Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:29 - ಕನ್ನಡ ಸಮಕಾಲಿಕ ಅನುವಾದ

29 ಯೇಸು ಉತ್ತರವಾಗಿ ಅವನಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು, ‘ಇಸ್ರಾಯೇಲೇ, ಕೇಳು: ನಮ್ಮ ದೇವರಾದ ಕರ್ತ ಒಬ್ಬರೇ ಕರ್ತನಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅದಕ್ಕೆ ಯೇಸು, “‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

29 ತೆಕಾ ಜೆಜುನ್ ಅಸೆ ಜಬಾಬ್ ದಿಲ್ಯಾನ್ “ಇಸ್ರಾಯೆಲಾಚ್ಯಾ ಲೊಕಾನು ಆಯ್ಕಾ, ಹೆ ಲೈ ಮಹತ್ವಾಚೆ ವಿಶಯ್” ಸಗ್ಳ್ಯಾ ವರ್‍ತಿ ಅದಿಕಾರ್ ಅಸಲ್ಲೊ ಅಮ್ಚೊ ದೆವ್, ತೊ ಎಕ್ಲೊಚ್ ಧನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:29
16 ತಿಳಿವುಗಳ ಹೋಲಿಕೆ  

ಇಸ್ರಾಯೇಲರೇ, ಕೇಳಿರಿ: ದೇವರಾದ ಯೆಹೋವ ನಮ್ಮ ದೇವರು; ಯೆಹೋವ ದೇವರು ಒಬ್ಬರೇ.


ಅದಕ್ಕೆ ಅವನು ಉತ್ತರವಾಗಿ, “ ‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’ ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’” ಎಂದನು.


ಒಂದು ಪಕ್ಷಕ್ಕಿಂತಲೂ ಹೆಚ್ಚಿನವನಾಗಿದ್ದರೆ ಮಾತ್ರ ಮಧ್ಯಸ್ಥನ ಅಗತ್ಯವಿರುವುದು; ದೇವರಾದರೋ ಒಬ್ಬರೇ.


ಸುನ್ನತಿಯವರಿಗೂ ಸುನ್ನತಿಯಿಲ್ಲದವರಿಗೂ ಒಂದೇ ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ.


ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್.


ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ.


ದೇವರು ಒಬ್ಬರೇ ಎಂದು ನೀನು ನಂಬುತ್ತೀ, ಅದು ಒಳ್ಳೆಯದು, ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ.


ದೇವರು ಒಬ್ಬರೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥ ಒಬ್ಬರೇ. ಅವರು ಮನುಷ್ಯರಾಗಿ ಬಂದ ಕ್ರಿಸ್ತ ಯೇಸುವೇ.


ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು.


ಈ ಆಜ್ಞೆಯ ಗುರಿಯು ಪ್ರೀತಿಯೇ ಆಗಿರುತ್ತದೆ. ಶುದ್ಧ ಹೃದಯ, ಒಳ್ಳೆಯ ಮನಸ್ಸಾಕ್ಷಿ ಹಾಗೂ ನಿಷ್ಕಪಟವಾದ ನಂಬಿಕೆಯಿಂದ ಈ ಪ್ರೀತಿಯು ಹುಟ್ಟುತ್ತದೆ.


ಭೂಮಿಯಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿರಿ, ಪರಲೋಕದಲ್ಲಿ ಇರುವವರೇ ನಿಮ್ಮ ತಂದೆ.


“ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.


ಈಗ ಇಸ್ರಾಯೇಲರೇ, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದುಕೊಂಡು, ಅವರನ್ನು ಪ್ರೀತಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ.


ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.


ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು