ಮಾರ್ಕ 2:4 - ಕನ್ನಡ ಸಮಕಾಲಿಕ ಅನುವಾದ4 ಜನರ ಗುಂಪಿನ ನಿಮಿತ್ತ ಅವನನ್ನು ಯೇಸುವಿನ ಬಳಿಗೆ ತರಲು ಸಾಧ್ಯವಾಗದೆ ಹೋಯಿತು. ಆದ್ದರಿಂದ ಅವರು ಯೇಸು ಇದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಒಡೆದು ತೆರೆದು, ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಜನರು ಗುಂಪಾಗಿದ್ದದರಿಂದ ಅವರು ಆತನ ಹತ್ತಿರಕ್ಕೆ ಸೇರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ದ್ವಾರಮಾಡಿ ಪಾರ್ಶ್ವವಾಯುರೋಗಿಯು ಮಲಗಿದ್ದ ಹಾಸಿಗೆಯನ್ನು ಇಳಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ಲೊಕಾಂಚ್ಯಾ ಅಡ್ಚನಿಕ್ ಲಾಗುನ್, ತೆಂಕಾ ತ್ಯಾ ಮಾನ್ಸಾಕ್ ಜೆಜುಕ್ಡೆ ಘೆವ್ನ್ ಜಾವ್ಕ್ ಹೊವ್ಕ್ನಾ. ತಸೆ ಮನುನ್, ತೆನಿ ತ್ಯಾ ವಾರ್‍ಯಾನ್ ಮಾರಲ್ಲ್ಯಾ ಮಾನ್ಸಾಕ್ ಘೆವ್ನ್ ಜೆಜು ಹೊತ್ತ್ಯಾ ಘರಾ ವರ್‍ತಿ ಚೆಡ್ಲ್ಯಾನಿ, ಅನಿ ಜೆಜು ಹೊತ್ತ್ಯಾಕ್ಡೆ ತ್ಯಾ ಮಾನ್ಸಾಕ್ ಉತ್ರುಕ್ ಹೊಯ್ಸರ್ಕಿ ವಾಟ್ ಕರುನ್ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್, ಹಾತ್ರಾನಾಸಮೆತ್ ಜೆಜು ಹೊತ್ತ್ಯಾಕ್ಡೆ ಉತರ್‍ಲ್ಯಾನಿ. ಅಧ್ಯಾಯವನ್ನು ನೋಡಿ |