Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 4:4 - ಕನ್ನಡ ಸಮಕಾಲಿಕ ಅನುವಾದ

4 ಆದರೆ ಒಬ್ಬಬ್ಬನು ತನ್ನ ತನ್ನ ದ್ರಾಕ್ಷಿಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕುಳಿತುಕೊಳ್ಳುವನು. ಭಯಪಡಿಸುವವನು ಯಾರೂ ಇರುವುದಿಲ್ಲ. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಇದನ್ನು ನುಡಿದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಒಬ್ಬೊಬ್ಬನು ತನ್ನ ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರನ್ನು ಯಾರೂ ಹೆದರಿಸರು. ಸೇನಾಧೀಶ್ವರನಾದ ಯೆಹೋವನೇ ಇದನ್ನು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿಲ್ಲದು ರಾಷ್ಟ್ರಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಅವಶ್ಯವಿರದವಕ್ಕೆ ಯುದ್ಧವಿದ್ಯೆಯ ಕಲಿಕೆ. ಕೂರುವರು ಪ್ರತಿಯೋರ್ವರು ತಂತಮ್ಮ ದ್ರಾಕ್ಷಾಲತೆಗಳಡಿಯಲೆ ಕೂರುವರವರು ತಂತಮ್ಮ ಅಂಜೂರ ಗಿಡಗಳ ನೆರಳಲೆ ಈ ಪರಿ ನುಡಿದಿಹನು ಸೇನಾಧೀಶ್ವರನಾದ ಸರ್ವೇಶ್ವರನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು. ಯಾರೂ ಅವರನ್ನು ಭಯಗೊಳಿಸುವದಿಲ್ಲ. ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 4:4
25 ತಿಳಿವುಗಳ ಹೋಲಿಕೆ  

“ ‘ಆ ದಿವಸದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷಿಬಳ್ಳಿಯ ಕೆಳಗೂ, ಅಂಜೂರದ ಮರದ ಕೆಳಗೂ ಕರೆಯುವಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.”


ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.


ನಾನು ನನ್ನ ಜನರನ್ನು ಇತರ ಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಬಹು ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.


ಆದರೆ ನೀವು ತಿರಸ್ಕರಿಸಿ ತಿರುಗಿಬಿದ್ದರೆ, ಖಡ್ಗದ ಬಾಯಿಗೆ ತುತ್ತಾಗುವಿರಿ,” ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.


ನೀನು ನೀತಿಯಲ್ಲಿ ನೆಲೆಗೊಂಡಿರುವೆ. ಬಾಧೆಯಿಂದ ದೂರವಾಗಿರುವೆ. ನೀನು ಭೀತಿಯಿಂದ ಭಯಪಡುವುದಿಲ್ಲ, ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.


ಅವರು ಇನ್ನು ಮೇಲೆ ಇತರ ಜನಾಂಗಗಳಿಗೆ ಕೊಳ್ಳೆಯಾಗುವುದಿಲ್ಲ; ಕಾಡುಮೃಗಗಳು ಅವರನ್ನು ತಿನ್ನುವುದಿಲ್ಲ. ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯವಾಗಿ ವಾಸಿಸುವರು.


ಆಗ ಯೆಹೋವ ದೇವರಲ್ಲಿ ಆನಂದಗೊಳ್ಳುವಿ. ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿಸುವಂತೆ ನಿನಗೆ ಮಾಡುವೆನು.” ಏಕೆಂದರೆ ಯೆಹೋವ ದೇವರ ಬಾಯಿ ಇದನ್ನು ನುಡಿದಿದೆ.


ಆಗ ಯೆಹೋವ ದೇವರ ಮಹಿಮೆಯು ಗೋಚರವಾಗುವುದು. ಮಾನವರೆಲ್ಲರೂ ಒಟ್ಟಿಗೆ ಅದನ್ನು ಕಾಣುವರು. ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.”


ನೀವು ಹೇಳುವಿರಿ, “ಗೋಡೆಯಿಲ್ಲದ ಹಳ್ಳಿಗಳಿಲ್ಲದ ದೇಶದ ಮೇಲೆ ನಾನು ಆಕ್ರಮಣ ಮಾಡುತ್ತೇನೆ. ಪೌಳಿಗೋಡೆಗಳಿಲ್ಲದೆ ಇಲ್ಲವೆ ಬಾಗಿಲುಗಳು ಅಗುಳಿಗಳು ಇಲ್ಲದೆ ಅವರು ಶಾಂತಿಯುತ ಮತ್ತು ನಿರ್ಭಯವಾಗಿ ವಾಸಿಸುವವರ ಮೇಲೆ ದಾಳಿಮಾಡುತ್ತೇನೆ.


“ ‘ಅವರ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ದುಷ್ಟಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು. ಆದ್ದರಿಂದ ಅವರು ನಿರ್ಭಯವಾಗಿ ಮರುಭೂಮಿಯಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.


ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು. ನಿಮ್ಮ ಶಿಕ್ಷೆ ಅವರ ಮೇಲಿರುವಾಗ, ಅವರು ಪ್ರಾರ್ಥನೆಯನ್ನು ಮಾಡಿದರು.


“ ‘ನಾನು ದೇಶದಲ್ಲಿ ಶಾಂತಿಯನ್ನು ಕೊಡುವೆನು, ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ. ದೇಶದಲ್ಲಿ ದುಷ್ಟಮೃಗಗಳು ಇಲ್ಲದ ಹಾಗೆ ನಾನು ಮಾಡುವೆನು. ಖಡ್ಗ ನಿಮ್ಮ ದೇಶದಲ್ಲಿ ಹಾದು ಹೋಗುವುದಿಲ್ಲ.


ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು; ಅನೇಕರು ನಿನ್ನಿಂದ ಮೆಚ್ಚಿಕೆಯನ್ನು ಅಪೇಕ್ಷಿಸುವರು.


ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ ನೀತಿಯ ಫಲವೂ ಜನರಿಗೆ ಬರಲಿ.


ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, ಅವು ಯಾರ ಹೆದರಿಕೆಯೂ ಇಲ್ಲದೆ ಮಲಗುವ ಮಂದೆಗಳಿಗೆ ಸ್ಥಳವಾಗುವುವು.


“ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.


“ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.


“ ‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ, ಇಸ್ರಾಯೇಲೇ ಹೆದರಬೇಡ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ. ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು. ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು.


ಆದ್ದರಿಂದ, ನನ್ನ ದೇವರಾದ ಯೆಹೋವ ದೇವರ ಹೆಸರಿಗೆ ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಯೆಹೋವ ದೇವರು ನನ್ನ ತಂದೆಯಾದ ದಾವೀದನಿಗೆ, ‘ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಕುಳ್ಳಿರಿಸುವ ನಿನ್ನ ಮಗನೇ ನನ್ನ ಹೆಸರಿಗೆ ದೇವಾಲಯವನ್ನು ಕಟ್ಟಿಸುವನು,’ ಎಂದು ಹೇಳಿದ್ದಾರಲ್ಲವೇ.


ಆಕಸ್ಮಿಕ ವಿಪತ್ತಿಗೆ ನೀನು ಅಂಜುವುದಿಲ್ಲ; ದುಷ್ಟರ ಮೇಲೆ ಬರುವ ನಾಶನಕ್ಕೂ ನೀನು ಭಯಪಡದಿರುವೆ.


ನೀತಿಯ ಕೆಲಸವು ಸಮಾಧಾನವೂ, ನೀತಿಯ ಫಲವು ನಿತ್ಯವಾದ ಶಾಂತಿಯೂ, ಭರವಸೆಯೂ ಆಗಿರುವುದು.


ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ. ಅವರು ಇನ್ನು ಮೇಲೆ ಭಯಪಡುವುದೇ ಇಲ್ಲ, ಅಂಜುವುದಿಲ್ಲ, ಕೊರತೆ ಪಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.


ಆದ್ದರಿಂದ ಹೆರುವವಳು ಒಬ್ಬ ಮಗನನ್ನು ಹೆರುವ ಕಾಲದವರೆಗೂ ಇಸ್ರಾಯೇಲನ್ನು ಕೈಬಿಡಲಾಗುವುದು. ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲರ ಬಳಿಗೆ ಹಿಂದಿರುಗುವರು.


ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯ ಮಾಡರು; ಸುಳ್ಳಾಡರು, ಅವರ ಬಾಯಲ್ಲಿ ಮೋಸವಿರದು. ಅವರು ಮಂದೆಯಂತೆ ಮೇದು ಮಲಗುವರು. ಅವರನ್ನು ಭಯಪಡಿಸುವವನು ಒಬ್ಬನೂ ಇರುವುದಿಲ್ಲ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು