Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 4:2 - ಕನ್ನಡ ಸಮಕಾಲಿಕ ಅನುವಾದ

2 ಅನೇಕ ಜನಾಂಗಗಳು ಬಂದು ಹೀಗೆಂದು ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ಅವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು. ನಾವು ಅವರ ದಾರಿಗಳಲ್ಲಿ ನಡೆಯುವೆವು. ಚೀಯೋನಿನಿಂದ ದೇವರ ನಿಯಮವೂ ಯೆರೂಸಲೇಮಿನಿಂದ ದೇವರ ವಾಕ್ಯವೂ ಹೊರಡುವುವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಈ ಪರಿ ಬಂದ ಹಲವು ನಾಡಿಗರು ಪೇಳ್ವರು ಜನರಿಗೆ; ಬನ್ನಿ, ಹೋಗೋಣ, ಸರ್ವೇಶ್ವರನ ಪರ್ವತಕೆ ಯಕೋಬ್ಯರಾ ದೇವರ ಮಂದಿರಕೆ. ಬೋಧಿಸುವನಾತ ತನ್ನ ಮಾರ್ಗವನು ನಮಗೆ ನಡೆಯುವೆವು ನಾವು ಆತನ ದಾರಿಗನುಗುಣವಾಗ್ಗೆ. ಬರುವುದು ಧರ್ಮೋಪದೇಶ ಸಿಯೋನಿಂದ ಸರ್ವೇಶ್ವರನಾ ವಾಕ್ಯ ಜೆರುಸಲೇಮಿನಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಹೊರಟುಬಂದ ಬಹು ದೇಶಗಳವರು - ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇವಿುನಿಂದ ಯೆಹೋವನ ವಾಕ್ಯವೂ ಹೊರಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು. “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ, ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ. ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು. ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು. ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 4:2
35 ತಿಳಿವುಗಳ ಹೋಲಿಕೆ  

ಅನೇಕ ಪ್ರಜೆಗಳು ಬಂದು ಹೀಗೆ ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ, ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ದೇವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು, ನಾವು ಅವರ ದಾರಿಗಳಲ್ಲಿ ನಡೆಯುವೆವು.” ಏಕೆಂದರೆ ಚೀಯೋನಿನಿಂದ ದೇವರ ನಿಯಮವೂ, ಯೆರೂಸಲೇಮಿನಿಂದ ಯೆಹೋವ ದೇವರ ವಾಕ್ಯವೂ ಹೊರಡುವುವು.


ಒಂದು ದಿನ ಬರುವದು, ಆಗ ಎಫ್ರಾಯೀಮನ ಪರ್ವತಗಳ ಮೇಲಿರುವ ಕಾವಲುಗಾರರು, ‘ಏಳಿರಿ, ಚೀಯೋನಿಗೆ, ನಮ್ಮ ಯೆಹೋವ ದೇವರ ಬಳಿಗೆ ಹೋಗೋಣ,’ ” ಎಂದು ಕೂಗುವರು.


ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.


ನಿನ್ನ ಮಕ್ಕಳೆಲ್ಲಾ ಯೆಹೋವ ದೇವರಿಂದಲೇ ಬೋಧನೆ ಪಡೆಯುವರು. ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು.


ಯಾವನು ಯೆಹೋವ ದೇವರಿಗೆ ಭಯಪಡುವನೋ, ಅಂಥವನಿಗೆ ಅವರು ಆಯ್ದುಕೊಳ್ಳತಕ್ಕ ಮಾರ್ಗವನ್ನು ಬೋಧಿಸುವರು.


ಯಾರಾದರೂ ದೇವರ ಚಿತ್ತವನ್ನು ಮಾಡಬಯಸುವುದಾದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಮಾತನಾಡುತ್ತೇನೋ ಎಂಬುದು ಅವರಿಗೆ ತಿಳಿಯುವುದು.


ಬಲವಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಪವಿತ್ರಾತ್ಮ ಶಕ್ತಿಯಿಂದಲೂ ಮಾಡಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. ಯೆರೂಸಲೇಮಿನಿಂದ ಪ್ರಾರಂಭಿಸಿ, ಇಲ್ಲುರಿಕದವರೆಗೆ ನಾನು ಕ್ರಿಸ್ತನ ಸುವಾರ್ತೆಯನ್ನು ಸಂಪೂರ್ಣವಾಗಿ ಸಾರಿದ್ದೇನೆ.


ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ.


ಶಿಷ್ಯರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು. ಕರ್ತನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ, ಸೂಚಕಕಾರ್ಯಗಳಿಂದ ತಮ್ಮ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದರು.


ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗಗಳಲ್ಲಿ ಉಳಿದವರೆಲ್ಲಾ ವರ್ಷ ವರ್ಷಕ್ಕೆ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೂ ಹೋಗುವರು.


ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟು ಹೊರಡುವಾಗ, “ಬರುವ ಸಬ್ಬತ್ ದಿನವೂ ಬಂದು ಇದೇ ವಿಷಯಗಳನ್ನು ಕುರಿತು ಮಾತನಾಡಿರಿ,” ಎಂದು ಜನರು ಅವರನ್ನು ಕೇಳಿಕೊಂಡರು.


‘ಅವರೆಲ್ಲರೂ ದೇವರಿಂದಲೇ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ.


ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.


“ಆ ದಿವಸದಲ್ಲಿ ಅನೇಕ ಜನಾಂಗಗಳು ಯೆಹೋವ ದೇವರನ್ನು ಅಂಟಿಕೊಂಡು ನನ್ನ ಜನರಾಗುವರು, ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆಂದು ತಿಳಿದುಕೊಳ್ಳುವೆ.


ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.


ನಿಮ್ಮ ಬಲವಾದ ರಾಜದಂಡವನ್ನು ಯೆಹೋವ ದೇವರು ಚೀಯೋನಿನ ಹೊರಗೂ ವಿಸ್ತರಿಸುವರು. “ನಿಮ್ಮ ಶತ್ರುಗಳ ಮಧ್ಯದಲ್ಲಿ ದೊರೆತನ ಮಾಡಿರಿ,” ಎಂದು ಅವರು ನಿಮಗೆ ಹೇಳುವರು.


ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು.


ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ.


“ಯೆಹೋವ ದೇವರ ಆಲಯಕ್ಕೆ ಹೋಗೋಣ,” ಎಂದು ಜನರು ನನ್ನನ್ನು ಕರೆದಾಗ, ನನಗೆ ಸಂತೋಷವಾಯಿತು.


ನನ್ನ ಪರಿಶುದ್ಧ ಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವನ್ನು ಉಂಟುಮಾಡುವೆನು. ನನ್ನ ಬಲಿಪೀಠದ ಮೇಲೆ ಅವರು ಅರ್ಪಿಸುವ ದಹನಬಲಿಗಳು, ಯಜ್ಞಗಳು ನನಗೆ ಒಪ್ಪಿಗೆಯಾಗುವುವು, ಏಕೆಂದರೆ ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವು ಎಂದು ಎನಿಸಿಕೊಳ್ಳುವುದು.”


ನಾವು ನಡೆಯತಕ್ಕ ಮಾರ್ಗವನ್ನೂ, ನಾವು ಮಾಡತಕ್ಕ ಕಾರ್ಯವನ್ನೂ ನಿನ್ನ ದೇವರಾದ ಯೆಹೋವ ದೇವರು ನಮಗೆ ತಿಳಿಸುವ ಹಾಗೆ, ನಿನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡು,” ಎಂದರು.


ಎಫ್ರಾಯೀಮಿನೊಳಗಿಂದ ರಥಗಳನ್ನೂ ಯೆರೂಸಲೇಮಿನೊಳಗಿಂದ ಯುದ್ಧದ ಕುದುರೆಗಳನ್ನೂ ತೆಗೆದುಬಿಡುವೆನು. ಯುದ್ಧದ ಬಿಲ್ಲು ಸಹ ಮುರಿದು ಹಾಕಲಾಗುವುದು. ಇತರ ರಾಷ್ಟ್ರಗಳಿಗೆ ಸಮಾಧಾನಕರವಾಗಿರುವುದು. ಆತನ ದೊರೆತನವು ಸಮುದ್ರದಿಂದ ಸಮುದ್ರಕ್ಕೂ, ನದಿಯಿಂದ ಭೂಮಿಯ ಅಂತ್ಯಗಳವರೆಗೂ ಇರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು