Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 2:1 - ಕನ್ನಡ ಸಮಕಾಲಿಕ ಅನುವಾದ

1 ಅಪರಾಧವನ್ನು ಯೋಚಿಸಿ ಅಪರಾಧವನ್ನು ಕಲ್ಪಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡೆಸುವವರಿಗೆ ಕಷ್ಟ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ. ಏಕೆಂದರೆ ಅದು ಅವರ ಕೈಶಕ್ತಿಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮರ್ಥ್ಯ ಅವರ ಕೈಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ತಮ್ಮ ಹಾಸಿಗೆಗಳಲ್ಲೇ ಅನ್ಯಾಯವನ್ನು ಯೋಚಿಸಿ ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ! ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಪಾಪಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು. ಇವರು ಹಾಸಿಗೆಯ ಮೇಲೆ ಬಿದ್ದುಕೊಂಡು ಪಾಪಮಾಡಲು ಯೋಚಿಸುತ್ತಾರೆ. ಬೆಳಿಗ್ಗೆ ಸೂರ್ಯ ಮೂಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ. ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟಪ್ರಕಾರ ನಡೆದುಕೊಳ್ಳಲು ಬಲವಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 2:1
40 ತಿಳಿವುಗಳ ಹೋಲಿಕೆ  

ಕುಯುಕ್ತಿಯನ್ನು ತಮ್ಮ ಹಾಸಿಗೆಯ ಮೇಲೆ ಕಲ್ಪಿಸುತ್ತಾರೆ; ಪಾಪದ ಮಾರ್ಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ; ಅವರು ಕೆಟ್ಟದ್ದಕ್ಕೆ ಅಸಹ್ಯಪಡುವುದಿಲ್ಲ.


ಮೋಸಗಾರನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವನು ಬಡವರನ್ನು ಸುಳ್ಳು ಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.


ನಿನೆವೆಯೇ ಯೆಹೋವ ದೇವರಿಗೆ ವಿರೋಧವಾಗಿ ದುರಾಲೋಚನೆ ಮಾಡಿ, ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.


ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ


ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು.


ಏಕೆಂದರೆ ನಿಮ್ಮ ಕೈಗಳು ರಕ್ತದಿಂದಲೂ, ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ. ನಿಮ್ಮ ತುಟಿಗಳು ಸುಳ್ಳನ್ನು ಆಡುತ್ತವೆ. ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.


ಕೇಡು ಮಾಡದಿದ್ದರೆ ದುಷ್ಟರಿಗೆ ನಿದ್ರೆಬಾರದು; ಯಾರನ್ನಾದರೂ ಬೀಳಿಸದಿದ್ದರೆ, ಅವರಿಗೆ ನಿದ್ರೆ ಹತ್ತುವುದಿಲ್ಲ.


ನಿನಗೆ ಶಕ್ತಿಯಿರುವಾಗಲೇ ಇತರರಿಗೆ ಉಪಕಾರಮಾಡು ಒಳಿತು ಮಾಡುವುದನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಡ.


ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು.


ಮರುದಿನ ಯೆಹೂದ್ಯರು ರಹಸ್ಯವಾಗಿ ಕೂಡಿಬಂದು, ಪೌಲನನ್ನು ತಾವು ಕೊಲ್ಲುವವರೆಗೆ ಅನ್ನಪಾನ ಸ್ವೀಕರಿಸುವುದಿಲ್ಲವೆಂದು ಶಪಥಮಾಡಿಕೊಂಡರು.


ಅದಕ್ಕೆ ಯೇಸು, “ಪರಲೋಕದಿಂದ ನಿನಗೆ ಕೊಟ್ಟ ಹೊರತು ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ,” ಎಂದು ಉತ್ತರಕೊಟ್ಟರು.


ನಿಮ್ಮ ಪುತ್ರಪುತ್ರಿಯರು ಬೇರೆ ಜನರಿಗೆ ವಶಪಡಿಸಿರಲು, ನೀವು ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಇರುವಿರಿ. ಆದರೆ ಅವರನ್ನು ಕಾಪಾಡಲು ನಿಮ್ಮ ಕೈಯಿಂದ ಸಾಧ್ಯವಾಗದೆ ಇರುವುದು.


ಆದ್ದರಿಂದ ಈಗ ವಿಚಾರಣೆಯ ಬಗ್ಗೆ ಹೆಚ್ಚಿನ ನಿರ್ದಿಷ್ಟವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ನೆಪದಿಂದ ಪೌಲನನ್ನು ನಿಮ್ಮ ಮುಂದೆ ತರುವಂತೆ ನೀವೂ ನ್ಯಾಯಸಭೆಯೂ ಸಹಸ್ರಾಧಿಪತಿಯನ್ನು ಬೇಡಿಕೊಳ್ಳಿರಿ. ಇಲ್ಲಿಗೆ ಬರುವ ಮೊದಲೇ ಪೌಲನನ್ನು ನಾವು ಕೊಂದುಬಿಡುತ್ತೇವೆ,” ಎಂದರು.


ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ.


ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು.


ಬೆಳಗಾದ ಕೂಡಲೇ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರ ಮತ್ತು ಆಲೋಚನಾ ಸಭೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಯೇಸುವಿಗೆ ಬೇಡಿಹಾಕಿಸಿ ಪಿಲಾತನಿಗೆ ಒಪ್ಪಿಸಿದರು.


ಆಮೇಲೆ ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ, ದುರಾಲೋಚನೆಗಳನ್ನು ಹೇಳಿಕೊಡುವವರು ಈ ಜನರೇ.


ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು;


ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು.


ಆಗ ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಸಕಲ ಪ್ರಾಂತಗಳಲ್ಲಿರುವ ಜನರೊಳಗೆ ಚದರಿ ಬಂದು ವಾಸಿಸುವ ಪ್ರತ್ಯೇಕವಾದ ಜನಾಂಗದ ಜನರಿದ್ದಾರೆ. ಅವರ ರೀತಿನೀತಿಗಳು ಎಲ್ಲಾ ಜನರಿಗಿಂತಲೂ ಬೇರೆಯಾಗಿರುತ್ತವೆ. ಈ ಜನರು ಅರಸನ ನಿಯಮಗಳನ್ನು ಕೈಗೊಳ್ಳುವುದೇ ಇಲ್ಲ. ಆದಕಾರಣ ಇಂಥವರನ್ನು ಸುಮ್ಮನೇ ಬಿಡುವುದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.


ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.


ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ? ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು.


ಭಯಂಕರನು ಇಲ್ಲವಾಗುತ್ತಾನೆ. ಅಪಹಾಸ್ಯ ಮಾಡುವವರು ಕಣ್ಮರೆಯಾಗುತ್ತಾರೆ. ಕೇಡಿಗೆ ಕಾಯುವವರೆಲ್ಲರೂ ನಾಶವಾಗುತ್ತಾರೆ.


ನೀವು ನಿಮ್ಮ ಖಡ್ಗದ ಮೇಲೆ ಭರವಸೆ ಇಟ್ಟು ಅಸಹ್ಯವಾದ ಕೆಲಸಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ನಿಮ್ಮ ನೆರೆಯವನ ಹೆಂಡತಿಯನ್ನು ಕೆಡಿಸುವಿರಿ. ಹೀಗಾದರೆ ನೀವು ದೇಶವನ್ನು ಸ್ವಾಧೀನಪಡಿಸಿಕೊಂಡಿರೇನು?’


“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಆ ದಿನದಲ್ಲಿ ನಿನ್ನ ಮನಸ್ಸಿಗೆ ಕೆಲವು ಆಲೋಚನೆಗಳು ಬರುವುವು ಮತ್ತು ನೀನು ಒಂದು ಕುತಂತ್ರವನ್ನು ಮಾಡುವೆ.


ಇದಾದ ಮೇಲೆ ರಾಜಕುಮಾರನು ಜನರ ಸೊತ್ತನ್ನು ಬಲವಂತವಾಗಿ ತೆಗೆದುಕೊಂಡು ಬಾಧ್ಯತೆಯೊಳಗಿಂದ ಅವರನ್ನು ತಳ್ಳಬಾರದು. ನನ್ನ ಜನರು ತಮ್ಮ ತಮ್ಮ ಬಾಧ್ಯತೆಯನ್ನು ಕಳೆದುಕೊಳ್ಳಬಾರದು. ತಂದೆಯು ತನ್ನ ಸ್ವಂತ ಬಾಧ್ಯತೆಯಿಂದಲೇ ತನ್ನ ಪುತ್ರರಿಗೆ ಸೊತ್ತನ್ನು ಕೊಡಬೇಕು.’ ”


ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.


ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ ” ಎಂಬುದು.


ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ನಿನಗೆ ಕೊಡಿಸುತ್ತೇನೆ,” ಎಂದಳು.


ಅವರು ಹಿಂಸೆಯನ್ನು ಗರ್ಭಧರಿಸಿ, ಕೆಟ್ಟದ್ದನ್ನು ಹೆರುವರು; ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”


ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಆಕಾಶವನ್ನು ಮುಟ್ಟುತ್ತದೆ; ನಿಮ್ಮ ನಂಬಿಗಸ್ತಿಕೆಯು ಮೇಘಗಳವರೆಗೆ ಮುಟ್ಟಿದೆ.


ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ. ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.


ಯೆಹೋವ ದೇವರು ತಮ್ಮ ಪ್ರಜೆಗಳ ಹಿರಿಯರ ಸಂಗಡ, ಮತ್ತು ಅವರ ಅಧಿಪತಿಗಳ ಸಂಗಡ ನ್ಯಾಯತೀರಿಸಲು ಪ್ರವೇಶಿಸುವರು. ಏಕೆಂದರೆ, “ನೀವು ನನ್ನ ದ್ರಾಕ್ಷಿತೋಟವನ್ನು ತಿಂದುಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.


ಅಯ್ಯೋ, ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ, ಹೊಲಕ್ಕೆ ಹೊಲ ಸೇರಿಸುವ ನಿಮಗೆ ಕಷ್ಟ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು