.


ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.


ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.


ಇಸ್ರಾಯೇಲರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರಿಹೇಳಲಾಯಿತು. ಆದರೆ ಕೇಳಿದವರು ವಿಧೇಯರಾದವರ ನಂಬಿಕೆಯಲ್ಲಿ ಭಾಗವಹಿಸದೇ ಹೋದದ್ದರಿಂದ, ಸಾರಿದ ವಾಕ್ಯವು ಅವರಿಗೆ ಪ್ರಯೋಜನವಾಗಲಿಲ್ಲ.


ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.


ನಾನು ಸಾರಿದ ಈ ಸುವಾರ್ತೆಯ ವಾಕ್ಯವನ್ನು ನೀವು ಬಿಗಿಯಾಗಿ ಹಿಡಿದುಕೊಂಡರೆ, ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ, ನಿಮ್ಮ ನಂಬಿಕೆ ವ್ಯರ್ಥವಾಗಿ ಹೋಗುತ್ತದೆ.


ಆದರೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಒಪ್ಪಿಸಿದ ಬೋಧನೆಗೆ ಹೃದಯದಿಂದ ವಿಧೇಯರಾದುದ್ದಕ್ಕಾಗಿ, ದೇವರಿಗೆ ಸ್ತೋತ್ರವಾಗಲಿ.


ದೀನರ ಸಂತೋಷವು ಯೆಹೋವ ದೇವರಲ್ಲಿ ಹೆಚ್ಚಾಗುವುವು. ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸುವರು.


ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ.


ಈ ಕಾರಣಕ್ಕಾಗಿಯೇ ನಂಬುವವರಾದ ನಿಮ್ಮಲ್ಲಿ ಕಾರ್ಯಸಾಧಿಸುವ ದೇವರ ವಾಕ್ಯವನ್ನು ನಮ್ಮಿಂದ ನೀವು ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ, ನಿಜವಾಗಿಯೂ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.


ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.


ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ, ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನೂ ನೀವು ಹೊಲಸ್ಸಾಗಿ ಭಾವಿಸಿ, ಆ ವಿಗ್ರಹಕ್ಕೆ, “ತೊಲಗಿಹೋಗು,” ಎಂದು ಹೇಳಿ, ಅದನ್ನು ಹೊಲೆಯ ಬಟ್ಟೆಯಂತೆ ಬಿಸಾಡಿ ಬಿಡುವಿರಿ.


ಆ ದಿನದಲ್ಲಿ ಮನುಷ್ಯರು ಪೂಜಿಸುವುದಕ್ಕೋಸ್ಕರ ಮಾಡಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಚಿನ್ನದ ವಿಗ್ರಹಗಳನ್ನೂ ಇಲಿ ಬಾವಲಿಗಳಿಗಾಗಿ ಬಿಸಾಡಿಬಿಡುವರು.


“ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.


ಸಾರ್ವಭೌಮ ಯೆಹೋವ ದೇವರ ಆತ್ಮರು ನನ್ನ ಮೇಲೆ ಇದ್ದಾರೆ. ಏಕೆಂದರೆ ಯೆಹೋವ ದೇವರು ನನ್ನನ್ನು ಬಡವರಿಗೆ ಶುಭಸಂದೇಶವನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಮುರಿದ ಹೃದಯಗಳನ್ನು ಕಟ್ಟುವುದಕ್ಕೂ, ಬಂಧಿತರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಮತ್ತು ಕೈದಿಗಳಿಗೆ ಕತ್ತಲೆಯಿಂದ ಬಿಡುಗಡೆ ಮಾಡಲು


ಏಕೆಂದರೆ ನಿಮ್ಮ ನಂಬಿಕೆಯ ಅಂತಿಮ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ.


ಕೆಲವು ಕೊಂಬೆಗಳು ಮುರಿದುಹೋಗಿರುವುದಾದರೆ, ಕಾಡು ಓಲಿವ್ ಮರದಂತಿರುವ ನೀನು ಅವುಗಳ ನಡುವೆ ಕಸಿಮಾಡಿ ಉತ್ತಮ ಓಲಿವ್ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರಲಾಗಿ,


ಆದ್ದರಿಂದ ನಾನು ನಿನ್ನನ್ನು ಕೂಡಲೇ ಕರೆದುಕೊಂಡು ಬರಲು ಕೆಲವರನ್ನು ಕಳುಹಿಸಿದೆ. ನೀನು ಬಂದಿರುವುದು ಒಳ್ಳೆಯದೇ ಆಯಿತು. ಕರ್ತ ಯೇಸು ನಮಗೆ ಏನು ಹೇಳಬೇಕೆಂದು ನಿನಗೆ ಆಜ್ಞಾಪಿಸಿರುವರೋ ಅದೆಲ್ಲವನ್ನು ಕೇಳಲು ಈಗ ನಾವು ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.


ಸಾತ್ವಿಕರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು.


ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ ಯೆಹೋವ ದೇವರನ್ನು ಹುಡುಕಿರಿ. ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ. ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.


ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.


ನೀವು ಮಾಡುವ ದುಷ್ಕೃತ್ಯಗಳನ್ನೆಲ್ಲಾ ನಿಮ್ಮಿಂದ ಎಸೆದುಬಿಡಿರಿ. ಹೊಸ ಹೃದಯವನ್ನೂ, ಹೊಸ ಆತ್ಮವನ್ನೂ ನೀವು ಪಡೆದುಕೊಳ್ಳಿರಿ. ಇಸ್ರಾಯೇಲಿನ ಮನೆತನದವರೇ, ನೀವು ಸಾಯುವುದೇಕೆ?


ಏಕೆಂದರೆ ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ, ಶಕ್ತಿಯಲ್ಲಿಯೂ ಪವಿತ್ರಾತ್ಮ ದೇವರ ಸನ್ನಿಧಿಯಲ್ಲಿಯೂ ಬಹು ನಿಶ್ಚಯದಲ್ಲಿಯೂ ಬಂತೆಂಬುದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಮಾಡಿದ ಜೀವನ ಎಂಥದ್ದೆಂದು ನೀವೇ ಬಲ್ಲಿರಿ.


ಅಶ್ಲೀಲತೆ, ಬುದ್ಧಿಹೀನ ಮಾತು, ಅಸಭ್ಯ ಹರಟೆ ಇವು ಬೇಡ, ಇವು ಅಯುಕ್ತವಾಗಿವೆ, ಪ್ರತಿಯಾಗಿ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ.


ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ. ಏಕೆಂದರೆ ನಾವೆಲ್ಲರೂ ಒಂದೇ ದೇಹದ ಅಂಗಗಳು.


ಅವನು ಆ ಪಾಪ ಮಾಡಿದವನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ, ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ, ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲಿ.


ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು