Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:22 - ಕನ್ನಡ ಸಮಕಾಲಿಕ ಅನುವಾದ

22 ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೇಸು ಹೇಳಿದ್ದೇನಂದರೆ - ನಿಮಗೆ ದೇವರಲ್ಲಿ ನಂಬಿಕೆಯಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

22 ತನ್ನಾ ಜೆಜುನ್ “ದೆವಾ ವರ್‍ತಿ ವಿಶ್ವಾಸ್ ಥವಾ” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:22
10 ತಿಳಿವುಗಳ ಹೋಲಿಕೆ  

ಜನರೇ, ಎಲ್ಲಾ ಕಾಲದಲ್ಲಿಯೂ ದೇವರಲ್ಲಿ ಭರವಸೆ ಇಡಿರಿ. ನಿಮ್ಮ ಹೃದಯವನ್ನು ದೇವರ ಮುಂದೆ ಒಯ್ಯಿರಿ. ದೇವರು ನಮಗೆ ಆಶ್ರಯವಾಗಿದ್ದಾರೆ.


“ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.


ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.


ಎಫ್ರಾಯೀಮಿನ ರಾಜಧಾನಿ ಸಮಾರ್ಯ. ಸಮಾರ್ಯದ ರಾಜಧಾನಿ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ,’ ಎಂದು ಹೇಳುತ್ತಾರೆ.”


ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು.


ದೇವರು ಆಯ್ದುಕೊಂಡವರ ನಂಬಿಕೆಗನುಸಾರವೂ ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಗನುಸಾರವೂ ದೇವರ ಸೇವಕನೂ ಕ್ರಿಸ್ತ ಯೇಸುವಿನ ಅಪೊಸ್ತಲನೂ ಆಗಿರುವ ಪೌಲನೆಂಬ ನನಗೆ


ದೀಕ್ಷಾಸ್ನಾನದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಸಮಾಧಿಯಾದಿರಿ ಮತ್ತು ಕ್ರಿಸ್ತ ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಕ್ರಿಸ್ತ ಯೇಸುವಿನೊಂದಿಗೆ ಮರಣದಿಂದ ಜೀವಂತವಾಗಿ ಎದ್ದು ಬಂದಿರಿ.


ಯೇಸು ಅವರಿಗೆ, “ನಿಮ್ಮ ಅಪೂರ್ಣನಂಬಿಕೆಯೇ ಇದಕ್ಕೆ ಕಾರಣ. ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಆ ಸ್ಥಳಕ್ಕೆ ಹೋಗು’ ಎಂದು ಹೇಳಿದರೆ ಅದು ಹೋಗುವುದು. ಯಾವುದೂ ನಿಮಗೆ ಅಸಾಧ್ಯವಾಗಿರುವುದಿಲ್ಲ.


ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು.


ಅದಕ್ಕೆ ಯೇಸು, “ಬಾ,” ಎಂದರು. ಆಗ ಪೇತ್ರನು ದೋಣಿಯಿಂದ ಇಳಿದು, ಯೇಸುವಿನ ಬಳಿಗೆ ಹೋಗುವುದಕ್ಕಾಗಿ ನೀರಿನ ಮೇಲೆ ನಡೆದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು