ಮಾರ್ಕ 11:13 - ಕನ್ನಡ ಸಮಕಾಲಿಕ ಅನುವಾದ13 ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಮತ್ತು ಎಲೆಬಿಟ್ಟಿದ್ದ ಒಂದು ಅಂಜೂರದ ಮರವನ್ನು ದೂರದಲ್ಲಿ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಅದು ಅಂಜೂರದ ಹಣ್ಣಿನ ಕಾಲವಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ಥೈ ವಾಟೆಚ್ಯಾ ದಂಡೆಕ್ ಎಕ್ ಪಾನಾನಿ ಭರಲ್ಲೆ ಅಂಜುರಾಚೆ ಝಾಡ್ ಹೊತ್ತೆ, ಥೈ ಕಾಯ್ ತರ್ ಗಾವ್ತಾ ಕಾಯ್ಕಿ ಮನುನ್ ಜೆಜು ತ್ಯಾ ಝಾಡಾಕ್ಡೆ ಗೆಲೊ, ಬಗಟ್ಲ್ಯಾರ್ ತ್ಯಾ ಝಾಡಾಕ್ ಪಾನಾ ಸೊಡುನ್ ಎಕ್ ಸೈತ್ ಹನ್ನ್ ನತ್ತೆ,ಖಾಲಿ ಪಾನಾ ಎವ್ಡಿಚ್ ಹೊತ್ತಿ.ಕಶ್ಯಾಕ್ ಮಟ್ಲ್ಯಾರ್ ತಿ ಅಂಜುರಾಚಿ ಹನ್ನಾ ಹೊತಲಿ ದಿಸಾ ನ್ಹಯ್. ಅಧ್ಯಾಯವನ್ನು ನೋಡಿ |